ಭಗ್ನಪ್ರೇಮಿಗೆ ವಾ ಐನ್ ಸಾಇಲ್ ಹೇಳಿದ್ದೇನು!? : ರಾಉಮ್ ಕಥೆಗಳು

ರಾ-ಉಮ್ ಆಶ್ರಮದ ವಿದ್ಯಾರ್ಥಿಗಳು ಆಶ್ರಮದಲ್ಲಿದ್ದು ಕಲಿಯುವಂತೆಯೇ ಹೊರಗೆ ಓಡಾಡಿಯೂ ಕಲಿಯುತ್ತಿದ್ದರು. ಆಶ್ರಮದಿಂದ ಪೇಟೆಗೆ ಹೋಗುವುದು ಎಂದರೆ ಅದೂ ಕಲಿಕೆಯ ಭಾಗವೇ ಆಗಿತ್ತು. ಆಶ್ರಮದ ಹತ್ತಿರವೇ ಇದ್ದ ಪೇಟೆಯಲ್ಲಿ ರಾ-ಉಮ್ ಆಶ್ರಮದ ವಿದ್ಯಾರ್ಥಿಗಳಿಗೆ ವಿಶೇಷ ಮಹತ್ವವಿತ್ತು. ಈ ವಿದ್ಯಾರ್ಥಿಗಳಿಂದ ಅತ್ಯುತ್ತಮ ಆಧ್ಯಾತ್ಮಿಕ ಸಲಹೆಗಳು ದೊರೆಯುತ್ತವೆ ಎಂಬುದು ಸ್ಥಳೀಯರ ನಂಬಿಕೆಯಾಗಿತ್ತು. ಒಂದು ದಿನ ಸಂತೆ ಬೀದಿಯ ಮರದಡಿಯಲ್ಲಿ ಖರೀದಿ ಮುಗಿಸಿ ಕುಳಿತಿದ್ದ ವಾ-ಐನ್-ಸಾಇಲ್ ಬಳಿಗೆ ಯುವಕನೊಬ್ಬ ಬಂದ. ‘ತಾವು ಮಹಾಯೋಗಿನಿಯ ಆಶ್ರಮವಾಸಿಯೇ…?’ ಎಂದು ಕೇಳಿದ. ವಾ-ಐನ್ ತಲೆಯಲ್ಲಾಡಿಸಿ ಹೌದು ಎಂದು […]

ಭಗ್ನಪ್ರೇಮಿಗಳಿಗೆ 10 ಕಿವಿಮಾತು : Be Positive Video

Love is in air… ಎಲ್ಲೆಂದರಲ್ಲಿ ಪ್ರೇಮದ್ದೇ ಮಾತುಕತೆ ಕೇಳಿಬರುತ್ತಿದೆ. ಈ ದಿನವಂತೂ ಇದು ಹತ್ತು ಪಟ್ಟು ಹೆಚ್ಚು. ಹೀಗಿರುವಾಗ ಪ್ರೇಮಿಸಿದಾತ/ಪ್ರೇಮಿಸಿದಾಕೆ ದೊರೆಯಲಿಲ್ಲವೆಂದು ಎದೆ ಬಿರಿದುಕೊಂಡು ಮುಖ ಬಾಡಿಸಿ ಕುಳಿತವರು ಇಂದು ತುಸು ಹೆಚ್ಚೇ ಕಂಡುಬರುತ್ತಾರೆ. ಈ ಭಗ್ನಪ್ರೇಮಿಗಳಲ್ಲಿ ಕೊಂಚ ನೆಮ್ಮದಿ ಮೂಡಿಸಬಹುದಾದ 10 ಕಿವಿಮಾತುಗಳು ಈ ಕಿರು ವಿಡಿಯೋ ಚಿತ್ರಿಕೆಯಲ್ಲಿವೆ.