“ಜ್ಞಾನಿಗಳು ಮಾತ್ರ ಈ ಸತ್ಯ ಬಲ್ಲರು” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.5

ಸತ್ಯ ಇರುವುದು ಸತ್ಯ; ಇದು ಕೇವಲ ಸಿದ್ಧಾಂತವಲ್ಲ. ಇದನ್ನ ಅನುಭವಿಸಿಯೇ ಕಂಡುಕೊಳ್ಳಬೇಕು. ಸತ್ಯದ ಬಗ್ಗೆ ಯೋಚನೆ ಸಾಧ್ಯವಿಲ್ಲ. ಸತ್ಯದ ಬಗ್ಗೆ ಫಿಲಾಸಫಿ ಸಾಧ್ಯವಿಲ್ಲ… ಅದಕ್ಕೆಂದೆ ಹೇಳುತ್ತೇನೆ, ಪಾಪಿಗಳು ಕಂಡಷ್ಟು ಸತ್ಯದ ಹೊಳಹುಗಳನ್ನ ತತ್ವಶಾಸ್ತ್ರಜ್ಞರೂ ಕಾಣುವುದು ಸಾಧ್ಯವಿಲ್ಲ…! ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ Return to the root | ಅಧ್ಯಾಯ 4, ಭಾಗ 5  ಸತ್ಯದ ಹುಡುಕಾಟ ನಿಲ್ಲಿಸಿ, ಪರ ವಿರೋಧ ದ ಬಗೆಗಿನ ಚರ್ಚೆಯನ್ನು ನಿಲ್ಲಿಸಿ. ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್, ಜೈನ್ ಯಾವ ಧರ್ಮದ ಬಗ್ಗೆಯೂ ಅಭಿಪ್ರಾಯಗಳನ್ನು […]

“ಗುರಿ ಆದಿಯಲ್ಲಿಯೇ ಇದೆ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.3

ಅರ್ಥ ಮನೆ ಮಾಡಿಕೊಂಡಿರುವುದು ಆದಿಯಲ್ಲಿ, ಬೀಜದಲ್ಲಿ. ಆದರೆ ಮನಸ್ಸಿಗೆ ಹೀಗೆ ಹುಡುಕುವುದು ಕಷ್ಟ, ಅದು ಭವಿಷ್ಯದಲ್ಲಿ ಹುಡುಕ ಬಯಸುತ್ತದೆ. ‘ಸಾಧನೆ’ ಯ ಅವಶ್ಯಕತೆ ಇರೋದೇ ಇಲ್ಲಿ. ಬೀಜವನ್ನು ಒಡೆದು ಅರ್ಥವನ್ನು ಕಂಡುಕೊಳ್ಳುವುದು ಸುಲಭದ ಮಾತಲ್ಲ ~ Return to the root | ಅಧ್ಯಾಯ 4, ಭಾಗ 3 ; ಮೂಲ: Hsin Hsin Ming | ಕನ್ನಡಕ್ಕೆ : ಚಿದಂಬರ ನರೇಂದ್ರ ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ ~ ಸೊಸಾನ್ ಆದಿಯೇ ಅಂತ್ಯ ಅಂತ್ಯ […]

“ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ…” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.2

ನೀವು ವೈರುಧ್ಯವನ್ನು ಬಳಸಿದಾಗ ಮಾತ್ರ ಅಸ್ತಿತ್ವವನ್ನು ಗುರುತಿಸಬಲ್ಲಿರಾದರೆ ಅದು ಅಸ್ತಿತ್ವವನ್ನು ಮಿಥ್ಯೀಕರಿಸಿದಂತೆ. ಏಕೆಂದರೆ, ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ… ! | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ ಅಧ್ಯಾಯ 4 : Return to the root (ಭಾಗ 2) ಮನಸ್ಸಿನ ಸ್ವಭಾವವೇ ವೈರುಧ್ಯಗಳನ್ನು ಸಮೀಕರಿಸುವುದು. ಈ ವೈರುಧ್ಯಗಳ ಸಹಾಯವಿಲ್ಲದೇ ಹೋದರೆ ಮನಸ್ಸಿಗೆ ಏನೂ ಅರ್ಥವಾಗುವುದಿಲ್ಲ. ‘ಬೆಳಕು’ ಎಂದರೇನು ಎಂಬ ಪ್ರಶ್ನೆಗೆ ಮನಸ್ಸು ಏನು ಉತ್ತರ ಹೇಳಬಲ್ಲದು ? ಕೂಡಲೇ ಕತ್ತಲೆಯನ್ನು ಸಹಾಯಕ್ಕಾಗಿ ಕರೆಯಲಾಗುತ್ತದೆ, ಯಾವುದು ಕತ್ತಲೆಯಲ್ಲವೋ ಅದನ್ನು ಬೆಳಕು ಎಂದು […]

“ಆಲೋಚಿಸಿದಷ್ಟೂ ನಿಜಸ್ಥಿತಿಯಿಂದ ದೂರ ಹೋಗುತ್ತೀರಿ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 3.1

ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,  ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ ಸಾಧ್ಯವಾಗಬಹುದಾದ ದರ್ಶನ ಆಲೋಚಕನಿಗೆ ಸಾಧ್ಯವಾಗುವುದಿಲ್ಲ ~ ಓಶೋ ರಜನೀಶ್ | ಕನ್ನಡಕ್ಕೆ : ಚಿದಂಬರ ನರೇಂದ್ರ ಅಧ್ಯಾಯ 3 : Truth can not be sought  ದಾರಿ ಅರ್ಥವಾಗದೇ ಹೋದಾಗ ವಿಷಯದ ನಿಜಸ್ಥಿತಿಯನ್ನು ನಿರಾಕರಿಸಲಾಗುತ್ತದೆ ಅಥವಾ  ಒತ್ತಿ ಹೇಳಲಾಗುತ್ತದೆ. ನಿರಾಕರಿಸುವುದೆಂದರೆ, ನಿಜದಿಂದ ದೂರ ಸಾಗುವುದು, ಒತ್ತಿಹೇಳುವುದೆಂದರೆ, ನಿಜದ ಖಾಲೀತನಕ್ಕೆ ಅಪಮಾನ ಮಾಡುವುದು. ನಿಜದ ಬಗ್ಗೆ ಎಷ್ಟು ಹೆಚ್ಚು ಮಾತನಾಡುತ್ತೀರೊ, ಎಷ್ಟು ಹೆಚ್ಚು  ಚಿಂತನೆ ಮಾಡುತ್ತೀರೊ, ಅಷ್ಟೇ ಹೆಚ್ಚು , ನಿಜದಿಂದ ದೂರವಾಗುತ್ತ ಹೋಗುತ್ತೀರಿ. ಮಾತು ನಿಲ್ಲಿಸಿದಾಗ, ಯೋಚಿಸುವುದ ಸ್ಥಗಿತಗೊಳಿಸಿದಾಗ ನಿಮಗೆ ತೆರೆದುಕೊಳ್ಳದ್ದು,  ಯಾವುದೂ ಇರುವುದಿಲ್ಲ ~ ಸೊಸಾನ್ ಪದ್ಯ ನಿಜ ಸ್ಥಿತಿ ಯಾವಾಗಲೂ  ನಿಮ್ಮ ಎದೆಯ ಬಾಗಿಲಲ್ಲಿ, ಕಣ್ಣ ಹತ್ತಿರ, ಬೆರಳ ತುದಿಯಲ್ಲಿ ನಿಮಗಾಗಿ ಕಾಯುತ್ತಿರುತ್ತದೆ. ಈ ಸ್ಥಿತಿಯನ್ನು ನೀವು ಮುಟ್ಟ ಬಹುದು ಅನುಭವಿಸಬಹುದು, ಬದುಕಬಹುದು, ಆದರೆ ಯೋಚಿಸುವುದು ಸಾಧ್ಯವಾಗುವುದಿಲ್ಲ. ‘ಯೋಚನೆ’ ಯ ಸ್ವಭಾವವನ್ನು  ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ‘ಯೋಚನೆ’ ಯಾವತ್ತೂ ನೇರವಲ್ಲ. ನೀವು ನಿಜಸ್ಥಿತಿಯ ‘ಬಗ್ಗೆ’ ಯೋಚಿಸಬಹುದೇ ಹೊರತು ನಿಜಸ್ಥಿತಿಯನ್ನು ನೇರವಾಗಿ ಚಿಂತನೆಗೆ ಒಳಪಡಿಸಲಾರಿರಿ. ಇಲ್ಲಿ ‘ಬಗ್ಗೆ’ ಎಂಬ ಶಬ್ದವೇ ಒಂದು ಜಾಲ. ‘ಬಗ್ಗೆ’ ಎಂದರೆ ಯಾವಾಗಲೂ ಪರೋಕ್ಷ. ಪ್ರತ್ಯಕ್ಷದಿಂದ ದೂರ. ಹೂವಿನ ಬಗ್ಗೆ  ಯೋಚಿಸುವುದೆಂದರೆ ಹೂವನ್ನು ದೂರ ನಿಂತು ನೋಡುವುದು. ಆಗ ‘ಬಗ್ಗೆ’ ಒಂದು ಅಡ್ಡಗೋಡೆ. ಹೀಗಾದಾಗ, ಹೂವನ್ನು ನೇರವಾಗಿ ತಲಪುವುದು ಸಾಧ್ಯವೇ ಇಲ್ಲ. ನೋಡುವುದು ನೇರ, ಮುಟ್ಟುವುದು ನೇರ, ಅನುಭವಿಸುವುದು ನೇರ. ಆದರೆ ಚಿಂತನೆ ಮಾತ್ರ ಪರೋಕ್ಷ. ಆದ್ದರಿಂದಲೇ,  ಪ್ರೇಮಿಗೆ, ನೃತ್ಯಪಟುವಿಗೆ, ಸಂಗೀತಗಾರನಿಗೆ, ರೈತನಿಗೆ […]