ಊರಿಗೆ ಹುಲಿ ಬಂದಿದೆ ಅಂದರೆ ನಂಬುವೆಯಾ? ~ ಝೆನ್ ಕಥೆ

ಮಾಸ್ಟರ್ ಒಮ್ಮೆ ಊರಿನ ಹಿರಿಯ ಅಧಿಕಾರಿಯ ಮನೆಗೆ ಅತಿಥಿಯಾಗಿ ರಾತ್ರಿಯ ಊಟಕ್ಕೆ ಹೋಗಿದ್ದ. ಮಾತಿನ ನಡುವೆ ಸಂತ, ಅಧಿಕಾರಿಯನ್ನು ಪ್ರಶ್ನೆ ಮಾಡಿದ. “ರಾತ್ರಿ ನೀನು ಊಟಕ್ಕೆ ಕೂತಾಗ ಅಕಸ್ಮಾತ್ ಒಬ್ಬ ವ್ಯಕ್ತಿ ಓಡುತ್ತ ಬಂದು ಊರಿನ ನಟ್ಟ ನಡುವೆ ಹುಲಿ ಕಾಣಿಸಿಕೊಂಡಿದೆಯೆಂದರೆ ನೀನು ನಂಬುವೆಯಾ?” “ಕೇವಲ ಒಬ್ಬ ಮನುಷ್ಯನಾ?” “ಹೌದು, ಕೇವಲ ಒಬ್ಬ ಮನುಷ್ಯ.” “ಹುಲಿ ಕಾಣಿಸಿಕೊಂಡಿದೆಯೆಂದು ಕೇವಲ ಒಬ್ಬ ಬಂದು ಹೇಳಿದರೆ ನಾನು ನಂಬುವುದಿಲ್ಲ.” “ಹಾಗಾದರೆ ಇಬ್ಬರು ಬಂದು ಹೇಳಿದರೆ?” “ಕೇವಲ ಇಬ್ಬರಾ?” “ಹೌದು, ಕೇವಲ […]

ಊಟ ಮಾಡುವುದು ಮತ್ತು ಪತ್ರಿಕೆ ಓದುವುದು ~ ಝೆನ್ ಕಥೆ

ಮಾಸ್ಟರ್ ಸೆಯೂಂಗ್ ಸಾನ್ ತನ್ನ ಶಿಷ್ಯರಿಗೆ ಪಾಠ ಮಾಡುತ್ತಿದ್ದ; “ಊಟ ಮಾಡುವಾಗ ಬರೀ ಊಟ ಮಾಡಬೇಕು. ಪತ್ರಿಕೆ ಓದುವಾಗ ಬರೀ ಪತ್ರಿಕೆ ಓದಬೇಕು. ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೇನನ್ನೂ ಮಾಡಬಾರದು”. ಒಂದು ದಿನ ಶಿಷ್ಯನೊಬ್ಬ, ಮಾಸ್ಟರ್ ಪತ್ರಿಕೆ ಓದುತ್ತಾ ಊಟ ಮಾಡುತ್ತಿರುವುದನ್ನು ನೋಡಿದ. “ಮಾಸ್ಟರ್, ನೀವು ಈಗ ಮಾಡುತ್ತಿರುವುದು, ನೀವು ಹೇಳಿಕೊಟ್ಟ ಪಾಠಕ್ಕೆ ವಿರುದ್ಧವಾಗಿದೆಯಲ್ಲವೆ?” ಆಶ್ಚರ್ಯಚಕಿತನಾಗಿ ಕೇಳಿದ. ಸೆಯೂಂಗ್ ಸಾನ್ ಉತ್ತರಿಸಿದ, “ಪತ್ರಿಕೆ ಓದುತ್ತಾ ಊಟಮಾಡುವಾಗ, ಕೇವಲ ಪತ್ರಿಕೆ ಓದುತ್ತಾ ಊಟಮಾಡಬೇಕು”. (ಸಂಗ್ರಹ ಮತ್ತು ಅನುವಾದ : […]

ಮೊದಲು ಚಹಾ ಕುಡಿ ~ ಝೆನ್ ಕಥೆ

ಝೆನ್ ಮಾಸ್ಟರ್ ಜೋಶು, ತನ್ನ ಆಶ್ರಮದಲ್ಲಿ ಓಡಾಡುತ್ತಿದ್ದ ಸನ್ಯಾಸಿಯೊಬ್ಬನನ್ನು ಮಾತಾಡಿಸಿದ ; “ನಾನು ಮೊದಲು ನಿನ್ನ ನೋಡಿದ್ದೀನಾ ?” “ಇಲ್ಲ ಮಾಸ್ಟರ್, ನಾನು ಇವತ್ತೇ ಆಶ್ರಮಕ್ಕೆ ಬಂದಿರೋದು” “ಓಹ್ ! ಹೌದಾ.. ಹಾಗಾದರೆ ಮೊದಲು ಚಹಾ ಕುಡಿ” ಆಮೇಲೆ ಜೋಶು ಇನ್ನೊಬ್ಬನನ್ನು ಮಾತಾಡಿಸಿದ ; “ನೀನು? ನೀನೂ ಹೊಸಬನಾ ಆಶ್ರಮಕ್ಕೆ?” “ಇಲ್ಲ ಮಾಸ್ಟರ್ ನಾನು ಹಳಬ, ಎರಡು ವರ್ಷ ಆಯಿತು ನಾನು ಆಶ್ರಮಕ್ಕೆ ಬಂದು” “ಓಹ್ ! ಹೌದಾ… ಹಾಗಾದರೆ ಮೊದಲು ಚಹಾ ಕುಡಿ” ಈ ಮಾತುಕತೆಯನ್ನು […]

ಚಾವೋ ಚೌ ಕೇಳಿದ್ದೇನು? : ಝೆನ್ ಕಥೆ

ಒಂದು ದಿನ ಝೆನ್ ಮಾಸ್ಟರ್ ಚಾವೋ ಚೌ ಧ್ಯಾನ ಮಂದಿರದ ಹಿಂದೆ ಸುಮ್ಮನೇ ಓಡಾಡುತ್ತಿದ್ದ ಒಬ್ಬ ಯುವ ಸನ್ಯಾಸಿಯನ್ನು ಮಾತಾಡಿಸಿದ, “ಬೇರೆ ಸನ್ಯಾಸಿಗಳೆಲ್ಲ ಎಲ್ಲಿ? ಯಾರೂ ಕಾಣ್ತಾ ಇಲ್ವಲ್ಲ “ “ಎಲ್ಲ ಕೆಲಸಕ್ಕೆ ಹೋಗಿದ್ದಾರೆ” ಸನ್ಯಾಸಿ ಉತ್ತರಿಸಿದ. ಮಾಸ್ಟರ್, ಸನ್ಯಾಸಿಯ ಕೈಗೆ ಒಂದು ಹರಿತ ಚೂರಿ ಕೊಟ್ಚು, ತನ್ನ ಕತ್ತು ಮುಂದೆ ಮಾಡಿ ಕೇಳಿದ, “ಈ ಆಶ್ರಮದ ಮುಖ್ಯಸ್ಥನಾಗಿ ನನಗೆ ಕೆಲವು ಬಹಳ ಮುಖ್ಯ ಜವಾಬ್ದಾರಿಗಳಿವೆ, ನನ್ನ ಕುತ್ತಿಗೆ ಕತ್ತರಿಸಲು ಸಹಾಯ ಮಾಡುವೆಯಾ?” ಯುವ ಸನ್ಯಾಸಿ ದಿಕ್ಕಾಪಾಲಾಗಿ […]

“ನೀನು ಹೇಳೋದೂ ಸರಿನೇ….” : ಝೆನ್ ಸಂಭಾಷಣೆ

ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು. ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು. ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ. ಆಮೇಲೆ ಎರಡನೇ […]

ಗ್ಲಾಸಿನಷ್ಟಾಗಬೇಡ, ಕೊಳದಷ್ಟಾಗು : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ಗೆ ಒಬ್ಬ ಅತೃಪ್ತ ಶಿಷ್ಯನಿದ್ದ. ಆತ ಒಂದಿಲ್ಲೊಂದು ಕಾರಣದಿಂದ ಸದಾ ದುಃಖಿಯಾಗಿರುತ್ತಿದ್ದ. ಒಂದು ದಿನ ಶಿಷ್ಯ ಮಾಸ್ಟರ್ ಹತ್ತಿರ ಹೋಗಿ ಕೇಳಿಕೊಂಡ. “ಮಾಸ್ಟರ್, ನನ್ನ ಮೇಲೆ ನಿಮ್ಮ ಆಶೀರ್ವಾದವಿರಲಿ, ನನಗೂ ನಿಮ್ಮ ತಿಳಿವನ್ನು ದಯಪಾಲಿಸಿ, ನನಗೆ ದುಃಖದಿಂದ ಮುಕ್ತಿ ಬೇಕು, ಆನಂದವನ್ನು ಹುಡುಕಬೇಕು ನಾನು” ಮಾಸ್ಟರ್, ಆ ಅತೃಪ್ತ ಶಿಷ್ಯನಿಗೆ ಒಂದು ಮುಷ್ಟಿ ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಕರಗಿಸಿ, ಕುಡಿಯಲು ಹೇಳಿದರು. ಒಂದು ಗುಟುಕು ಉಪ್ಪಿನ ನೀರು ಬಾಯಿಗೆ ಬೀಳುತ್ತಲೇ […]

ದೇವರ ಅವಶ್ಯಕತೆ ಗಾಳಿಯಷ್ಟೇ ಮುಖ್ಯವಾದಾಗ ಬಾ : ಝೆನ್ ಕಥೆ

ಒಬ್ಬ ಝೆನ್ ಮಾಸ್ಟರ್ ನದಿಯ ದಂಡೆಯ ಮೇಲೆ ಧ್ಯಾನ ಮಗ್ನನಾಗಿದ್ದಾಗ ಯುವಕನೊಬ್ಬ ಅವನ ಹತ್ತಿರ ಬಂದು ಕೇಳಿಕೊಂಡ. ಯುವಕ : ಮಾಸ್ಟರ್, ನನ್ನನ್ನು ಶಿಷ್ಯನಾಗಿ ಸ್ವೀಕರಿಸಿ ಮಾಸ್ಟರ್ : ಯಾಕೆ? ಏನು ವಿಷಯ? ಯುವಕ : ನಾನು ದೇವರನ್ನು ಹುಡುಕಬೇಕು ಈ ಮಾತನ್ನು ಕೇಳುತ್ತಿದ್ದಂತೆಯೇ, ಮಾಸ್ಟರ್ ತನ್ನ ಜಾಗದಿಂದ ಕೆಳಗೆ ಜಿಗಿದು, ಯುವಕನ ಅಂಗಿಯ ಕಾಲರ್ ಹಿಡಿದು, ಅವನನ್ನು ದರದರನೇ ಎಳೆದುಕೊಂಡು ನದಿಯ ಹತ್ತಿರ ಬಂದು, ಅವನ ತಲೆಯನ್ನು ನದಿಯಲ್ಲಿ ಮುಳುಗಿಸಿ ಹಾಗೇ ಹಿಡಿದುಕೊಂಡ. ಕೆಲ ನಿಮಿಷಗಳಾಗುತ್ತಿದ್ದಂತೆಯೇ, […]

ಮಾಸ್ಟರ್ ಮತ್ತು ಟೀಚರ್ ನಡುವಿನ ಝೆನ್ ಸಂಭಾಷಣೆ

ಝೆನ್ ಮಾಸ್ಟರ್ ತನ್ನ ವಿದ್ಯಾರ್ಥಿಗಳಿಗೆ, ತಾನು ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆಯೊಂದನ್ನು ವಿವರಿಸಿ ಹೇಳುತ್ತಿದ್ದ. ನಮ್ಮ ಟೀಚರ್ ಮಧ್ಯಾಹ್ನ ಊಟ ಆಗುತ್ತಿದ್ದಂತೆಯೇ ಕ್ಲಾಸಿನಲ್ಲಿ ನಿದ್ದೆ ಹೋಗಿಬಿಡುತ್ತಿದ್ದ, ಯಾಕೆ ಹೀಗೆ ಎಂದು ಕೇಳಿದಾಗಲೆಲ್ಲ “ಪ್ರತೀ ಮಧ್ಯಾಹ್ನ ನಾನು ನಿದ್ದೆಯಲ್ಲಿ ಕನಸಿನೂರಿಗೆ ಹೋಗಿ ಜ್ಞಾನಿಗಳಾದ ಪೂರ್ವಜರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಕನ್ಫ್ಯೂಸಿಯಸ್ ನಂತೆ.” ಎಂದು ಸಮಜಾಯಿಷಿ ಕೊಡುತ್ತಿದ್ದ. ಒಂದು ಮಧ್ಯಾಹ್ನ, ಸಿಕ್ಕಾಪಟ್ಟೆ ಬಿಸಿಲಿತ್ತು. ನಾವು ಕೆಲವು ಹುಡುಗರು ಮಧ್ಯಾಹ್ನ ಊಟ ಆದ ಮೇಲೆ ಕ್ಲಾಸಿನಲ್ಲಿ ನಿದ್ದೆ ಹೋಗಿ ಬಿಟ್ಟಿದ್ದೆವು. ಕ್ಲಾಸಿಗೆ […]

ಝೆನ್ ಮಾಸ್ಟರ್ ಹಕುಯಿನ್ ನ ಪ್ರತಿಕ್ರಿಯೆ

ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು. ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ. ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು […]