ಮನುಷ್ಯ ಪ್ರಾಣಿಯೇ, ಮೃಗವೇ? ಎರಡರ ನಡುವೆ ವ್ಯತ್ಯಾಸವೇನು? : ಓಶೋ, ‘ದ ಬುಕ್ ಆಫ್ ಮ್ಯಾನ್’ #4

ಒಂದು ನಾಯಿ, ಅದು ನಾಯಿಯಾಗಿಯೇ ಹುಟ್ಟುತ್ತದೆ, ನಾಯಿಯಾಗೇ ಬದುಕುತ್ತದೆ, ನಾಯಿಯಾಗಿಯೇ ಸಾಯುತ್ತದೆ. ಆದರೆ ಮನುಷ್ಯನು ಹಾಗಲ್ಲ, ಮನುಷ್ಯನು ಶಾಂತಿಯನ್ನು ಸೂಚಿಸುವ ಬುದ್ಧ ಬೇಕಾದರು ಆಗಬಲ್ಲ, ರಕ್ತಪಾತ ನಡೆಸಿದ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡ ಆಗಬಲ್ಲ. ಮನುಷ್ಯನಿಗೆ ಇವೆರಡರಲ್ಲಿ ಯಾವುದು ಬೇಕಾದರೂ ಆಗುವ ಸಾಮರ್ಥ್ಯವಿದೆ. ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಎಲ್ಲಾದರು ಸಿಗಲು ಸಾದ್ಯವೆ? ~ ಓಶೋ ರಜನೀಶ್ | ದ ಬುಕ್ ಆಫ್ ಮ್ಯಾನ್ ; ಕನ್ನಡ ನಿರೂಪಣೆ : ಪ್ರಣವ ಚೈತನ್ಯ ನಮ್ಮ ವಿಜ್ಞಾನವೇ ಹೇಳುವಂತೆ ಮನಯಷ್ಯನು ಒಂದು ಜಾತಿಯ […]

ಯಾರು ಯಾರಿಗೆ ಗುಲಾಮರು? : ಸೂಫಿ ಕಥೆ

ಒಂದು ದಿನ ಸೂಫಿ ಗುರು ಜುನೈದ್ ತನ್ನ ಶಿಷ್ಯರೊಂದಿಗೆ ಸಂತೆ ಬೀದಿಯಲ್ಲಿ ನಡೆದುಹೋಗುತ್ತಿದ್ದ. ಅಲ್ಲೊಬ್ಬ ವ್ಯಕ್ತಿ ತನ್ನ ಹಸುವಿಗೆ ಕಟ್ಟಿದ ಹಗ್ಗವನ್ನು ಎಳೆಯುತ್ತಾ “ಹುರ್ರ್… ಬಾ.. ಬಾ…” ಅನ್ನುತ್ತ ಕಾಕು ಹೊಡೆಯುತ್ತಿದ್ದ. ಆ ಹಸು ತಲೆಯನ್ನು ಎಳೆಯುತ್ತ ಅವನಿಂದ ತಪ್ಪಿಸಿಕೊಳ್ಳಲು ಹವಣಿಸುತ್ತಿತ್ತು. ಈ ಹಗ್ಗ ಜಗ್ಗಾಟವನ್ನು ಕಂಡ ಜುನೈದ್ ಅಲ್ಲಿಯೇ ನಿಂತು, “ಬನ್ನಿ, ಆ ವ್ಯಕ್ತಿಯನ್ನು ಸುತ್ತುಗಟ್ಟಿ. ನಿಮಗೊಂದು ಪಾಠ ಹೇಳಿಕೊಡ್ತೀನಿ” ಎಂದು ತನ್ನ ಶಿಷ್ಯರನ್ನು ಕರೆದ. ಶಿಷ್ಯರೆಲ್ಲರೂ ಅವನನ್ನು ಸುತ್ತುವರಿದು ನಿಂತರು. ಜುನೈದ್ ಕೇಳಿದ, “ಹಸು […]

ಮನುಷ್ಯನನ್ನು ಸೃಷ್ಟಿಸಿದ ದೇವರು, ಅವನನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ! : ಸೃಷ್ಟಿಕಥನಗಳು #2

ಪಂಜಾಬಿ ಜನಪದ ಕತೆಗಳ ಪ್ರಕಾರ ದೇವರು ಹಗಲಿರುಳು ಕಷ್ಟಪಟ್ಟು ಮನುಷ್ಯರ ಗೊಂಬೆಗಳನ್ನು ಸೃಷ್ಟಿಸಿದ. ಅದಕ್ಕೆ ಜೀವ ತುಂಬುವ ಮೊದಲೇ ಹಾವು ಬಂದು ಅವನ್ನು ನುಂಗಿ ಹಾಕುತ್ತಿತ್ತು. ಅದಕ್ಕೇ ಅವನ್ನು ಕಾಯಲು ನಾಯಿಯನ್ನು ಸೃಷ್ಟಿಸಿದ…. ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ ಮೊದಲು ಇಡೀ ಸೃಷ್ಟಿಯಲ್ಲಿ ಒಂದು ದೊಡ್ಡದಾದ ಮೊಟ್ಟೆಯಷ್ಟೆ ಇತ್ತು. ಅದರ ಹೊರತಾಗಿ ಏನೂ ಇರಲಿಲ್ಲ. ಒಂದು ದಿನ ಆ ಮೊಟ್ಟೆ ಬಿರುಕು ಬಿಟ್ಟು ಎರಡು ಹೋಳಾಯಿತು. ಮೇಲಿನ ಹೋಳು ಮೇಲಕ್ಕೂ ಕೆಳಗಿನದು ಕೆಳಕ್ಕೂ ಹೋಗಿ […]

ಮಾನವರಾಗಿ ಹುಟ್ಟಿದ ಎಲ್ಲರಿಗೂ ಮನುಷ್ಯರಾಗೋದು ಕಷ್ಟ : ಗಾಲಿಬ್

ಎಲ್ಲ ಕೆಲಸವೂ ಹೂವೆತ್ತಿದಂತೆ ಹಗುರವಾಗಿರೋದು ಕಷ್ಟ; ಮಾನವರಾಗಿ ಹುಟ್ಟಿದ ಎಲ್ಲರಿಗೂ ಮನುಷ್ಯರಾಗೋದು ಕಷ್ಟ!    ~ ಗಾಲಿಬ್ : ಸಾಕಿ ಆಪತ್ತು ಎದುರಾಗುವಾಗ ಪ್ರತಿರೋಧ ಒಡ್ಡುವುದು ಪ್ರತಿಯೊಂದು ಜೀವಿಗಳ ಸಹಜ ಗುಣ. ಆದರೆ ಬುದ್ದಿವಂತ ಮಾನವ ಮಾತ್ರ ಇದಕ್ಕೆ ಸ್ವಲ್ಪ ಭಿನ್ನ. ಪ್ರತಿರೋಧ ಎಂಬ ಪ್ರಕೃತಿ ಸಹಜ ಗುಣವೇ ಆತನನ್ನು ಆಪತ್ತಿಗೆ ತಳ್ಳುತ್ತಿದೆ. ತನ್ನಿಂದಾದ ಒಂದು ಸಣ್ಣ ಪ್ರಮಾದವನ್ನು ಮುಚ್ಚಿ ಹಾಕಲು ಆತ ಇನ್ನಿಲ್ಲದ ಸಾಹಸಕ್ಕೆ ಇಳಿಯುತ್ತಾನೆ. ಮುಖವಾಡದ ಬದುಕು ಆತನೊಳಗಿನ ಮನುಷ್ಯತ್ವವನ್ನು ಕಿತ್ತುಕೊಂಡು ಬಿಡುತ್ತದೆ. ಆತ ಕ್ರೂರಿಯೂ ನಿರ್ದಯಿಯೂ […]

ಯಂತ್ರದಂತೆ ಕೆಲಸ ಮಾಡೋನ ಹೃದಯವೂ ಯಂತ್ರದಂತಾಗುತ್ತೆ… : ಒಂದು ಚೀನೀ ಕಥೆ

ಹಾನ್ ನದಿಯ ಉತ್ತರ ಪ್ರಾಂತ್ಯದಲ್ಲಿ ತ್ಸು-ಗುಂಗ್ ಪ್ರಯಾಣಿಸುತ್ತಿದ್ದಾಗ, ಒಬ್ಬ ಮುದುಕ ತರಕಾರಿ ತೋಟದಲ್ಲಿ ಕೆಲಸ ಮಾಡುತ್ತಿದ್ದುದು ಗಮನಿಸಿದ. ತರಕಾರಿ ಹೊಲಕ್ಕೆ ಕಾಲುವೆ ಮಾಡಿ . ಮುದುಕ ಬಾವಿಗೆ ಇಳಿದು ಬಿಂದಿಗೆಯಲ್ಲಿ ತುಂಬಿ ನೀರಿನ ಕಾಲುವೆಗೆ ಚೆಲ್ಲುತ್ತಿದ್ದ. . ಅವನ ಶ್ರಮ ಅದ್ಭುತ ಆದರೆ ಅದರ ಫಲಿತ ತೀರಾ ಕಡಿಮೆ ಎನ್ನಿಸಿತು ತ್ಸು-ಗುಂಗ್ ಗೆ. ತ್ಸು –ಗುಂಗ್ ಹೇಳಿದ, “ ಅಪ್ಪಾ. ಇಂಥಾ ನೂರು ಸಾಲುಗಳಿಗೆ ನೀರುಣಿಸುವ ಉಪಾಯವಿದೆ; ಅದೂ ಇಷ್ಟು ಶ್ರಮವಿಲ್ಲದೇ? ಅದು ಏನೆಂದು ಕೇಳುವಿಯಾ?” ಮುದುಕ […]

ನೀವು ಯಾವ ಪ್ರಾಣಿ!? : ನಿಮ್ಮ ಹುಟ್ಟುದಿನದ ಮೂಲಕ ಕಂಡುಕೊಳ್ಳಿ!!

ಕೆಲವು ನಂಬಿಕೆಗಳ ಪ್ರಕಾರ, ಆಯಾ ತಿಂಗಳಲ್ಲಿ ಹುಟ್ಟಿದವರ ಗುಣ ನಡತೆಗಳನ್ನು ನಿರ್ದಿಷ್ಟವಾಗಿ ಕೆಲವು ಪ್ರಾಣಿಗಳಿಗೆ ಹೋಲಿಸಬಹುದಾಗಿದೆ. ವಿಶೇಷವಾಗಿ ಶಮನ್ ಸಮುದಾಯದಲ್ಲಿ ಈ ಪದ್ಧತಿ ಚಾಲ್ತಿಯಲ್ಲಿದೆ. ಇತ್ತೀಚೆಗೆ ಫೇಸ್’ಬುಕ್ ಸಾಮಾಜಿಕ ಜಾಲತಾಣದಲ್ಲಿ ಇದೊಂದು ಫನ್ ಗೇಮ್ ಆಗಿ ಚಾಲ್ತಿಯಲ್ಲಿದೆ.  ಆಲೋಚಿಸಬಲ್ಲ ಬೌದ್ಧಿಕ ಸಾಮರ್ಥ್ಯ ಇರುವ ಮನುಷ್ಯ ಜೀವಿಗಳು, ಪ್ರಾಣಿಗಳಲ್ಲಿ ತನ್ನ ಸ್ವಭಾವಗಳ ಸಂಕೇತವನ್ನು ಹುಡುಕುತ್ತಾರೆ. ಅವುಗಳನ್ನು ಶಕುನವಾಗಿಯೂ, ಸಂವಾಹಕವಾಗಿಯೂ ಅತೀತದ ಸಂದೇಶವಾಗಿಯೂ ನೋಡುತ್ತಾರೆ. “ಪ್ರಾಣಿಗಳನ್ನು ಪ್ರಾಣಿಗಳಂತೆಯೇ ನೋಡಬೇಕು” ಅನ್ನುವುದು ನಿಜವಾದರೂ ಈ ಸಹಜೀವಿಗಳು ನಮ್ಮ ಮನೋಸಾಮ್ರಾಜ್ಯದಲ್ಲಿ ಪಡೆದಿರುವ ಸ್ಥಾನವನ್ನು […]

ಮಾನುಷಿ ಅಧ್ಯಾತ್ಮವನ್ನು ಅರಿತಮೇಲೆ ಏನಾಗುತ್ತಾಳೆ?

ರಾ-ಉಮ್ ಕಲಿಸುವ ವಿಧಾನವೇ ವಿಚಿತ್ರವಾಗಿತ್ತು. ಕೆಲ ದಿನ ಕೇವಲ ಒಂದು ಪ್ರಶ್ನೆಯಷ್ಟೇ ಅವಳ ಪಾಠವಾಗಿರುತ್ತಿತ್ತು. ಶಿಷ್ಯರ ತಮ್ಮ ನಿತ್ಯದ ಕೆಲಸಗಳ ಜೊತೆಗೆ ಈ ಪ್ರಶ್ನೆಯ ಉತ್ತರವನ್ನು ಹುಡುಕಬೇಕಾಗಿತ್ತು. ಶಿಷ್ಯರು ಕೆಲವೊಮ್ಮೆ ಹುಡುಕುವ ಪ್ರಕ್ರಿಯೆಯಲ್ಲಿ ಕಲಿಯುತ್ತಿದ್ದರು. ಕೆಲವೊಮ್ಮೆ ಉತ್ತರ ಕಂಡುಕೊಂಡ ಮೇಲೆ ಅವರ ಕಲಿಕೆ ಪೂರ್ಣಗೊಳ್ಳುತ್ತಿತ್ತು. ವಾ-ಐನ್-ಸಾಇಲ್‌ ಆಶ್ರಮದಲ್ಲಿದ್ದಾಗ ನಡೆದ ಘಟನೆ ಇದು. ನಸುಕಿನ ಗಂಟೆ ಬಾರಿಸಿತು ಶಿಷ್ಯರೆಲ್ಲಾ ಬಂದು ನಿಂತರು. ಹಿಂದಿನ ರಾತ್ರಿಯ ಪಾನೀಯ ಸಾಧನೆಯಿಂದಲೋ ಅಥವಾ ಮತ್ಯಾವ ಕಾರಣದಿಂದಲೋ ರಾ-ಉಮ್ ಏಳುವಾಗ ತಡವಾಗಿತ್ತು. ಬೆಳಗಿನ ಉಪಾಹಾರವೂ […]

ವಸ್ತುವು ಮತ್ತೊಂದರಿಂದ ಮರುಪೂರಣಕ್ಕೆ ಒಳಗಾಗುವುದೇ ಬದಲಾವಣೆ

ನಮ್ಮ ಜೀವಕೋಶಗಳು ಸತ್ತು ಹೊಸತು ಹುಟ್ಟದೆ, ಬದಲಾವಣೆ ಘಟಿಸದೆ, ನಮ್ಮ ದೇಹದ ನಿರಂತರತೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ, ನಾವು ಯಾವ ನಾವಾಗಿ ಉಳಿದಿಲ್ಲವೋ ಆ ನಾವು ಇದ್ದ ಭೂತಕಾಲದ ಬಗ್ಗೆ ಚಿಂತಿಸುವುದು ಏತಕ್ಕಾಗಿ? ಇದನ್ನು ಮನದಟ್ಟು ಮಾಡಿಸುವುದು ಹೆರಾಕ್ಲೀಟಸ್’ನ  ಮಾತುಗಳ ಹಿಂದಿನ ಉದ್ದೇಶ.  ಒಂದೇ ನದಿಗೆ ಒಬ್ಬ ಮನುಷ್ಯ ಎರಡು ಸಲ ಕಾಲಿಡಲು ಸಾಧ್ಯವಿಲ್ಲ.  ಯಾಕೆಂದರೆ ಅದು ಅದೇ ನದಿಯಾಗಿರುವುದಿಲ್ಲ, ಮನುಷ್ಯ ಕೂಡಾ. ಇದು ಕ್ರಿ.ಪೂ 4 – 5 ನೇ ಶತಮಾನದಲ್ಲಿ ಆಗಿಹೋದ ಗ್ರೀಕ್ ತತ್ತ್ವಜ್ಞಾನಿ ಹೆರಾಕ್ಲೀಟಸ್ […]

ಕಾಮುಕ ಮನುಷ್ಯನನ್ನು ಪಶುವೆಂದು ಕರೆಯುವುದು ಭಯಂಕರ ಪ್ರಮಾದ!

ಸ್ವಾಮಿ ರಾಮತೀರ್ಥರ ಈ ವಿವರಣೆ ಸಮ್ಮತವಾದುದೇ ಆಗಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ನಾವು ಅತ್ಯಾಚಾರಿಗಳ ವರ್ತನೆಯನ್ನು ‘ಮೃಗೀಯ’ ಅನ್ನುವುದನ್ನು ಬಿಟ್ಟರಷ್ಟೇ ಅದು ಮನುಷ್ಯ ಮಾತ್ರ ಮಾಡಬಲ್ಲ ವಿಕೃತಿ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಮತ್ತು ಮನುಷ್ಯ ಸಮುದಾಯಕ್ಕೆ ಸೀಮಿತವಾಗಿರುವ ಈ ವಿಕೃತಿಗೆ ಪರಿಹಾರ ಹುಡುಕಲು ಸಾಧ್ಯವಾಗುತ್ತದೆ.  ಸಾಮಾನ್ಯವಾಗಿ ಅತ್ಯಾಚಾರ ಇಲ್ಲವೇ ಅಸಮ್ಮತ ಸಂಭೋಗದ ಪ್ರಕರಣಗಳ ಬಗ್ಗೆ ಮಾತನಾಡುವಾಗ ನಾವು ‘ಪಶುವಿನಂತೆ’ ವರ್ತಿಸಿದರು, ‘ಮೃಗೀಯ ಭಾವನೆ’ ತೋರಿದರು ಎಂಬ ಹೇಳಿಕೆಗಳನ್ನು ಕೊಡುತ್ತೇವೆ. ಆದರೆ ಸ್ವಾಮಿ ರಾಮತೀರ್ಥರು ಇದನ್ನು […]