ಕಬ್ಬಿಣದ ಸರಪಳಿ ಹರೀತಲೇ ಪರಾಕ್… : ಮೈಲಾರಲಿಂಗ ಸ್ವಾಮಿಯ ಕಾರಣಿಕ ಭವಿಷ್ಯ ಏನು ಹೇಳುತ್ತಿದೆ?

ಪ್ರತಿಬಾರಿಯಂತೆ ಈ ಬಾರಿಯೂ ಮೈಲಾರಲಿಂಗ ಕಾರಣಿಕ ಕೇಳಿಬಂದಿದೆ. ‘ಕಬ್ಬಿಣದ ಸರಪಳಿ ಹರೀತಲೇ ಪರಾಕ್’ ಎಂಬ ಭವಿಷ್ಯ ಮೊಳಗಿದೆ. ಇದರ ಅರ್ಥವೇನೆಂದು ಎಲ್ಲ ವರ್ಗಗಳ ಜನರೂ ತಮಗೆ ಅನ್ವಯವಾಗುವಂತೆ ವಿಶ್ಲೇಷಣೆ ನಡೆಸುತ್ತಿದ್ದಾರೆ… ನೆನ್ನೆ (ಫೆ.22) ಹಾವೇರಿಯ ಮೈಲಾರದಲ್ಲಿರುವ ಡೆಂಕನಮರಡಿಯಲ್ಲಿ ಮೈಲಾರಲಿಂಗೇಶ್ವರ ಕಾರಣಿಕ ನೆರವೇರಿತು. ಪ್ರತಿ ವರ್ಷದಂತೆ ಈ ವರ್ಷವೂ ಗೊರವಯ್ಯ ಬಿಲ್ಲುಗಂಬವೇರಿ ಆಕಾಶಕ್ಕೆ ಮೊಗ ಮಾಡಿ “ಸದ್ದಲೇ….” ಅಂದಾಗ ಸುತ್ತ ನೆರೆದಿದ್ದ ಸಾವಿರಾರು ಜನ ಮೌನಕ್ಕೆ ಮೊರೆ ಹೋದರು. ಗೊರವಯ್ಯ ಹೇಳುವ ಕಾರಣಿಕ (ಭವಿಷ್ಯ)ಕ್ಕೆ ರೈತರು, ರಾಜಕಾರಣಿಗಳು, ವ್ಯಾಪಾರಿಗಳು […]