ಅಲ್ಲಾಹ್ ನ ಕೃಪೆಯಿದ್ದರೆ ಅನ್ನುತಿದ್ದ ದರ್ಜಿಗೆ ನಸ್ರುದ್ದೀನ್ ಉತ್ತರ : Tea time Story

ಹಬ್ಬ ಇನ್ನೂ ತಿಂಗಳಿರುವಾಗಲೇ ಮುಲ್ಲಾ ನಸ್ರುದ್ದೀನ ಬಟ್ಟೆ ಅಂಗಡಿಗೆ ಹೋಗಿ ಎರಡು ಅಂಗಿಗಳಿಗೆ ಸಾಕಾಗುವಷ್ಟು ಬಟ್ಟೆ ಖರೀದಿ ಮಾಡಿ ದರ್ಜಿಯ ಅಂಗಡಿಗೆ ಬಟ್ಟೆ ತೆಗೆದುಕೊಂಡು ಹೋದ. ಮುಲ್ಲಾನ ಅಂಗಿ ಹೊಲೆಯಲು ಅಳತೆ ತೆಗೆದುಕೊಂಡ ದರ್ಜಿ “ಮುಂದಿನ ವಾರ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹ್ ನ ಕೃಪೆ ಇದ್ದರೆ” ಎಂದ. ಒಂದು ವಾರದ ಬಳಿಕ ಮುಲ್ಲಾ ದರ್ಜಿಯ ಅಂಗಡಿಗೆ ಹೋದ. “ದುರದೃಷ್ಟವಶಾತ್ ನಿನ್ನ ಅಂಗಿ ಇನ್ನೂ ತಯಾರಾಗಿಲ್ಲ, ನಾಳೆ ಬಾ, ನಿನ್ನ ಅಂಗಿ ತಯಾರಾಗಿರುತ್ತದೆ, ಅಲ್ಲಾಹ್ ನ […]

ಟಿಕೇಟ್ ಕಳೆದುಕೊಂಡ ಮುಲ್ಲಾ ನಸ್ರುದ್ದೀನ್! : Tea time story

ಒಮ್ಮೆ ಮುಲ್ಲಾ ನಸ್ರುದ್ದೀನ, ರೈಲು ಪ್ರಯಾಣ ಮಾಡುತ್ತಿದ್ದ. ತನ್ನ ಕಂಪಾರ್ಟಮೆಂಟ್ ಗೆ ಟಿಕೇಟ್ ಕಲೆಕ್ಟರ್ ಬರುತ್ತಿರುವುದನ್ನ ದೂರದಿಂದ ಗಮನಿಸಿದ ಮುಲ್ಲಾ, ಸಹ ಪ್ರಯಾಣಿಕರ ಜೇಬುಗಳಲ್ಲಿ, ಚೀಲಗಳಲ್ಲಿ ತನ್ನ ಟಿಕೇಟ್ ಹುಡುಕತೊಡಗಿದ. ಮುಲ್ಲಾನ ಈ ವರ್ತನೆಯನ್ನು ನೋಡಿ ಆಶ್ಚರ್ಯಚಕಿತನಾದ ಸಹ ಪ್ರಯಾಣಿಕನೊಬ್ಬ ಪ್ರಶ್ನೆ ಮಾಡಿದ. “ ಹಿರಿಯರೆ ನಿಮ್ಮ ಟಿಕೇಟು ನಿಮ್ಮ ಜೇಬು ಅಥವಾ ನಿಮ್ಮ ಚೀಲದಲ್ಲಿರಬೇಕಲ್ಲವೆ? ನೀವು ಅಲ್ಲಿ ಬಿಟ್ಟು ಬೇರೆಲ್ಲ ಕಡೆ ಹುಡುಕುತ್ತಿದ್ದೀರಲ್ಲ?” “ಹೌದು ನಾನು ಅಲ್ಲಿ ಹುಡುಕಬಹುದಿತ್ತು ಆದರೆ ಟಿಕೇಟು ಅಲ್ಲಿ ಸಿಗದಿದ್ದರೆ ನನ್ನ […]

ತನಗೆ ತಾನೇ ಹೆದರಿದ ನಸ್ರುದ್ದೀನ್! : Tea time story

ಅಮ್ಮ ಕೇಳಿಕೊಂಡಿದ್ದು ತನ್ನ ಮಗನನ್ನು ಹೆದರಿಸಲು. ಆದರೆ ಮುಲ್ಲಾ ನಸ್ರುದ್ದೀನ್ ಮಾಡಿದ್ದೇನು!? ~ ಒಂದು ನಸ್ರುದ್ದೀನ್ ಕಥೆ | ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ ಒಮ್ಮೆ, ಒಬ್ಬ ಹೆಣ್ಣುಮಗಳು ತನ್ನ ಮಗನೊಂದಿಗೆ ಮುಲ್ಲಾ ನಸ್ರುದ್ದೀನನ ಹತ್ತಿರ ಬಂದಳು. “ ಹಿರಿಯರೇ, ಈ ನನ್ನ ಮಗ ತುಂಬಾ ಹಟಮಾರಿಯಾಗುತ್ತಿದ್ದಾನೆ, ಒರಟನಾಗುತ್ತಿದಿದ್ದಾನೆ ಏನಾದರೂ ಮಾಡಿ ಅವನೊಳಗೆ ಸ್ವಲ್ಪ ಹೆದರಿಕೆಯನ್ನು ಹುಟ್ಟಿಸಿ, ಇಲ್ಲವಾದರೆ ಅವನು ನನ್ನ ಕೈಮೀರಿ ಹೋಗುತ್ತಾನೆ” ಮುಲ್ಲಾ ಕ್ರೂರವಾಗಿ ಆ ಮಗನ ಕಣ್ಣಲ್ಲೊಮ್ಮೆ ದಿಟ್ಟಿಸಿ ನೋಡಿ […]

ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದಿದ್ದರೆ…. : ಒಂದು ನಸ್ರುದ್ದೀನ್ ಕಥೆ

ನಶೆಯೇರಿ ಅಲೆಯುತ್ತಿದ್ದ ಮುಲ್ಲಾ ನಸ್ರುದ್ದೀನನನ್ನು ಪೊಲೀಸನೊಬ್ಬ ತಡೆದು “ಯಾರು ನೀನು? ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೀಯ?” ಎಂದು ಕೇಳಿದ. ಅದಕ್ಕೆ ನಸ್ರುದ್ದೀನ್ ಕೊಟ್ಟ ಉತ್ತರವೇನು ಗೊತ್ತೆ!? 

ಕತ್ತೆಯೊಡನೆ ಕುಸ್ತಿ ಆಡುವ ಕನಸು : ನಸ್ರುದ್ದೀನನ ಕಥೆಗಳು

ಕೆಲ ದಿನಗಳಿಂದ ಮುಲ್ಲಾ ನಸ್ರುದ್ದೀನ್ ಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ರಾತ್ರಿ ಎಚ್ಚರವಾಗಿಬಿಡುತ್ತಿತ್ತು. ತನ್ನ ಈ ಸಮಸ್ಯೆಯನ್ನು ತನ್ನ ಬಂಧು ಬಳಗದವರ ಹತ್ತಿರ ಮುಲ್ಲಾ ಹಂಚಿಕೊಂಡ, “ ನನಗೆ ಕೆಲ ದಿನಗಳಿಂದ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕತ್ತೆಯೊಡನೆ ಕುಸ್ತಿ ಆಡುವ ಕನಸುಗಳು ಬೀಳುತ್ತವೆ.” ಮುಲ್ಲಾನ ಸಮಸ್ಯೆ ಕೇಳಿ ಸಂಬಧಿಕರು ಚಿಂತಿತರಾದರು. ಅವನನ್ನು ಹತ್ತಿರದ ಮಂತ್ರದ ಮದ್ದು ಮಾಡುವ ವೈದ್ಯನ ಹತ್ತಿರ ಕರೆದುಕೊಂಡು ಹೋದರು. ಮುಲ್ಲಾನ ಸಮಸ್ಯೆಯನ್ನು ಕೂಲಂಕಷವಾಗಿ ಕೇಳಿಸಿಕೊಂಡ ವೈದ್ಯ, ಕೆಲವು ಗಿಡ ಮೂಲಿಕೆಗಳನ್ನು ರುಬ್ಬಿ […]

ಮೊದಲೇ ಯಾಕೆ ಉತ್ತರಿಸಲಿಲ್ಲ? : ಒಂದು ನಸ್ರುದ್ದೀನ್ ಕಥೆ

ಒಂದು ದಿನ ಮುಲ್ಲಾ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬ ಅಪರಿಚಿತ ದಾರಿಹೋಕ ಅಲ್ಲಿಗೆ ಬಂದು ಒಂದು ನಿರ್ಧಿಷ್ಟ ಊರಿಗೆ ಹೋಗಲು ದಾರಿ ವಿಚಾರಿಸಿದ. ಮುಲ್ಲಾ ಒಂದು ನಿಮಿಷ ವಿಚಾರ ಮಾಡಿ ಆ ಊರಿಗೆ ಹೋಗಲು ದಾರಿಯನ್ನು ಅತ್ಯಂತ ಸ್ಪಷ್ಟವಾಗಿ ಹೇಳಿಕೊಟ್ಟ. ಆಮೇಲೆ ಆ ದಾರಿಹೋಕ ತಿರುಗಿ ಪ್ರಶ್ನೆ ಮಾಡಿದ “ ಧನ್ಯವಾದ ಗೆಳೆಯ ಆ ಊರು ಮುಟ್ಟಲು ನನಗೆ ಎಷ್ಟು ಸಮಯ ಹಿಡಿಯಬಹುದು?” ಮುಲ್ಲಾ ಆ ದಾರಿಹೋಕನನ್ನೊಮ್ಮೆ ದಿಟ್ಟಿಸಿ ನೋಡಿ ತನ್ನ ಕೆಲಸದಲ್ಲಿ ಮಗ್ನನಾದ. ದಾರಿಹೋಕ […]

ನಸ್ರುದ್ದೀನ್ ಏಕೆ ಮದುವೆಯಾಗಲಿಲ್ಲ!? : Tea time story

ನಸ್ರುದ್ದೀನ್ ಪ್ರವಾಸದಲ್ಲಿದ್ದ. ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಏನೋ ಒಂದು ಉತ್ತರ ಕೊಟ್ಟುಬಿಡುತ್ತಿದ್ದ. ಅಪರಿಚಿತ ಪ್ರದೇಶಗಳಲ್ಲಿ ತನ್ನ ಖಾಸಗಿ ವಿವರಗಳನ್ನು ಯಾಕೆ ಹೇಳಬೇಕು ಅನ್ನೋದು ಅವನ ತರ್ಕ. ಹೀಗೇ ಒಂದೂರಿನಲ್ಲಿ ನಸ್ರುದ್ದೀನ್ ಅರಳಿಕಟ್ಟೆಯಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದ. ಆಗ ಅವನನ್ನು ಒಂದಷ್ಟು ಜನ ಬಂದು ಮುತ್ತಿಕೊಂಡರು. ಅವನ ಪರಿಚಯ ಮಾಡಿಕೊಂಡು, ಅದೂ ಇದೂ ಮಾತಾಡುತ್ತಾ “ನಸ್ರುದ್ದೀನ್, ನಿನಗೆ ಮದುವೆಯಾಗಿದೆಯಾ?” ಎಂದು ಕೇಳಿದರು. ಸಂಭಾಷಣೆ ಬೇಗ ಮುಗಿದುಹೋಗಲಿ ಅಂದುಕೊಂಡು ನಸ್ರುದ್ದೀನ್, “ಇಲ್ಲ” ಅಂದುಬಿಟ್ಟ. ಅವನ ಎಣಿಕೆಯಂತೆ ಆ ಜನರು ಅಷ್ಟಕ್ಕೆ […]

ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?

ಒಮ್ಮೆ ಪಂಚಾಯ್ತಿ ಕಟ್ಟೆಯಲ್ಲಿ ಭಾರೀ ಚರ್ಚೆ ಏರ್ಪಟ್ಟಿತು. ಹಳ್ಳಿಯ ಹತ್ತು ಸಮಸ್ತರು ಬಂದು ಕುಳಿತಿದ್ದರು. ತತ್ತ್ವಜ್ಞಾನಿಗಳು, ಪಂಡಿತರು ಅಲ್ಲಿದ್ದರು. “ಜಗತ್ತು ಯಾವಾಗ ಕೊನೆಗೊಳ್ಳುತ್ತದೆ” ಎನ್ನುವುದು ಅವರ ಚರ್ಚೆಯ ವಿಷಯವಾಗಿತ್ತು. ಸಂಜೆ ಮುಗಿದರೂ ಅವರ ಚರ್ಚೆ ಮುಗಿಯುವ ಲಕ್ಷಣಗಳು ಕಾಣಲಿಲ್ಲ. ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಕೆಂಬಣ್ಣದ ಹಿನ್ನೆಲೆಯಲ್ಲಿ ಮುಲ್ಲಾ ನಸ್ರುದ್ದಿನ್ ಕತ್ತೆ ಹೊಡೆದುಕೊಂಡು ಬರುತ್ತಿರುವುದು ಕಾಣಿಸಿತು. ಇನ್ನು ಮಾತಾಡಿ ಉಪಯೋಗವಿಲ್ಲ ಎಂದು ಬಟ್ಟೆ ಕೊಡವಿಕೊಂಡು ಏಳುತ್ತಿದ್ದವರೆಲ್ಲ ಹಾಗೇ ಕುಳಿತರು. ಸಮಸ್ತರಲ್ಲಿ ಒಬ್ಬ ಮುಲ್ಲಾ ನಸ್ರುದ್ದೀನನನ್ನು ತಡೆದು, “ನೋಡು, ಬೆಳಗಿನಿಂದ […]