ಜ್ಞಾನಿಗಳ ಸ್ವಪ್ನ ವಿಚಾರ : ರಮಣಧಾರೆ

ರಮಣ ಮಹರ್ಷಿಗಳನ್ನು ಕಾಣಲು ಬಂದವರು ವಿವಿಧ ಆಧ್ಯಾತ್ಮಿಕ ವಿಚಾರಗಳನ್ನು, ಪ್ರಶ್ನೆಗಳನ್ನು ಮುಂದಿಟ್ಟು ಸಂವಾದ ನಡೆಸುತ್ತಿದ್ದರು. ಈ ಸಂವಾದಗಳ ಸಂಗ್ರಹ ಪುಸ್ತಕಗಳಾಗಿಯೂ ಪ್ರಕಟವಾಗಿವೆ.  ಪ್ರಶ್ನೆ:  ಜ್ಞಾನಿಗಳಿಗೆ ಸ್ವಪ್ನ ಉಂಟಾಗುವುದಿಲ್ಲವೆ? ರಮಣ ಮಹರ್ಷಿಗಳು : ಜ್ಞಾನಿಗೆ ಸ್ವಪ್ನ ಉಂಟಾಗುವುದಿಲ್ಲ. ಮಾತ್ರವಲ್ಲ, ಜಾಗ್ರತ್ತು (ಎಚ್ಚರ), ಸುಷುಪ್ತಿ (ತನಿನಿದ್ರೆ), ಸ್ವಪ್ನ (ಕನಸು) ಇವು ಮೂರೂ ಅವಸ್ಥೆಗಳು ಇಲ್ಲದ ಸ್ಥಿತಿ ಯಾವುದಿದೆಯೋ ಅದೇ ಜ್ಞಾನಿಯ ಯಥಾರ್ಥವಾದ ಸ್ಥಿತಿ. ಪ್ರಶ್ನೆ: ಜಾಗ್ರದವಸ್ಥೆಯೂ ಸಹ ಸ್ವಪ್ನಾವಸ್ಥೆಗೆ ಸಮಾನವೇ? ರಮಣ ಮಹರ್ಷಿಗಳು : ಹೌದು. ಅದು ಕೂಡಾ ಸ್ವಪ್ನಾವಸ್ಥೆಗೆ […]