‘ಸಮತೋಲನವೇ ಬುದ್ಧನ ಮಧ್ಯಮ ಮಾರ್ಗ’ : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 2.4

ಅತಿರೇಕಗಳನ್ನು ಆಯ್ಕೆ ಮಾಡಿಕೊಂಡಾಗ ಎರಡರಲ್ಲೂ ಸೋಲುತ್ತೀರಿ. ಆಯ್ಕೆಯ ಆಸೆ ಬಿಟ್ಟಾಗಲೇ ಗೆಲುವು ಸಾಧಿಸುತ್ತೀರಿ. ಸಮತೋಲನ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಈ ಸಮತೋಲನವೇ ಬುದ್ಧನ ‘ಮಧ್ಯಮ ಮಾರ್ಗ’ ~ ಓಶೋ ರಜನೀಶ್ ಹಾದಿ ಪರಿಪೂರ್ಣವಾಗಿದೆ, ಅಪಾರ ಬಯಲಿನಂತೆ. ಒಂದಿನಿತೂ ಹೆಚ್ಚು – ಕಡಿಮೆಯಿಲ್ಲ. ಹೌದು, ಸ್ವೀಕಾರ ಮತ್ತು ನಿರಾಕರಣೆಗಳ ನಡುವಿನ ನಮ್ಮ ಆಯ್ಕೆ ವಿಷಯಗಳ ನೈಜ ಸ್ವಭಾವದಿಂದ ನಮ್ಮನ್ನು ವಿಮುಖರನ್ನಾಗಿಸಿದೆ.  ಸ್ವೀಕಾರ, ನಿರಾಕರಣೆಗಳ ಗೊಂದಲದಲ್ಲಿ ಬಿದ್ದೆವೆಂದರೆ ವಿಷಯದ ನಿಜ ಸ್ವಭಾವ ಮರೆಯಾಗುತ್ತದೆ, ಆಗಲೇ ನಿಮ್ಮ ವಿಚಾರಗಳು, ಸಿದ್ಧಾಂತಗಳು, ಪೂರ್ವಾಗ್ರಹಗಳು ನಿಮ್ಮ ತಿಳುವಳಿಕೆಗೆ ಬಣ್ಣ ಹಚ್ಚಲು ಶುರು ಮಾಡುತ್ತವೆ. ಅಕಸ್ಮಾತ್ ನಿಮ್ಮ ಕಣ್ಣುಗಳಿಗೆ ತಿಳುವಳಿಕೆ ಇರದೇ ಹೋಗಿದ್ದರೆ ಅವು ಸುಮ್ಮನೇ ನೋಡುತ್ತಿದ್ದವು ಯಾವುದನ್ನೂ ಹೊಗಳುತ್ತಿರಲಿಲ್ಲ […]