ಭಾಗವತ ಪುರಾಣ ಹೇಳಿದ ಈ 7 ಭವಿಷ್ಯಗಳು ನಿಜವಾಗಿವೆ!

ಭಾಗವತ ಪುರಾಣದಲ್ಲಿ ಕಲಿಯುಗದ ಬಗ್ಗೆ ಹೇಳಿದ್ದರಲ್ಲಿ 7 ಭವಿಷ್ಯಗಳು ನಿಜವಾಗಿರುವುದನ್ನು ನಾವೇ ಸ್ಪಷ್ಟವಾಗಿ ಅನುಭವಿಸಿದ್ದೇವೆ. ಯಾವುದು ಈ  ಭವಿಷ್ಯಗಳು? ಮುಂದೆ ನೋಡಿ…. 1 ಧರ್ಮ, ಸತ್ಯಸಂಧತೆ, ಶುಚಿತ್ವ, ಸಹನೆ, ಮಾನವೀಯ ಅಂತಃಕರಣ, ಆಯುಷ್ಯ, ದೇಹದ ಶಕ್ತಿ, ನೆನಪಿನ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತದೆ.   ಆಕರ : ಭಾಗವತ | 12.2.1 2 ಜನರ ಅದೃಷ್ಟ ಮತ್ತು ಯೋಗ್ಯತೆಗಳನ್ನು ಅವರ ಸಂಪತ್ತಿನಿಂದ ಅಳೆಯಲಾಗುತ್ತದೆ. ಶ್ರೀಮಂತರು ಮತ್ತು ಅಧಿಕಾರ ಹೊಂದಿದವರು ಮಾತ್ರ ಬಲಶಾಲಿಗಳೆಂದು ಪರಿಗಣಿಸಲ್ಪಟ್ಟು, ನ್ಯಾಯವೂ ಅಂಥವರಿಗೆ ಬೇಗ […]

ನಿಯತಿ : ಅಸ್ತಿತ್ವದ ಯೋಜನೆಯ ಕಾರ್ಯನಿರ್ವಾಹಕಿ

‘ಈ ಸೃಷ್ಟಿಯೊಂದು ಕಾಸ್ಮಿಕ್ ಕಾನ್ಸ್‍ಪಿರೆಸಿ – ಅಸ್ತಿತ್ವದ ಪಿತೂರಿ’ ಅನ್ನುತ್ತಾರೆ ಓಶೋ ರಜನೀಶ್. ಎಲ್ಲವನ್ನೂ ಅದು ಮೊದಲೇ ನಿರ್ಧರಿಸಿಯಾಗಿರುತ್ತದೆ. ತನ್ನ ನಡೆಯನ್ನೇ ಅದು ನಡೆಯುತ್ತಲೂ ಇರುತ್ತದೆ. ಸೃಷ್ಟಿಯ ಎಲ್ಲ ಜಡ ಚೇತನಗಳನ್ನು ಅದರ ಈಡೇರಿಕೆಗಾಗಿ ಬಳಸಿಕೊಳ್ಳುತ್ತದೆ. ಅಸ್ತಿತ್ವದ ಈ ಯೋಜನೆಯ ಕಾರ್ಯನಿರ್ವಾಹಕಿಯೇ `ನಿಯತಿ’. ನಿಯತಿಯು `ವಿಧಿ’ಯ ಒಡತಿ.  ~ಆನಂದಪೂರ್ಣ ಸೃಷ್ಟಿಯ ಯಾವುದೇ ಜೀವಿ ಪರಿಪೂರ್ಣ ಸ್ವಾತಂತ್ರ್ಯ ಹೊಂದಿರುವುದಿಲ್ಲ. ರಂಗಮಂಚದ ಮೇಲೆ ನಟರು ಎಷ್ಟೇ ಸ್ವತಂತ್ರವಾಗಿ ಪಾತ್ರ ನಿಭಾಯಿಸುತ್ತಿದ್ದರೂ ಅವರ ಪಾತ್ರ ಹಾಗೂ ಕಥನಗಳು ಸೂತ್ರಧಾರನ ನಿರ್ದೇಶನಕ್ಕೆ ತಕ್ಕಂತೆ […]