ಬ್ರಾಹ್ಮೀ ಮುಹೂರ್ತದ ಮಹತ್ವ ಮತ್ತು ಲಾಭಗಳೇನು ಗೊತ್ತೆ?

ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಏಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯಗಳು ವೃದ್ಧಿಸುತ್ತವೆ ಎನ್ನುತ್ತದೆ ಪೂರ್ವಜರ ಜ್ಞಾನ. ಯಾರು ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಚಟುವಟಿಕೆಗಳನ್ನು ನಡೆಸುತ್ತಾರೋ ಅವರ ಶರೀರದಲ್ಲಿ ಸಂಜೀವಿನೀ ಶಕ್ತಿಯ ಸಂಚಾರವಾಗುತ್ತದೆ ಅನ್ನುತ್ತದೆ ಆಯುರ್ವೇದ. ರಾತ್ರಿಯ ಅಂತಿಮ ಜಾವ(ಪ್ರಹರ)ವೇ ಬ್ರಹ್ಮ ಅಥವಾ ಬ್ರಾಹ್ಮೀ ಮುಹೂರ್ತ. ಶಾಸ್ತ್ರಗಳ ಪ್ರಕಾರ ಮುಂಜಾನೆಯ 4.24ರಿಂದ 5.10ರವರೆಗಿನ ಸಮಯ. ಸರಳವಾಗಿ ಗುರುತಿಸುವುದಾದರೆ, ಉಷೆ ಮೂಡುವ  ಜಾವ. ನಮ್ಮ ಪ್ರಾಚೀನ ಋಷಿಮುನಿಗಳು ಈ ಸಮಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. […]