ಜೈನ ತೀರ್ಥಂಕರ ವರ್ಧಮಾನ ಮಹಾವೀರರ ಬಗ್ಗೆ ತಿಳಿದಿರಬೇಕಾದ 9 ಸಂಗತಿಗಳು : ಅರಳಿಮರ ಚಿತ್ರಮಾಲೆ

ಇಂದು ಜೈನ ಧರ್ಮದ ಪ್ರವರ್ತಕರೂ 24ನೇ ತೀರ್ಥಂಕರರೂ ಆದ ವರ್ಧಮಾನ ಮಹಾವೀರರ ಜಯಂತಿ. ತನ್ನಿಮಿತ್ತ, ಭಗವಾನ್ ಮಹಾವೀರರ ಬದುಕಿನ ಪ್ರಾಥಮಿಕ ಮಾಹಿತಿ ನೀಡುವ 9 ಚಿತ್ರಿಕೆಗಳು ಇಲ್ಲಿವೆ… 1 ಜನನ ಮತ್ತು ಕಾಲಮಾನ 2 ವರ್ಧಮಾನನೆಂಬ ಹೆಸರು 3 ಋಷಭ ದೇವ 4 ಪ್ರಾಚೀನ ಧರ್ಮ 5 ತೀರ್ಥಂಕರ 6 ಬೋಧನೆ 7 ಜ್ಞಾನೋದಯ 8 ಪಂಚಶೀಲ 9 ನಿರ್ವಾಣ

ಆಲಸ್ಯವೇ ನಮ್ಮನ್ನು ಕೆಟ್ಟವರನ್ನಾಗಿಸುವುದು!

ಜ್ಞಾನೋದಯ ಹೊಂದುವುದು ಬಹಳ ಕಷ್ಟದ ಕೆಲಸ. ಆದರೆ ದೂಷಿಸುವುದು ಬಹಳ ಸುಲಭ. ಜ್ಞಾನೋದಯ ಹೊಂದುವುದು ಎಂದರೆ ಎಲ್ಲಕ್ಕಿಂತ ಮೊದಲು ನಮ್ಮ ಅಹಂ ಪ್ರವೃತ್ತಿಯನ್ನು ಕುಟ್ಟಿ ಪುಡಿ ಮಾಡಿ ಬಿಸುಟುವುದು. ಆಲಸಿಗಳಿಗೆ ಅದು ಸಾಧ್ಯವಿಲ್ಲದ ಮಾತು. ಉತ್ತಮರಾಗುವಿಕೆಯ ಪ್ರಯತ್ನದಲ್ಲಿ ಆಲಸ್ಯ ತೋರುವುದೇ ಯಾವುದೇ ವ್ಯಕ್ತಿಯು ದುಷ್ಟನಾಗುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ ~ ಓಶೋ ಒಳ್ಳೆಯವರಿಗೆ ಕೆಟ್ಟದ್ದನ್ನ ಮಾಡುವುದು ಎಂದರೆ ಅದು ಆಕಾಶಕ್ಕೆ ಉಗುಳಿದಂತೆ. ಆದ್ದರಿಂದ ಸಜ್ಜನರ ತಂಟೆಗೆ ಹೋಗಬಾರದು. ಮೊದಲು ನಾವು ಕೆಟ್ಟ ಜನರೇಕೆ ಒಳ್ಳೆಯವರ ತಂಟೆಗೆ ಹೋಗುತ್ತಾರೆಂದು ಅರ್ಥ ಮಾಡಿಕೊಳ್ಳೋಣ. […]

‘ಕೇವಲಜ್ಞಾನಿ’ ವರ್ಧಮಾನ ಮಹಾವೀರ

ಇಂದು ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ವರ್ಧಮಾನ ಮಹಾವೀರನ ಜನ್ಮದಿನ.  ಜೈನ ಧರ್ಮದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ ಮಹಾವೀರ. ಮಹಾವೀರನು ಕ್ರಿ.ಪೂ.599ರ ಚೈತ್ರ ಶುದ್ಧ ತ್ರಯೋದಶಿಯ ದಿನ (ಈ ವರ್ಷ ಮಾರ್ಚ್ 29) ಬಿಹಾರದ ಕುಂಡಗ್ರಾಮ (ಭಾಸ್ ಕುಂಡ್) ಎಂಬಲ್ಲಿ ಸಿದ್ದಾರ್ಥ ಮತ್ತು ತ್ರಿಶಲಾ ದೇವಿಯರ ಮಗನಾಗಿ ಜನಿಸಿದನು. ಈತನಿಗೆ ಜ್ಞಾತಪುತ್ರ, ಸನ್ಮತಿ ನಾಯಕ, ಅತಿವೀರ, ನಿರ್ಗಂಥ ಎಂಬ ಹೆಸರುಗಳೂ ಇದ್ದವು. ಇಕ್ವಾಕು ವಂಶದವನಾದ ಸಿದ್ಧಾರ್ಥ ಲಿಚ್ಛವಿಗಳ ನಾಯಕ, ಕುಂಡಗ್ರಾಮದ ಅರಸ. ವರ್ಧಮಾನನು ಬಾಲ್ಯದಲ್ಲಿ ಸೂಕ್ತ […]

ಸತ್ಯವನ್ನು ಮಾರಲೊಲ್ಲದ ಮಹಾವೀರ ಮತ್ತು ರಾಜನಿಗೆ ಪಾಠ ಹೇಳಿದ ಜಾಡಮಾಲಿ

ಒಮ್ಮೆ ಹೀಗಾಯ್ತು. ಮೇಲಿಂದ ಮೇಲೆ ಮಹಾವೀರನ ಗುಣಗಾನವನ್ನು ಕೇಳಿ ಬೇಸತ್ತಿದ್ದ ರಾಜಾ ಬಿಂಬಾಸುರನಿಗೆ ಆತನನ್ನು ಒಂದು ಕೈ ನೋಡೇಬಿಡುವ ಎಂದು ಮನಸಾಯ್ತು. ತನ್ನ ಮಂತ್ರಿಯನ್ನು ಕರೆದು, “ಯಾಕೆ ನಮ್ಮ ಪ್ರಜೆಗಳು ದಂಡುಗಟ್ಟಿಕೊಂಡು ಮಹಾವೀರನ ಬಳಿ ಹೋಗುತ್ತಾರೆ? ಆತನ ಬಳಿ ಅಂಥದ್ದೇನಿದೆ?” ಎಂದು ಕೇಳಿದನು. ಅದಕ್ಕೆ ಮಂತ್ರಿ, “ಮಹಾಪ್ರಭೂ, ಮಹಾವೀರನ ಬಳಿ ಸತ್ಯವಿದೆ.” ಎಂದು ಚುಟುಕಾಗಿ ಉತ್ತರಿಸಿದನು. ಬಿಂಬಾಸುರನಿಗೆ ತಲೆ ಕೆಟ್ಟಿತು. ಯಕಶ್ಚಿತ್ ಸತ್ಯಕ್ಕಾಗಿ ಜನ ತಮ್ಮ ಸಮಯ ಪೋಲು ಮಾಡಿಕೊಂಡು ಹೋಗಿ ಅವನ ಕಾಲ ಬಳಿ ಕೂರುವುದೇ!? […]