ಹೋರಾಡುವ ಕಲೆ ಬಹಳ ಬಲ್ಲೆ! : ಸೂಫಿ ಮಕ್’ಫಿ ಪದ್ಯ

ಮೂಲ : ಸೂಫಿ ಕವಿ ಜೆಬುನ್ನಿಸಾ (ಮಕ್’ಫಿ) | ಭಾವಾನುವಾದ : ಚೇತನಾ ತೀರ್ಥಹಳ್ಳಿ ಭಾವಿಸಲಿ ಜನ ನನ್ನನು, ದೂಳಾಗಿ ನೆಲ ಕಚ್ಚಿದಂತೆ, ಅಪಮಾನದಲಿ ಮುಳುಗಿಹೋದಂತೆ; ನಾನೇಕೆ ತಲೆ ತಗ್ಗಿಸಲಿ, ಮುಖದಲ್ಲಿ ಲಜ್ಜೆ ಹೊತ್ತು? ಜಗದ ಮಾನಾಪಮಾನಗಳ ಗೊಡವೆ ಇಲ್ಲ ನನಗೆ! ಲೋಕ ದುಃಖದ ಭಾರ ಹೊರೆ ಹೊರಿಸಿದಾಗಲೂ ಕಣ್ಣಾಲಿ ತುಳುಕಿಸದೆ, ಘನತೆಯಲಿ ನಡೆದವಳು; ಹುಬ್ಬು ಕೊಂಕಿಸದವಳು, ಯಾವ ಯಾತನೆಗೂ. ಕಾಲವೆಷ್ಟಾಯಿತೋ ನೋವು ಎದೆಗೊಳವ ತುಂಬಿ; ಈಜಲಾಗದೆ ಸೋಲಲಾರೆ ನಾನು, ಹೋರಾಡುವ ಕಲೆ ಬಹಳ ಬಲ್ಲೆ! ಕಠೋರ […]

ಚಿತ್ತ ಮತ್ತಾಗುವುದೇ ಅಧ್ಯಾತ್ಮವಿಲ್ಲಿ…. : ಒಂದು ಸೂಫಿ ಪದ್ಯ

ಮೂಲ : ಮಕ್‌ಫೀ (ಜೆಬುನ್ನಿಸಾ) | ಕನ್ನಡಕ್ಕೆ: ಸುನೈಫ್ ಕಗ್ಗತ್ತಲ ಪ್ರೇಮ ಪಥವಿದು, ನಡೆದಷ್ಟೂ ಮುಗಿಯದು ದಾರಿಗುಂಟ ಹೆಣೆದ ಬಲೆಗಳು! ಆದರೇನಂತೆ, ಕಾಳು ತುಂಬಿದ ಬಲೆಗೆ ಪಾರಿವಾಳಗಳು ಬೀಳುವಂತೆ ಮುನ್ನುಗ್ಗುತ್ತಲೇ ಇದ್ದಾರೆ ಪಥಿಕರು. ಹೇಳು, ಅದಾವ ಧಾನ್ಯ ಪಾರಿವಾಳವ ಸೆಳೆಯಿತು? ಗುಳಿಕೆನ್ನೆಯ ಮೇಲಿನ ಮಚ್ಚೆ ಅದು. ಹೇಳು, ಪ್ರೇಮ ಬಲೆಯ ನೇಯ್ದ ವಸ್ತು ಅದಾವುದು? ಸಂಗಾತಿಯ ಕುಣಿದಾಡುವ ಮುಂಗುರುಳು. ಪ್ರೇಮ ಸುಗ್ಗಿ ನಡೆಯುವುದಿಲ್ಲಿ ಚಿತ್ತ ಮತ್ತಾಗುವುದೇ ಅಧ್ಯಾತ್ಮವಿಲ್ಲಿ ಸಾಕಿ ಮಧುಪಾತ್ರೆಯ ದಾಟಿಸಿದ ಕ್ಷಣ ನಿನ್ನ ಪಾಲಿನ ಮದಿರೆಯ […]