ನಾನು ಬಡವನೆಂದು ದುಡ್ಡು ಕೇಳಲು ಬಂದವನಿಗೆ ಮುಲ್ಲಾ ನಸ್ರುದ್ದೀನ್ ಹೇಳಿದ್ದೇನು ಗೊತ್ತಾ!?
ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?
ಒಮ್ಮೆ ಪಂಚಾಯ್ತಿ ಕಟ್ಟೆಯಲ್ಲಿ ಭಾರೀ ಚರ್ಚೆ ಏರ್ಪಟ್ಟಿತು. ಹಳ್ಳಿಯ ಹತ್ತು ಸಮಸ್ತರು ಬಂದು ಕುಳಿತಿದ್ದರು. ತತ್ತ್ವಜ್ಞಾನಿಗಳು, ಪಂಡಿತರು ಅಲ್ಲಿದ್ದರು. “ಜಗತ್ತು ಯಾವಾಗ ಕೊನೆಗೊಳ್ಳುತ್ತದೆ” ಎನ್ನುವುದು ಅವರ ಚರ್ಚೆಯ ವಿಷಯವಾಗಿತ್ತು. ಸಂಜೆ ಮುಗಿದರೂ ಅವರ ಚರ್ಚೆ ಮುಗಿಯುವ ಲಕ್ಷಣಗಳು ಕಾಣಲಿಲ್ಲ. ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಕೆಂಬಣ್ಣದ ಹಿನ್ನೆಲೆಯಲ್ಲಿ ಮುಲ್ಲಾ ನಸ್ರುದ್ದಿನ್ ಕತ್ತೆ ಹೊಡೆದುಕೊಂಡು ಬರುತ್ತಿರುವುದು ಕಾಣಿಸಿತು. ಇನ್ನು ಮಾತಾಡಿ ಉಪಯೋಗವಿಲ್ಲ ಎಂದು ಬಟ್ಟೆ ಕೊಡವಿಕೊಂಡು ಏಳುತ್ತಿದ್ದವರೆಲ್ಲ ಹಾಗೇ ಕುಳಿತರು. ಸಮಸ್ತರಲ್ಲಿ ಒಬ್ಬ ಮುಲ್ಲಾ ನಸ್ರುದ್ದೀನನನ್ನು ತಡೆದು, “ನೋಡು, ಬೆಳಗಿನಿಂದ […]