ದೀಪದ ಕಂಬದೆತ್ತರಕ್ಕೆ ಹಾರಬಹುದೇ? : ರಾ-ಉಮ್ ಕಥೆಗಳು

~ ಯಾದಿರಾ ವಾ-ಐನ್-ಸಾಇಲ್ ಕೆಲ ಕಾಲ ರಾ-ಉಮ್ ಆಶ್ರಮದಿಂದ ದೂರವಾಗಿದ್ದ. ಇದಕ್ಕೆ ಕಾರಣ ಶಿಷ್ಯರೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದ್ದ ಪರಿವ್ರಾಜಕತ್ವ. ತಿರುಗಾಟದಲ್ಲಿದ್ದ ವಾ-ಐನ್ ಒಂದು ದಿನ ಹಲವು ಗರಡಿಯಾಳುಗಳು ಸಾಮು ಮಾಡುತ್ತಿದ್ದ ಸ್ಥಳವೊಂದಕ್ಕೆ ಬಂದ. ಎಲ್ಲರೂ ವ್ಯಾಯಾಮದಲ್ಲಿ ನಿರತರಾಗಿದ್ದರು. ವಾ-ಐನ್‌ನ ಉಡುಪು ಮತ್ತು ಗಡ್ಡವನ್ನು ಕಂಡು ಕಂಡ ಒಬ್ಬ ಗರಡಿಯಾಳಿಗೆ ಈತ ಯಾರೋ ದೊಡ್ಡ ಅನುಭಾವಿಯೇ ಇರಬೇಕು ಅನ್ನಿಸಿತು. ಅವನು ಹತ್ತಿರ ಬಂದು ಒಂದು ಪ್ರಶ್ನೆ ಕೇಳಿದ, ‘ಗುರುಗಳೇ ನಾನು ಹಲವು ದಿನಗಳಿಂದ ಜಿಗಿಯುವ ಅಭ್ಯಾಸ ಮಾಡುತ್ತಿದ್ದೇನೆ. ಹೀಗೇ […]

‘ನಾವು ಬದುಕುವುದದಕ್ಕೆ ಏನು ಮಾಡಬೇಕು?’ : ಶಿಷ್ಯನ ಪ್ರಶ್ನೆಗೆ ರಾ-ಉಮ್ ಉತ್ತರ

~ ಯಾದಿರಾ ವಾ-ಐನ್-ಸಾಇಲ್ ಪರಿವ್ರಾಜಕನಾಗಿ ಹೋಗಿದ್ದರಿಂದ ಕಿರಿಯ ಶಿಷ್ಯರನ್ನು ನಿರ್ವಹಿಸುವ ಹೊಣೆಯೂ ರಾ-ಉಮ್ ಮೇಲೆಯೇ ಬಿದ್ದಿತ್ತು. ಹೊಸತಾಗಿ ಆಶ್ರಮ ಸೇರಿಕೊಳ್ಳುವವರ ಬಳಿ ನೂರಾರು ಪ್ರಶ್ನೆಗಳಿರುತ್ತಿದ್ದವು. ಮತ್ತು ಅವೆಲ್ಲವೂ ಗಹನವಾದ ಪ್ರಶ್ನೆಗಳೇ ಆಗಿರುತ್ತಿದ್ದವು. ಇನ್ನೂ ಕಷ್ಟದ ಸಂಗತಿಯೆಂದರೆ, ಪ್ರಶ್ನೆ ಕೇಳುವ ಶಿಷ್ಯರೆಲ್ಲರೂ ಒಂದು ಗಹನವಾದ ಉತ್ತರವನ್ನೇ ನಿರೀಕ್ಷಿಸುತ್ತಿದ್ದರು. ರಾ-ಉಮ್‌‌ ಮಟ್ಟಿಗೆ ಶಿಷ್ಯರ ಕಲಿಕೆ ಎಂಬುದು ಅನುಭವಜನ್ಯವಾಗಬೇಕಿತ್ತು. ಇಂಥದ್ದೊಂದು ಸಂದರ್ಭದಲ್ಲಿ ಬಹುಕಾಲದಿಂದ ಆಶ್ರಮದಲ್ಲಿಯೇ ಇದ್ದರೂ ಕಿರಿಯನಾಗಿಯೇ ಉಳಿದಿದ್ದ ಶಿಷ್ಯನೊಬ್ಬ ಪ್ರಶ್ನೆ ಕೇಳಿದ. ‘ನಾವು ಬದುಕುವುದದಕ್ಕೆ ಏನು ಮಾಡಬೇಕು?’ ಈ ಗಹನವಾದ […]