ತಾವೋ ತಿಳಿವು #75 ~ ಸಮಸ್ತರೂ ಹುಲ್ಲಿನ ನಾಯಿಗಳು

ಸ್ವರ್ಗ ಮತ್ತು ಧರೆ ಮನುಷ್ಯತ್ವದಿಂದ ಮುಕ್ತವಾಗಿವೆ. ಅವುಗಳ ಕಣ್ಣಿನಲ್ಲಿ ಸಮಸ್ತರೂ ಹುಲ್ಲಿನ ನಾಯಿಗಳು* ಹಾಗೆಯೇ ಸಂತರಿಗೂ ಮನುಷ್ಯತ್ವ ಎಂಬುದಿಲ್ಲ. ಅವರಿಗೂ ಎಲ್ಲ ಹುಲ್ಲಿನ ನಾಯಿಗಳಂತಯೇ.* ತಾವೋ ಬಲೂನಿನಂತೆ ಖಾಲಿ ಹೌದು ಆದರೆ ಅನಂತ ಸಾಧ್ಯತೆಗಳು, ಏರಿದಂತೆಲ್ಲ ಹಿಗ್ಗುತ್ತದೆ, ಮಾತು ಚುಚ್ಚಿದಾಗಲೆಲ್ಲ ಅಪ್ಪಚ್ಚಿ. ಮಾತಿನ ಮನೆಯೆದುರು ಮಸಣದ ತೋಟ, ತಾವೋಗೆ ಶರಣಾಗಿ, ಶರಣು ಎನ್ನಿ. *ಬಲಿ ಕೊಡವುದಕ್ಕಾಗಿ ತಯಾರಿಸಲಾಗುವ ಹುಲ್ಲಿನ ಬೊಂಬೆಗಳು. ವಿಧಿ ಪೂರ್ಣವಾದ ನಂತರ ತುಳಿದಾಡುತ್ತಾರೆ, ಒಲೆಗೆ ಹಾಕುತ್ತಾರೆ.

ನಿಂತು ನಾರುವಿಕೆಯ ಅಪಾಯಗಳು : ಸ್ವಾಮಿ ರಂಗನಾಥಾನಂದ

ಯಾರು ಸಂಪೂರ್ಣವಾಗಿ ಇಂದ್ರಿಯ ಜಗತ್ತಿನಲ್ಲಿ ಮುಳುಗಿಹೋಗಿದ್ದಾರೋ ಅವರು ಸ್ವಲ್ಪವೂ ಶ್ರಮಿಸುವುದಿಲ್ಲ. ವೇದಾಂತವು ಅದನ್ನು ಆಧ್ಯಾತ್ಮಿಕ ಅಂಧತೆಯ ಸ್ಥಿತಿ ಎಂದು ಕರೆಯುತ್ತದೆ. ಅಂಥವರು ಕತ್ತಲೆಯಲ್ಲಿ ಬಾಳುತ್ತಾರೆ. ಅದರಲ್ಲೇ ಸುಖ ಕಾಣುತ್ತಾರೆ. ಬಂಧನದಲ್ಲಿದ್ದರೂ ಅದನ್ನೇ ಅನುಕೂಲವೆಂದು ಭಾವಿಸುತ್ತಾರೆ. ಕಠೋಪನಿಷತ್ತು ಇಂಥವರಿಗಾಗಿಯೇ “ಉತ್ಥಿಷ್ಠತ ಜಾಗ್ರತ!! ಪ್ರಾಪ್ಯವರಾನ್ನಿಬೋಧತ” ಎಂದು ಕರೆ ನೀಡುತ್ತದೆ. ಮಾನವೇತರ ಜೀವಿಗಳಿಗೆ ನಿಂತು ನಾರುವಿಕೆಯ ಅಪಾಯಗಳ ಅರಿವು ಇರುವುದಿಲ್ಲ. ತಾವಾಗಿಯೇ ಈ ಸಮಸ್ಯೆಯನ್ನು ರೂಪಿಸಿಕೊಳ್ಳುವ ಮೂಲಭೂತವಾದ ಶಕ್ತಿಯಾಗಲೀ ಅದಕ್ಕೆ ಪರಿಹಾರವನ್ನು ಕಂಡುಹಿಡಿಯುವ ಶಕ್ತಿಯಾಗಲೀ ಅವಕ್ಕೆ ಇಲ್ಲ. ಅವು ಈ ವಿಷಯದಲ್ಲಿ […]