ಮಂತ್ರ ಶಕ್ತಿಯ ಮಹಿಮೆ

ವೇದಗಳು ಭಗವಂತನ ನಿಃಶ್ವಾಸದಿಂದ ಪ್ರಾಪ್ತವಾಗಿವೆ. ಆದ್ದರಿಂದ ಮಂತ್ರಗಳನ್ನು ದೇವತೆಗಳ ಶರೀರವೆಂದು ಹೇಳುವುದು.  ಮಂತ್ರಗಳಲ್ಲಿ ಉಕ್ತವಾದ ದೇವತೆಗಳಿಗೂ ಮತ್ತು ಛಂದಸ್ಸುಗಳಿಗೂ ಸಂಬಂಧವಿರುವುದನ್ನು ಋಗ್ವೇದದಲ್ಲಿ ಸ್ಪಷ್ಟಪಡಿಸಲಾಗಿದೆ.  ಋಗ್ವೇದ 10-130: “ಅಗ್ನೇಃ ಗಾಯತ್ರ್ಯ ಭವತ್ ಸಯುಗ್ವಾ ಉಷ್ನಿಹಯಾ ಸವಿತಾ ಸಂ ಬಭೂವ ಅನುಷ್ಟುಭಾ ಸೋಮ ಉಕ್ತೈಃ ಮಹಸ್ವಾನ್ ಬೃಹಸ್ಪತೇರ್ಬೃಹತೀ ವಾಚಮಾವತ್||4|| ವಿರಾಟ್ ಮಿತ್ರಾವರುಣಯೋರಭಿಶ್ರೀಃ ಇಂದ್ರಸ್ಯ ತ್ರಿಷ್ಟುಬಿಹ ಭಾಗೋ ಅಹ್ನಃ ವಿಶ್ವಾನ್ ದೇವಾಂಜಗತ್ಯಾ ವಿವೇಶ ತೇನ ಚಾಕ್ಲೃಪ್ರ ಋಷಯೋ ಮನುಷ್ಯಾಃ||5||” ಗಾಯತ್ರಿ = ಅಗ್ನಿಗೆ; ಬೃಹತೀ = ಬೃಹಸ್ಪತಿಗೆ; ವಿರಾಟ್ = ಮಿತ್ರಾ, ವರುಣರಿಗೆ; […]

ದೇವರ ಮಹಿಮೆಯನ್ನು ನಿರಾಕರಿಸುವಷ್ಟು ದೊಡ್ಡ ತರ್ಕವಿದೆಯೇ?

~ ಯಾದಿರಾ ವಾ-ಐನ್-ಸಾಇಲ್‌ ಮತ್ತು ರಾ-ಉಮ್ ಯಾವತ್ತೂ ಏನನ್ನೂ ಚರ್ಚಿಸುತ್ತಿರಲಿಲ್ಲ. ಹಾಗೆ ನೋಡಿದರೆ ಮರುಭೂಮಿಯ ಮಹಾಯೋಗಿನಿಯ ಶಿಷ್ಯತ್ವ ಪಡೆದ ಆರಂಭದ ದಿನಗಳನ್ನು ಬಿಟ್ಟರೆ ವಾ-ಐನ್ ಸಾಇಲ್ ಪ್ರಶ್ನೆಗಳನ್ನೂ ಕೇಳುತ್ತಿರಲಿಲ್ಲ. ರಾ-ಉಮ್ ಮಾತುಗಳನ್ನು ಅದರ ನಿಜವಾದ ಅರ್ಥದಲ್ಲಿ ಶಿಷ್ಯರಿಗೆ ವಿವರಿಸುವ ಸಾಮರ್ಥ್ಯವಿದ್ದದ್ದು ವಾ-ಐನ್‌ಗೆ ಮಾತ್ರ ಎಂದು ಇತರ ಶಿಷ್ಯರು ಭಾವಿಸಿದ್ದರು. ತರ್ಕಶಾಸ್ತ್ರದಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದ ದಕ್ಷಿಣದ ಕಡೆಯವನೊಬ್ಬ ಆಗಷ್ಟೇ ರಾ-ಉಮ್ ಆಶ್ರಮಕ್ಕೆ ಸೇರಿದ್ದ. ಎಲ್ಲವನ್ನೂ ತಾರ್ಕಿಕವಾಗಿ ಸಾಬೀತು ಮಾಡುವುದು ಅವನಿಗೊಂದು ಗೀಳಾಗಿತ್ತು. ಸಂಜೆಯ ಧ್ಯಾನ ಪಾಠಕ್ಕಾಗಿ ರಾ-ಉಮ್ […]