
ಯಾರು ಮೂರ್ಖ!? : ಒಂದು ನಸ್ರುದ್ದೀನ್ ಕಥೆ
ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ
ಝೆನ್ ಗುರುವಿನ ಶಿಷ್ಯ ಕಪ್ಪೆ ಮೇಲೆ ಪ್ರಯೋಗ ನಡೆಸಿ, ಕಂಡುಕೊಂಡ ಫಲಿತಾಂಶ ತಿಳಿದರೆ ನೀವು ಹೊರಳಾಡಿ ನಗ್ತೀರಿ!! ಆ ಮೂರ್ಖ ಶಿಷ್ಯನ ಕಥೆ ಇಲ್ಲಿದೆ ಓದಿ. Continue reading ಮೂರ್ಖ ಶಿಷ್ಯನ ಪ್ರಯೋಗ ಮತ್ತು ಫಲಿತಾಂಶ : Tea time story Poster
: ಯಾದಿರಾ ವಾ-ಐನ್-ಸಾಇಲ್ ಪೂರ್ವಾಶ್ರಮದಲ್ಲಿ ಮೂರ್ಖನಾಗಿದ್ದ ಎಂಬುದು ಆಶ್ರಮದಲ್ಲಿದ್ದ ಎಲ್ಲರಿಗೂ ತಿಳಿದಿದ್ದ ಸಂಗತಿ. ಇದನ್ನು ವಾ-ಐನ್ ಕೂಡಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ರಾ-ಉಮ್ ನ ಪ್ರೀತಿ ಪಾತ್ರ ಶಿಷ್ಯರಲ್ಲಿ ಒಬ್ಬನಾಗಿದ್ದ ಅವನ ಬಗ್ಗೆ ಇತರರಿಗೆ ಒಂದು ಬಗೆಯ ಅಸೂಯೆಯೂ ಇತ್ತು. ಕೆಲವರಂತೂ ವಾ-ಐನ್ ಈಗಲೂ ಮೂರ್ಖನೇ ಎಂದು ವಾದಿಸುತ್ತಿದ್ದರು. ಒಂದು ದಿನ ರಾ-ಉಮ್ ತನ್ನ ಶಿಷ್ಯರನ್ನೆಲ್ಲಾ ಕರೆದು ಗೂಢ ಮಂತ್ರವೊಂದನ್ನು ಬೋಧಿಸಿ “ಕಷ್ಟ ಕಾಲದಲ್ಲಿ ಇದನ್ನು ಪಠಿಸಿದರೆ ಅದು ತಕ್ಷಣವೇ ನಿವಾರಣೆಯಾಗುವುದು. ಇದು ಪರಿಣಾಮಕಾರಿಯಾಗಿ ಉಳಿಯಬೇಕೆಂದರೆ ಈ ಮಂತ್ರ ನಿಮ್ಮಲ್ಲಷ್ಟೇ ಉಳಿದಿರಬೇಕು. ಇದನ್ನು ಯಾರಿಗಾದರೂ ಹೇಳಿಕೊಟ್ಟರೆ ಅದು ಕೆಲಸ ಮಾಡುವುದಿಲ್ಲ” ಎಂದು ಹೇಳಿದಳು. … Continue reading ಗುರುವಿನ ಗುಣ : ಯಾದಿರಾ ಹೇಳುವ ‘ರಾ-ಉಮ್’ ಕಥೆಗಳು
ಪ್ರಸಹ್ಯ ಮಣಿಮುದ್ಧರೇನ್ಮಕರ ವಕ್ತ್ರ ದಂಷ್ಟ್ರಾಂತರಾತ್ ಸಮುದ್ರಮಪಿ ಸಂತರೇತ್ಪ್ರಚಲ ದೂರ್ಮಿಮಾಲಾಕುಲಮ್ | ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವದ್ಧಾರಯೇತ್ ನ ತು ಪ್ರತಿನಿವಿಷ್ಟಮೂರ್ಖಜನ ಚಿತ್ತಮಾರಾಧಯೇತ್||3|| ಅರ್ಥ : ಮೊಸಳೆಯ ಹಲ್ಲುಗಳ ನಡುವೆ ಸಿಲುಕಿದ ಮಣಿಯನ್ನಾದರೂ ಹೊರಗೆ ತೆಗೆಯಬಹುದು; ಹೆದ್ದೆರೆಗಳಿಂದ ಆರ್ಭಟಿಸುತ್ತಿರುವ ಸಮುದ್ರವನ್ನಾದರೂ ದಾಟಿಬಿಡಬಹುದು; ಕೋಪದಿಂದ ಫೂತ್ಕರಿಸುತ್ತಿರುವ ವಿಷದ ಹಾವನ್ನೂ ಹೂವಿನಂತೆ ತಲೆಯಲ್ಲಿ ಹೊತ್ತು ತಿರುಗಬಹುದು. ಆದರೆ ಮೂರ್ಖರಿಗೆ ಬುದ್ಧಿ ಹೇಳುವುದು ಮಾತ್ರ ಸಾಧ್ಯವಾಗದ ಮಾತು. ತಾತ್ಪರ್ಯ : ಹರಿತವಾಗ ಗರಗಸದಂಥ ಹಲ್ಲುಗಳುಳ್ಳ ಮೊಸಳೆಯ ಬಾಯಿಗೆ ಕೈಹಾಕುವುದೇ ಅಪಾಯಕಾರಿ ಸಂಗತಿ. ಇನ್ನು ಅದರ ಬಾಯಿಗೆ ಕೈಹಾಕಿ, ಅದರ ಹಲ್ಲುಗಳ ನಡುವೆ ಸಿಲುಕಿರುವ ಮಣಿಯನ್ನು ಹೊರಗೆ ತೆಗೆಯುವುದು ಸಾಧ್ಯವಿಲ್ಲದ … Continue reading ಮೂರ್ಖರಿಗೆ ಬುದ್ಧಿ ಹೇಳುವುದು ಸಾಧ್ಯವೇ ಇಲ್ಲದ ಮಾತು ~ ಭರ್ತೃಹರಿಯ ಸುಭಾಷಿತಗಳು #3
ಜಪಾನಿನ ಆಂತರಿಕ ಕಲಹದ ಕಾಲದಲ್ಲಿ ಒಮ್ಮೆ ರಾಜನ ಸೈನ್ಯ ಒಂದು ಹಳ್ಳಿಯನ್ನು ಆಕ್ರಮಿಸಿಕೊಂಡಿತು. ಆ ಹಳ್ಳಿಯ ಎಲ್ಲ ಜನರು ಸೈನ್ಯಾಧಿಕಾರಿಯ ಮುಂದೆ ಬಂದು ಕೈಕಟ್ಚಿ ನಿಂತುಕೊಂಡರು ಆದರೆ ಒಬ್ಬ ಝೆನ್ ಮಾಸ್ಟರ್ ನನ್ನು ಮಾತ್ರ ಹೊರತುಪಡಿಸಿ. ಆಶ್ಚರ್ಯಚಕಿತನಾದ ಸೈನ್ಯಾಧಿಕಾರಿ ತಾನೇ ಸ್ವತಃ ಆಶ್ರಮಕ್ಕೆ ಭೇಟಿಕೊಟ್ಟು ಮಾಸ್ಟರ್ ನನ್ನು ಕಾಣಲು ಬಯಸಿದ. ತನ್ನನ್ನು ಕಾಣಲು ಬಂದ ಅಧಿಕಾರಿಯನ್ನು ಮಾಸ್ಟರ್ ಎದ್ದು ಹೋಗಿ ಸ್ವಾಗತಿಸಲಿಲ್ಲ. ಈ ಅವಮಾನ ಸಹಿಸದ ಸೈನ್ಯಾಧಿಕಾರಿ ಆಕ್ರೋಶದಿಂದ ತನ್ನ ಖಡ್ಗವನ್ನು ಒರೆಯಿಂದ ಹಿರಿಯುತ್ತ, “ಮೂರ್ಖ ಮುದುಕ, ನೀನು ಯಾರ ಎದುರು ನಿಂತಿದ್ದೀಯ ಗೊತ್ತಿದೆಯೆ? ನಾನು ಮನಸ್ಸು ಮಾಡಿದರೆ ಕಣ್ಣು ಮುಚ್ಚಿ … Continue reading ಕಣ್ಣು ಮುಚ್ಚಿ ತೆಗೆಯುವುದರ ಒಳಗೆ ! : ಝೆನ್ ಕಥೆ
ವರ್ಷೋಪಾಧ್ಯಾಯನು ವರರುಚಿಗೆ ಪಾಟಲೀಪುತ್ರ ನಗರದ ವೈಭವಗಾಥೆಯನ್ನು ಹೇಳುತ್ತಿದ್ದಾನೆ. ಇಲ್ಲಿಯವರೆಗೆ… ಪುತ್ರಕನು ತನ್ನ ತಂದೆ ಮತ್ತು ಆತನ ಸಹೋದರರನ್ನು ಮರಳಿ ಪಡೆದನು. ಆದರೆ ಅವರು ಮಹಾ ವಂಚಕರೂ ಕಡುಲೋಭಿಗಳೂ ಆಗಿದ್ದು, ಮಗನನ್ನೇ ಕೊಲ್ಲಿಸುವ ಸಂಚು ಹೂಡಿದರು. ಪುತ್ರಕನು ಅದರಿಂದ ಪಾರಾಗಿ ದೇಶಾಂತರ ಹೋಗುವ ನಿರ್ಧಾರ ಮಾಡಿದನು. ಮುಂದೆ… ತಂದೆಯ ವಂಚನೆಯಿಂದ ದುಃಖಿತನಾದ ಪುತ್ರಕನು ತನ್ನ ರಾಜ್ಯವನ್ನು ತೊರೆದು ಹೊರಟನು. ಕಾಡಿನಲ್ಲಿ ಅಲೆದಾಡುತ್ತಾ ಇರುವಾಗ ಯಕ್ಷರಂತೆ ಕಾಣುವ ಇಬ್ಬರು ಮಲ್ಲಯುದ್ಧದಲ್ಲಿ ತೊಡಗಿರುವುದನ್ನು ಕಂಡನು. ಅಚ್ಚರಿಗೊಂಡ ಪುತ್ರಕನು ಅವರನ್ನು ಕುರಿತು, “ನೀವು ಯಾರು? ಯಾಕೆ ಯುದ್ಧ ಮಾಡುತ್ತಿದ್ದೀರಿ?” ಎಂದು ವಿಚಾರಿಸಿದನು. ಆ ಯಕ್ಷರು ಯುದ್ಧ ನಿಲ್ಲಿಸಿ, … Continue reading ಕಥಾ ಸರಿತ್ಸಾಗರ : ಪಾಟಲೀಪುತ್ರ ನಗರದ ಕಥೆ ~ ಮಯಾಸುರನ ಮೂರ್ಖ ಮಕ್ಕಳು ಮತ್ತು ಮಾಯಾ ವಸ್ತುಗಳು
~ ಯಾದಿರಾ ಮರುಭೂಮಿಯ ಮಹಾಯೋಗಿನಿ ರಾ-ಉಮ್ ಬಳಿಗೆ ಮೂರ್ಖನೊಬ್ಬ ಬಂದ. ಈಚಲ ಮರದ ಕೆಳಗೆ ಧ್ಯಾನಾಸಕ್ತಳಾಗಿದ್ದ ರಾ-ಉಮ್ ಕಣ್ಣು ತೆರೆದಳು. ‘ಅಮ್ಮಾನಾನೊಬ್ಬ ಮೂರ್ಖ ಎಂದು ನನಗೆ ಗೊತ್ತಿದೆ. ಮೂರ್ಖತ್ವವನ್ನು ಹೇಗೆ ಕಳೆದುಕೊಳ್ಳುವುದು ಎಂದು ಮಾತ್ರ ಗೊತ್ತಾಗುತ್ತಿಲ್ಲ’ ಎಂದು ಆ ಮೂರ್ಖ ಅಲವತ್ತುಕೊಂಡ. ರಾ-ಉಮ್ ಗಹಗಹಿಸಿ ನಕ್ಕು. ‘ಅಂದರೆ ನೀನು ಮೂರ್ಖ ಎಂದು ನಿನಗೆ ಗೊತ್ತಿದೆ. ಹಾಗಾದರೆ ನೀನು ಮೂರ್ಖನಾಗಿರಲು ಸಾಧ್ಯವೇ ಇಲ್ಲ’ ಎಂದಳು. ಮೂರ್ಖನಿಗೆ ತಲೆಕೆಟ್ಟಂತಾಯಿತು. ಅವನು ವಿವರಿಸಿದ: ‘ಎಲ್ಲರೂ ನನ್ನನ್ನು ಮೂರ್ಖ ಎನ್ನುತ್ತಾರೆ’ ರಾ-ಉಮ್ ಗೆ ಸಿಟ್ಟು ಬಂತು: ‘ಮೂರ್ಖ… ಇತರರು ಹೇಳುವುದನ್ನು ಕೇಳಿಸಿಕೊಂಡು ನಿನ್ನನ್ನು ನೀನು ಅರಿಯುತ್ತಿದ್ದರೆ ನೀನು … Continue reading ಮೂರ್ಖತ್ವದ ಮಾನದಂಡ