ಭಾನುವಾರದ ವಿಶೇಷ :  ಸೂರ್ಯಕವಚ ಸ್ತೋತ್ರ, ಕನ್ನಡ ಅರ್ಥ ಸಹಿತ

ಆದಿತ್ಯ, ಭಾನು ಅಥವಾ ಸೂರ್ಯ ಭಾನುವಾರದ ಗ್ರಹದೇವತೆ. ಈ ದಿನ ಸೂರ್ಯಕವಚ ಸ್ತೋತ್ರಪಠಣ ಮಾಡುವುದು ಉತ್ತಮ ಎಂದು ಹೇಳಲಾಗಿದೆ…. || ಶ್ರೀ ಗಣೇಶಾಯ ನಮಃ || ಯಾಜ್ಞವಲ್ಕ್ಯ ಉವಾಚ:- ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ | ಶರೀರಾರೋಗ್ಯದಂ ದಿವ್ಯಂ ಸರ್ವ ಸೌಭಾಗ್ಯದಾಯಕಮ್ ||1|| ಭಾವಾರ್ಥ: ಯಾಜ್ಞವಲ್ಕ್ಯರು ಹೇಳಿದರು; ಎಲೈ ಮುನಿಪುಂಗವನೇ! ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯ ಕವಚವನ್ನು ನಿನಗೆ ಅರುಹುವವನಾಗಿದ್ದೇನೆ. ಕೇಳುವವನಾಗು. ದೇದೀಪ್ಯಮಾನ ಮುಕುಟಂ ಸ್ಫುರನ್ಮಕರ ಕುಂಡಲಮ್ | […]

ಪ್ರೇಮ, ಪ್ರಣಯ, ಪ್ರಾರ್ಥನೆ ಇತ್ಯಾದಿ…. ~ ಒಝ್ಕಾಯ ಸೂಫಿ ಕಾವ್ಯ

ಮೂಲ : ಸೂಫಿ ಕವಿ ನಜತ್ ಒಝ್ಕಾಯ  | ಕನ್ನಡಕ್ಕೆ : ಚಿದಂಬರ ನರೇಂದ್ರ ನನ್ನ ಹತ್ತಿರ ಕೂತಿರುವ ಈ ಮನುಷ್ಯ ಎಷ್ಟು ಮಾತನಾಡುತ್ತಾನೆ ? ಇವನ ಬಾಯಿ ಮುಚ್ಚಿಸಬೇಕಲ್ಲ… ಬಹುತೇಕರಿಗೆ ಮೌನ, ದಿಗಿಲು ತಪ್ಪಿಸಿಕೊಳ್ಳಲು, ಇಲ್ಲದುದರ ಬಗ್ಗೆಯೂ ವ್ಯಾಖ್ಯಾನ. ಧ್ವನಿಯ ಬಗ್ಗೆ ಅಕ್ಕರೆ ಏನಿಲ್ಲ ಮೌನದ ಬಗ್ಗೆ ಮಾತ್ರ ಆತಂಕ. ಕಾರಣ? ಅದೇ, ಮೌನದ ಸಲಿಗೆ ಸಲಿಗೆ ಎಂದರೆ ಎಂಥೆಂಥವರೂ ತಬ್ಬಿಬ್ಬು ಮಾತು ಬಟ್ಚೆ, ಮೌನ ಬೆತ್ತಲು ಪ್ರಾರ್ಥನೆಯಲ್ಲಿ ಎಂಥ ಸಂಕೋಚ? ಕಳಚಿ, ಶರಣಾಗಿ. The […]

ಧ್ಯಾನ ಮಾಡಲು ಕಲಿಯಿರಿ : ವೀಕೆಂಡ್ ಮೆಡಿಟೇಶನ್

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪ್ರತಿ ದಿನ ಮಾಡುವ ಧ್ಯಾನ ವಿಧಾನಗಳು ಮತ್ತು ವಾರಾಂತ್ಯದ ಧ್ಯಾನ ವಿಧಾನದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪ್ರತಿದಿನ ಮಾಡುವ ಧ್ಯಾನ ಯಾವುದಾದರೊಂದು ನಿರ್ದಿಷ್ಟ ಉದ್ದೇಶ ಮತ್ತು ಬಗೆಯನ್ನು ಹೊಂದಿರುತ್ತದೆ. ವಾರಾಂತ್ಯದ ಧ್ಯಾನ ಮೂರು ತಂತ್ರಗಳ ಮಿಶ್ರಣ ~ ಚಿತ್ಕಲಾ ಭಾನುವಾರ ಅಂದರೆ ಅದೊಂದು ಬಗೆಯ ಸೋಮಾರಿತನದ ದಿನ. ಅದು ರಜಾ ದಿನವಾದ್ದರಿಂದ ಹೊತ್ತುಹೊತ್ತಿನ ಧಾವಂತ ಇರುವುದಿಲ್ಲ. ಹಾಗೆಂದೇ ನಿಧಾನವಾಗಿ ಏಳುವುದನ್ನು ರೂಢಿ ಮಾಡಿಕೊಂಡಿರುತ್ತೀರಿ. ನಿಮ್ಮ ನಿದ್ರೆ ಮುಗಿದಿದ್ದರೂ ಹಾಸಿಗೆಯ ಮೇಲೆ ಹೊರಳುತ್ತಲಾದರೂ […]