ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ  ~ ಮಯಾಸುರನ ಮೂರ್ಖ ಮಕ್ಕಳು ಮತ್ತು ಮಾಯಾ ವಸ್ತುಗಳು

ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ. ಇಲ್ಲಿಯವರೆಗೆ… ಪುತ್ರಕನು ತನ್ನ ತಂದೆ ಮತ್ತು ಆತನ ಸಹೋದರರನ್ನು ಮರಳಿ ಪಡೆದನು. ಆದರೆ ಅವರು ಮಹಾ ವಂಚಕರೂ ಕಡುಲೋಭಿಗಳೂ ಆಗಿದ್ದು, ಮಗನನ್ನೇ ಕೊಲ್ಲಿಸುವ ಸಂಚು ಹೂಡಿದರು. ಪುತ್ರಕನು ಅದರಿಂದ ಪಾರಾಗಿ ದೇಶಾಂತರ ಹೋಗುವ ನಿರ್ಧಾರ ಮಾಡಿದನು. ಮುಂದೆ… ತಂದೆಯ ವಂಚನೆಯಿಂದ ದುಃಖಿತನಾದ ಪುತ್ರಕನು ತನ್ನ ರಾಜ್ಯವನ್ನು ತೊರೆದು ಹೊರಟನು. ಕಾಡಿನಲ್ಲಿ ಅಲೆದಾಡುತ್ತಾ ಇರುವಾಗ ಯಕ್ಷರಂತೆ ಕಾಣುವ ಇಬ್ಬರು ಮಲ್ಲಯುದ್ಧದಲ್ಲಿ ತೊಡಗಿರುವುದನ್ನು ಕಂಡನು. ಅಚ್ಚರಿಗೊಂಡ ಪುತ್ರಕನು ಅವರನ್ನು ಕುರಿತು, “ನೀವು […]