ಶನಿಯ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿವೆ 8 ಮಾಹಿತಿ

ಶನಿ ಅಂದಕೂಡಲೇ ಜನಸಾಮಾಣ್ಯರಲ್ಲಿ ಮಿಶ್ರಭಾವನೆ ಹಾದುಹೋಗುತ್ತದೆ. ಕೆಲವರು ತಮಗಿರುವ ‘ಶನಿದೆಸೆ’ಯನ್ನು ನೆನೆಯುತ್ತಾಋಎ. ಕೆಲವರು ಕಷ್ಟಗಳನ್ನೆಲ್ಲ ‘ಶನಿ ಕಾಟ’ ಎಂದೇ ಭಾವಿಸುತ್ತಾರೆ. ಪೀಡಕರನ್ನು ‘ಶನಿ’ ಎಂದು ದೂಷಿಸುತ್ತಾರೆ. ವಾಸ್ತವದಲ್ಲಿ ಜನರು ಅನುಭವಿಸುವ ಸಂಕಷ್ಟಗಳಿಗೆ ಶನಿದೇವ ಕಾರಣನಲ್ಲ. ಅವನು ಕೇವಲ ಕರ್ಮಫಲ ಪ್ರದಾನ ಮಾಡುವ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾನೆ. ಈ ನಿಟ್ಟಿನಲ್ಲಿ ಅವನು ದೇವಾಸುರರೆಂಬ ಭೇದವನ್ನೂ ಮಾಡುವುದಿಲ್ಲ. ಆದ್ದರಿಂದಲೇ ಶನಿದೇವನನ್ನು ‘ಶನಿ ಮಹಾತ್ಮ’ ಎಂದು ಗೌರವದಿಂದ ಕರೆಯಲಾಗುತ್ತದೆ. ಈ ಕರ್ಮಫಲ ದಾತ ಶನಿಮಹಾತ್ಮನ ಬಗ್ಗೆ 8 ಆಸಕ್ತಿಕರ ಸಂಗತಿಗಳನ್ನು ಈ […]

ತಾವೋ ತಿಳಿವು #71 ~ ತನ್ನ ಮಹತ್ವದ ಬಗ್ಗೆ ಅರಿವಿಲ್ಲ, ಆದ್ದರಿಂದ ತಾವೋ ಮಹಾತ್ಮ

ಮೂಲ : ಲಾವೋ ತ್ಸು | ಮರುನಿರೂಪಣೆ : ಚಿದಂಬರ ನರೇಂದ್ರ ತಾವೋ ಒಂದು ಮಹಾನದಿ ಸತತವಾಗಿ ಎಲ್ಲ ದಿಕ್ಕುಗಳಲ್ಲಿ ಹರಿಯುತ್ತದೆ. ಈ ನದಿಯಿಂದಲೇ ಎಲ್ಲ ಹುಟ್ಟಿವೆಯಾದರೂ ನದಿ ಯಾವುದನ್ನೂ ಹುಟ್ಟಿಸಿಲ್ಲ. ಮೂರ್ತಿ ಕೆತ್ತುವುದರಲ್ಲಿ ತಾವೋ ಎಷ್ಟು ಮಗ್ನವಾಗಿದೆಯೆಂದರೆ ಕೆತ್ತಿದ ಯಾವ ಮೂರ್ತಿಯ ಗುರುತು ಪರಿಚಯವೂ ಅದಕ್ಕಿಲ್ಲ. ಅನಂತ ವಿಶ್ವಗಳನ್ನು ತಾವೋ ಸಲಹುತ್ತದೆಯಾದರೂ ಎಂದೂ ಯಾವುದಕ್ಕೂ ಅಂಟಿಕೊಂಡಿಲ್ಲ. ತಾವೋ ಎಲ್ಲರೊಳಗೆ ಒಂದಾಗಿದೆ ಆದರೆ ಎಲ್ಲೂ ಹಕ್ಕಿನ ಮಾತಾಡುವುದಿಲ್ಲ ಆದ್ದರಿಂದ ಅದು ವಿನಮ್ರ. ಎಲ್ಲವೂ ತಾವೋ ಒಳಗೆ ಒಂದಾಗಿವೆ […]