ನಂಬಿ ಕೆಟ್ಟವರಿಲ್ಲ… ಮೂಢನಂಬಿಕೆಯಲ್ಲಿ ಉದ್ಧಾರವಾದವರಿಲ್ಲ!

ಸ್ವಾಮಿ ವಿವೇಕಾನಂದರಂತೂ ತಮ್ಮ ಜನರು ಮೌಢ್ಯದಿಂದ ರೂಢಿಸಿಕೊಂಡ ನಂಬಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ದೇಶ ಹಿಂದುಳಿದಿರುವುದಕ್ಕೆ ಜನರಲ್ಲಿನ ಮೂಢನಂಬಿಕೆ ಮತ್ತು ಕಂದಾಚಾರಗಳೇ ಕಾರಣ ಎನ್ನುತಿದ್ದ ವಿವೇಕಾನಂದರು, ತಮ್ಮ ಬಹುತೇಕ ಉಪನ್ಯಾಸಗಳಲ್ಲಿ ಈ ಕುರಿತು ಎಚ್ಚರಿಸಿದ್ದಾರೆ ~ ಗಾಯತ್ರಿ ನಂಬಿಕೆ ಇದ್ದಲ್ಲಿ ಶ್ರದ್ಧೆ ಮೂಡುತ್ತದೆ. ತಾನು ಉತ್ತಮ ಕೆಲಸ ಮಾಡುತ್ತಿದ್ದೇನೆ ಎನ್ನುವ ನಂಬಿಕೆ, ಒಂದು ಕೆಲಸವನ್ನು ಮಾಡುವುದರಿಂದ ತನಗೆ ಒಳಿತಾಗುತ್ತದೆ ಎನ್ನುವ ನಂಬಿಕೆಯೇ ಶ್ರದ್ಧೆಯ ಹುಟ್ಟು – ಬೆಳವಣಿಗೆಗೆ ಇಂಬಾಗುತ್ತದೆ. ರಾಮಾಯಣದಲ್ಲಿ ಹನುಮಂತ ಸಾಗರೋಲ್ಲಂಘನ ಮಾಡಿದ ಪ್ರಸಂಗ ಇದಕ್ಕೆ ಅತ್ಯುತ್ತಮ […]