ಮನಸ್ಸು ಮತ್ತು ಬುದ್ಧಿ ; ನಮ್ಮೊಳಗಿನ ಅಂತರ್ಯುದ್ಧ…

ಮನಸ್ಸಿನ ಮಾತು ಎಂಬುದು ಎಂದಿಗೂ ಇರುವುದಿಲ್ಲ. ನಮ್ಮ ಮೆದುಳೇ ನಮ್ಮ ಮನಸ್ಸು. ಇದನ್ನು ನಾವು ಮೊದಲು ಅರಿಯಬೇಕು ~ ಪ್ರಣವ ಚೈತನ್ಯ  | ಕಲಿಕೆಯ ಟಿಪ್ಪಣಿಗಳು ಪ್ರತಿಯೊಬ್ಬರಿಗೂ ಯಾವುದಾದರೂ ವಿಷಯದ ಬಗ್ಗೆ ಯೋಚಿಸುತ್ತಿರುವಾಗ ಎರಡು ರೀತಿಯ ಆಲೋಚನೆಗಳು ಬಂದೇ ಬರುತ್ತವೆ. ಒಂದು ಒಳ್ಳೆಯ ಯೋಚನೆ, ಇನ್ನೊಂದು ಕೆಟ್ಟ ಯೋಚನೆ. ನಮ್ಮೊಳಗೆ ಒಮ್ಮೊಮ್ಮೆ ನಮ್ಮದೇ ಇನ್ನೊಂದು ದ್ವನಿ ಮೂಡುತ್ತದೆ. ಎಲ್ಲರಿಗೂ ಈ ಅನುಭವವಾಗಿರುತ್ತದೆ. ಅದು ಇಂತಹದನ್ನು ಮಾಡಬೇಡ, ಈ ಕೆಲಸ ಮಾಡಲು ಬಹಳ ಕಷ್ಟ ಎಂದು ನಮಗೆ ಹೇಳುತ್ತದೆ. […]

ಬೆಳಗಿನ ಪ್ರಾರ್ಥನೆ : ಮನಸ್ಸು ಮಂಗಳಕರವಾಗಿರಲಿ

ಯತ್ಪ್ರಜ್ಞಾನಮುತ ಚೇತೋ ಧೃತಿಶ್ಚ ಯಜ್ಜ್ಯೋತಿರಂತರಮೃತಂ ಪ್ರಜಾಸು| ಯಸ್ಮಾನ್ನ ಋತೇ ಕಿಂಚನ ಕರ್ಮ ಕ್ರಿಯತೇ ತನ್ಮೇ ಮನಃ ಶಿವಸಂಕಲ್ಪಮಸ್ತು|| ಅರ್ಥ: ಯಾವುದು ತಿಳುವಳಿಕೆಯೋ ಮತ್ತು ಆಲೋಚನೆಯ ಶಕ್ತಿಯೋ, ಯಾವುದು ದೃಢತೆಯಿಂದ ಕೂಡಿದೆಯೋ, ಯಾವುದು ಜನರೊಳಗೆ ಎಂದೂ ಅಳಿಯದ ಬೆಳಕಾಗಿರುವುದೋ, ಯಾವುದನ್ನು ಬಿಟ್ಟು ಯಾರೂ ಯಾವ ಕೆಲಸವನ್ನೂ ಮಾಡಲಾರರೊ ಆ ನನ್ನ ಮನಸ್ಸು ಮಂಗಳಕರವಾದ ಸಂಕಲ್ಪದಿಂದ ಕೂಡಿರಲಿ. ಎಲ್ಲರಿಗೂ ಸದಾ ಸನ್ಮಂಗಳವನ್ನೆ ಬಯಸಲಿ.  ಯೇ ಮೇ ಹೃದಯಂ ಯೇ ಚ ದೇವಾ ಯೇ ಅಂತರಿಕ್ಷಂ ಬಹುಧಾ ಕಲ್ಪಯಂತಿ| ಯೇ ಶ್ರೋತ್ರಂ […]

ಮನಸ್ಸನ್ನು ನಿಯಂತ್ರಿಸುವ ಮೊದಲು ಅದನ್ನು ಅರಿಯಿರಿ : ಸಾಮವೇದ

“ಮೊದಲು ನಿಮ್ಮ ಮನಸ್ಸಿನ ಸಾಮರ್ಥ್ಯವನ್ನು ಅರಿಯಿರಿ. ಆಮೇಲೆ ಅದನ್ನು ಪಳಗಿಸುವ ಪ್ರಯತ್ನ ಮಾಡಿ” ಅನ್ನುತ್ತದೆ ಸಾಮವೇದ.  ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲವರಷ್ಟೆ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದೆ ಹೋದರೆ ಅದು ನಮ್ಮನ್ನು ತನ್ನ ಅಡಿಯಾಳಾಗಿ ಮಾಡಿಕೊಳ್ಳುತ್ತದೆ. ಹಾಗೇನಾದರೂ ಆದರೆ ನಾವು ಚಂಚಲಚಿತ್ತರಾಗಿಬಿಡುತ್ತೇವೆ. ಹೀಗಾದಾಗ ನಾವು ಯಾವುದೇ ವಿಷಯದಲ್ಲಿ ದೃಢನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ದೃಢ ನಿರ್ಧಾರ ತಾಳದ ಹೊರತು ಯಾವುದೇ ಕೆಲಸ ಸುಸೂತ್ರವಾಗಿ ನಡೆಯುವುದೂ ಸಾಧ್ಯವಿಲ್ಲ.  ಆದರೆ ಈ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು […]

ಮನೋನಿಯಂತ್ರಣವಿದ್ದರೆ ಮಾತ್ರ ಕಾರ್ಯಸಿದ್ಧಿ : ಸುಭಾಷಿತ

ಮನಸೋ ನಿಗ್ರಹಾಯತ್ತಮಭಯಂ ಸರ್ವಯೋಗಿನಾಮ್ | ದುಃಖಕ್ಷಯಃ ಪ್ರಬೋಧಶ್ಚಾಪ್ಯಕ್ಷಯಾ ಶಾಂತಿರೇವ ಚ || ಮಾಂಡೂಕ್ಯಕಾರಿಕಾ || “ಎಲ್ಲ ಯೋಗಿಗಳ ಲಕ್ಷಣವಾದ ಅಭಯವು ಅವರ ಮೋನಿಗ್ರಹದ ಫಲ. ಎಲ್ಲ ಶೋಕದ ನಾಶಕ್ಕೂ ಆತ್ಮಜ್ಞಾನಪ್ರಾಪ್ತಿಗೂ ಶಾಶ್ವತಶಾಂತಿಗೂ ಕಾರಣವಾಗಬಲ್ಲ ಏಕೈಕ ಸಾಧನವೆಂದರೆ ಮನಸ್ಸಿನ ನಿಗ್ರಹವೇ” ಎನ್ನುತ್ತದೆ ಮಾಂಡೂಕ್ಯಕಾರಿಕಾದ ಒಂದು ಸುಭಾಷಿತ. ನಾವು ಬಹುತೇಕರು ಮನಸ್ಸಿನ ಗುಲಾಮರಾಗಿದ್ದೇವೆ. ಈ ಮನಸ್ಸಾದರೂ ಹುಚ್ಚುಕುದುರೆಯಂತೆ ಕಡಿವಾಣವಿಲ್ಲದೆ ನಾಗಾಲೋಟ ನಡೆಸಿರುತ್ತದೆ. ಅದರ ವೇಗಕ್ಕೆ, ಅದು ಚಲಿಸುವ ದಿಕ್ಕುಗಳಿಗೆ ನಮ್ಮನ್ನು ನಾವು ಹೊಂದಿಸಿಕೊಳ್ಳಲಾಗದೆ ಹೈರಾಣಾಗಿಬಿಡುತ್ತೇವೆ. ನಾವು ಗೊಂದಲಕ್ಕೆ ಒಳಗಾಗುವುದು, ತಪ್ಪು […]

ದೊರೆ ‘ವೂ’ ಮನಸ್ಸನ್ನು ಶಾಂತಗೊಳಿಸಿದ ಬೋಧಿಧರ್ಮ

ಚೀನಾದ ದೊರೆ ವೂ, ಬೌದ್ಧ ಧರ್ಮ ಪ್ರಚಾರಕ್ಕಾಗಿ ದಕ್ಷಿಣ ಭಾರತದಿಂದ ಆಗಮಿಸಿದ್ದ ಬೋಧಿಧರ್ಮನ ಬಗ್ಗೆ ಸಾಕಷ್ಟು ಕೇಳಿದ್ದ. ಆಗ ಚೀನಾದಲ್ಲಿ ಸುಪ್ರಸಿದ್ಧನಾಗಿದ್ದ ಅಧ್ಯಾತ್ಮ ಗುರು ಹ್ಯೊ ಕಿ ಕೂಡಾ ಬೋಧಿಧರ್ಮನಿಂದ ಜ್ಞಾನ ಪಡೆದಿದ್ದ. ಹೀಗಾಗಿ ವೂ ಬೋಧಿಧರ್ಮನನ್ನು ಭೇಟಿ ಮಾಡಿ ತನ್ನ ಅಶಾಂತಮನಸ್ಕತೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ. ಅವರಿಬ್ಬರ ನಡುವೆ ನಡೆದ ಸಂಭಾಷಣೆ ಹೀಗಿದೆ: ವೂ : ಬೋಧಿಧರ್ಮ, ನನ್ನ ಮನಸ್ಸು ತುಂಬಾ ಅಶಾಂತವಾಗಿದೆ. ದಯವಿಟ್ಟು ನನ್ನ ಮನಸ್ಸನ್ನು ಶಾಂತಗೊಳಿಸು ಬೋಧಿಧರ್ಮ : ಆಗಲಿ. ನೀನು ಬೆಳಗಿನ […]

ಅದನ್ನೇ ಹೊರಹಾಕು! ~ ಒಂದು ಝೆನ್ ಕಥೆ

ಮಾಸ್ಟರ್ ಜೋಶು ಝೆನ್ ಕಲಿಯಲು ಶುರು ಮಾಡಿದ್ದು ಅರವತ್ತನೇ ವಯಸ್ಸಿನಲ್ಲಿ. ಜ್ಞಾನೋದಯವಾದಾಗ ಅವನಿಗೆ ಬರೊಬ್ಬರಿ ಎಂಭತ್ತು ವರ್ಷ ವಯಸ್ಸು. ತನ್ನ ನೂರಾ ಇಪ್ಪತ್ತನೇ ವಯಸ್ಸಿನವರೆಗೆ ಆತ ಝೆನ್ ಪಾಠ ಮಾಡಿದ. ಒಮ್ಮೆ ಒಬ್ಬ ಶಿಷ್ಯ, ಜೋಶುನಿಗೆ ಪ್ರಶ್ನೆ ಮಾಡಿದ. “ ನನ್ನ ಮನಸ್ಸು ಖಾಲಿಯಾಗಿದೆಯಲ್ಲ, ನಾನು ಏನು ತಾನೇ ಮಾಡಲಿ ಇನ್ನು? “ “ಮನಸ್ಸಲ್ಲಿರೋದನ್ನ ಹೊರ ಹಾಕು” ಜೋಶು ಉತ್ತರಿಸಿದ. “ ಆದರೆ ನನ್ನ ಮನಸ್ಸು ಖಾಲಿ, ಏನನ್ನ ಹೊರ ಹಾಕಲಿ?” ಶಿಷ್ಯ ಮತ್ತೆ ಪ್ರಶ್ನೆ ಮಾಡಿದ. […]

ಬದುಕು ವೈರುಧ್ಯಗಳ ಮೊತ್ತ : ಓಶೋ ಚಿಂತನೆ

ಯೋಚಿಸುವುದು ಎಂದರೆ ಲೋಲಕದ ಆವೇಗದ ಹಾಗೆ. ಯೋಚಿಸಲು ಆರಂಭಿಸಿದ ಕೂಡಲೇ ಮನಸ್ಸು ವಿರುದ್ಧ ದಿಕ್ಕಿಗೆ ವ್ಯವಸ್ಥೆಗೊಳಿಸಲು ಆರಂಭಿಸುತ್ತದೆ. ಆದ್ದರಿಂದಲೇ ಗೆಳೆಯರು ಮಾತ್ರವೇ ಶತ್ರುಗಳಾಗಬಲ್ಲರು. ಮೊದಲು ಗೆಳೆಯರಾಗಿಲ್ಲದಿದ್ದರೆ, ಇದ್ದಕ್ಕಿದ್ದ ಹಾಗೆ ಶತ್ರುವಾಗಲು ಸಾಧ್ಯವಿಲ್ಲ ~ ಓಶೋ ರಜನೀಶ್ ಮನಸ್ಸಿನ ಸಮತೋಲನ ಕಾಯ್ದುಕೊಳ್ಳುವುದು ನಮಗೆ ಅತ್ಯಂತ ಕಷ್ಟವೆಂದೇ ತೋರುತ್ತದೆ. ಒಂದು ವಿಚಾರದಿಂದ ಇನ್ನೊಂದು ವಿಚಾರಕ್ಕೆ ಸಾಗುವುದು ಅತ್ಯಂತ ಸುಲಭ. ಒಂದು ಧ್ರುವದಿಂದ ಇನ್ನೊಂದಕ್ಕೆ ಸಾಗುವುದು ಮನಸ್ಸಿನ ಲಕ್ಷಣ. ನೀವು ಸಮತೋಲನದಿಂದಿದ್ದರೆ, ಮನಸ್ಸು ಕಣ್ಮರೆಯಾಗುತ್ತದೆ. ನೀವು ಅಸಮತೋಲನಗೊಂಡಾಗ ಅದು ಅಲ್ಲಿರುತ್ತದೆ, ಉದಾಹರಣೆಗೆ […]