ಪ್ರಾಚೀನ ಪ್ರೇಮ ಕಥೆಗಳು : ವಾಚಸ್ಪತಿ ಮತ್ತು ಭಾಮತಿ

ಅದ್ವೈತ ವೇದಾಂತಿ, ಮಹಾ ಪಂಡಿತ ವಾಚಸ್ಪತಿ ಮಿಶ್ರ ತನ್ನ ಬ್ರಹ್ಮಸೂತ್ರ ಭಾಷ್ಯಕ್ಕೆ ‘ಭಾಮತೀ’ ಎಂದು ಹೆಸರಿಟ್ಟಿದ್ದೇಕೆ ಗೊತ್ತೆ?  ವಾಚಸ್ಪತಿ ಮಿಶ್ರ ಪ್ರಕಾಂಡ ಪಂಡಿತ. ಅದ್ವೈತ ವೇದಾಂತಿ. ಅಧ್ಯಯನ, ಬರಹ ಮತ್ತು ಸಾಧನೆಗಳೇ ಅವನ ಪ್ರಪಂಚ. ಒಮ್ಮೆ ಈತ ಆದಿ ಶಂಕರರ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆಯಬೇಕೆಂದು ನಿರ್ಧರಿಸಿ ಕುಳಿತ. ಹೀಗೆ ಕುಳಿತನೆಂದರೆ ಅದೊಂದು ಬಗೆಯ ತಪಸ್ಸು. ಅದು ಬರೆದು ಮುಗಿಯುವವರೆಗೂ ಆತನಿಗೆ ಬೇರಾವ ಯೋಚನೆ ಬರಲು ಸಾಧ್ಯವೇ ಇಲ್ಲ. ಅಷ್ಟು ತನ್ಮಯತೆ. ಮಗ ಭಾಷ್ಯ ಬರೆಯಲು ಕುಳಿತ, ಇನ್ನಿವನು […]