ಡೈಮಂಡ್ ಸೂತ್ರ ಮತ್ತು ರೊಟ್ಟಿಯ ಮುದುಕಿ : ಝೆನ್ ಕಥೆ

ಮುದುಕಿ ಕೇಳಿದಳು, “ಈ ರೊಟ್ಟಿಗಳನ್ನು ತಿನ್ನುವಾಗ ನೀನು ಭೂತದ ಮನಸಿನಿಂದ ತಿನ್ನುತ್ತೀಯೋ, ವರ್ತಮಾನದ ಮನಸಿನಿಂದ ತಿನ್ನುತ್ತೀಯೋ ಅಥವಾ ಭವಿಷ್ಯದ ಮನಸಿನಿಂದ ತಿನ್ನುತ್ತೀಯೋ?” ಆಗ ಝೆನ್ ಸನ್ಯಾಸಿ ಏನು ಮಾಡಿದ ಗೊತ್ತಾ? ಈ ಕಥೆ ಓದಿ । ಸಂಗ್ರಹ ಮತ್ತು ಅನುವಾದ: ಅಲಾವಿಕಾ

ಮುದುಕಿಗೆ ಸಿಟ್ಟು ಬಂದಿದ್ಯಾಕೆ? : ಟೀ ಟೈಮ್ ಸ್ಟೋರಿ

ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಶೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು. ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು. ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನನ್ನು ಅಪ್ಪಿಕೊಂಡು “ ಮುಂದೇನು “ ಎಂದು […]

ಹಲೋ ಮಿಸ್ಟರ್! ನೀನು ಆರನೆಯವನಾಗಿ ಬರುವೆಯಾ!?

ಗ್ರೀಕ್ ದೇಶದ ಕ್ರೀಟ್ ದ್ವೀಪದಲ್ಲಿ ಬಿಷಪ್ ಕ್ರೆಟಿನ್’ನ ಒಂದು ಪುಟ್ಟ ಚರ್ಚ್ ಇತ್ತು. ಆರಕ್ಕಿಂತ ಕಡಿಮೆ ಜನರಿದ್ದರೆ ಚರ್ಚ್ ತನ್ನ ಸೇವಾ ಪ್ರಾರ್ಥನೆಗಳನ್ನು ನಡೆಸಲಾಗುವುದಿಲ್ಲ ಎಂಬುದು ಆ ಗ್ರೀಕ್ ಸಾಂಪ್ರದಾಯಿಕ ಚರ್ಚಿನ ನಿಯಮಗಳಲ್ಲಿ ಒಂದಾಗಿತ್ತು. ಅದರಂತೆ ದಿನಾಲೂ ಆ ಊರಿನ ಆರು ಮುದುಕಿಯರು ಸಂಜೆಯ ಪ್ರಾರ್ಥನೆಗೆ ಬರುತ್ತಿದ್ದರು. ಒಂದು ದಿನ ಅವರಲ್ಲೊಬ್ಬ ಮುದುಕಿ ಸತ್ತುಹೋದಳು. ಮಾರನೆ ದಿನ ಸಂಜೆ ಪ್ರಾರ್ಥನೆಗೆ ಕೇವಲ ಐವರು ಮುದುಕಿಯರಿದ್ದಾರೆ! ಬಿಷಪ್ ಚಿಂತಿತನಾದ. ಅವರಲ್ಲೊಬ್ಬ ಮುದುಕಿಯನ್ನು ಕರೆದು, “ಈಗಿಂದೀಗಲೇ ಹೊರಗೆ ಹೋಗಿ ರಸ್ತೆಯಲ್ಲಿ […]