ಪ್ರಮುಖ ದರ್ಶನಗಳು | ಸನಾತನ ಸಾಹಿತ್ಯ ~ ಮೂಲಪಾಠಗಳು #33

ಸನಾತನ ಧರ್ಮದ ತತ್ತ್ವ ಸಿದ್ಧಾಂತಗಳನ್ನು ಸಾರುವ ದರ್ಶನಗಳ ಬಗ್ಗೆ ಪ್ರಾಥಮಿಕ ಮಾಹಿತಿ ಇಲ್ಲಿದೆ…. ಸನಾತನ ಧರ್ಮದ ತತ್ತ್ವಸಿದ್ಧಾಂತಗಳ ಕವಲುಗಳನ್ನು ದರ್ಶನಗಳೆಂದು ಕರೆಯಲಾಗುತ್ತದೆ. ಮೂಲತಃ ಒಂಭತ್ತು ಪ್ರಮುಖ ದರ್ಶನಗಳಿದ್ದು, ಅವುಗಳಲ್ಲಿ ಆರು ದರ್ಶನಗಳು ರೂಢಿಯಲ್ಲಿವೆ. ಇವನ್ನು ಒಟ್ಟಾಗಿ ‘ಷಡ್ ದರ್ಶನಗಳು’ ಎಂದು ಕರೆಯಲಾಗುತ್ತದೆ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸ (ಉತ್ತರ ಮೀಮಾಂಸ) , ವೇದಾಂತ, ಜೈನ, ಬೌದ್ಧ, ಚಾರ್ವಾಕ, ಇವು ಒಂಭತ್ತು ಪ್ರಮುಖ ದರ್ಶನಗಳು. ಅವುಗಳಲ್ಲಿ ಜೈನ, ಬೌದ್ಧ, ಚಾರ್ವಾಕ ದರ್ಶನಗಳನ್ನು ಹೊರತು ಪಡಿಸಿ ಷಡ್’ದರ್ಶನಗಳು ಚಾಲ್ತಿಯಲ್ಲಿವೆ. ಬಹುಶಃ, ನಂತರದಲ್ಲಿ ಜೈನ ಮತ್ತು ಬೌದ್ಧ ದರ್ಶನಗಳು […]

ಪ್ರಶ್ನೆ ಕೇಳುವ ಪ್ರಕ್ರಿಯೆ

ತಿಳಿಯುವಿಕೆ ಎಂಬುದು ಒಂದು ಪ್ರಕ್ರಿಯೆ. ಎಲ್ಲಾ ಗ್ರಂಥಗಳು, ತರ್ಕಗಳು ಮತ್ತು ವಿಚಾರಗಳು ಹುಟ್ಟುವುದು ಈ ತಿಳಿಯುವಿಕೆಯ ಪ್ರಕ್ರಿಯೆಯಲ್ಲಿ. ~ ಅಚಿಂತ್ಯ ಚೈತನ್ಯ ಮನುಷ್ಯ ಎದುರಿಸುವ ಬಹುಮುಖ್ಯ ಪ್ರಶ್ನೆ ಯಾವುದು? ಇದಕ್ಕೆ ಇರುವುದು ಒಂದೇ ಉತ್ತರ. ಇದನ್ನು ಸಕರಾತ್ಮಕವಾಗಿ ಮಂಡಿಸ ಹೊರಟರೆ ಆ ಪ್ರಶ್ನೆ ‘ಏನು ಮಾಡಬೇಕು?’ ಎಂದಿರುತ್ತದೆ. ಇದನ್ನೇ ನಕರಾತ್ಮಕವಾಗಿ ಮಂಡಿಸಿದರೆ ‘ಏನು ಮಾಡಬಾರದು?’ ಎಂದಾಗುತ್ತದೆ. ಎರಡಲ್ಲದ ಈ ಒಂದು ಪ್ರಶ್ನೆಯ ಉತ್ತರ ಅಥವಾ ಎರಡಾಗಿ ಕಾಣಿಸುವ ಈ ಒಂದು ಪ್ರಶ್ನೆಯ ಉತ್ತರ ನಮ್ಮ ಅನುಕ್ಷಣದ ನಿರ್ಧಾರಗಳನ್ನು ಪ್ರೇರೇಪಿಸುತ್ತದೆ. ನಾವು ಅಧ್ಯಾತ್ಮ ಎಂದು ಕರೆಯುವ ಪರಿಕಲ್ಪನೆಯನ್ನು […]