ಎಲ್ಲರಿಗೂ ಮೋಕ್ಷವೇಕೆ ಸಿಗುವುದಿಲ್ಲ?

ಬುದ್ಧ ಒಂದು ಹಳ್ಳಿಯಲ್ಲಿ ತನ್ನ ಗಣದೊಡನೆ ಬೀಡು ಬಿಟ್ಟಿದ್ದ. ಅದನ್ನು ತಿಳಿದ ಹಳ್ಳಿಗನೊಬ್ಬ ಅವನಲ್ಲಿಗೆ ಬಂದ. ಬುದ್ಧನಿಗೆ ನಮಸ್ಕರಿಸಿ ಹಳ್ಳಿಯವ ಕೇಳಿದ. “ಬುದ್ಧ, ಪ್ರತಿಯೊಬ್ಬ ವ್ಯಕ್ತಿಯೂ ಮೋಕ್ಷವನ್ನು ಪಡೆಯಬಲ್ಲ ಎಂದು ನೀನು ಪದೇ ಪದೇ ಹೇಳುತ್ತಿರುವೆ. ಆದರೆ ಎಲ್ಲರಿಗೂ ಏಕೆ ಮೋಕ್ಷ ಸಿಗುತ್ತಿಲ್ಲ?” ಅದಕ್ಕೆ ಬುದ್ಧ, “ಒಂದು ಕೆಲಸ ಮಾಡು. ನಿನ್ನ ಹಳ್ಳಿಯ ಜನಗಳನ್ನು, ನಿಮಗೆ ಬದುಕಿನಲ್ಲಿ ನಿಜಕ್ಕೂ ಏನು ಬೇಕಾಗಿದೆಎಂದು ವಿಚಾರಿಸು. ಪ್ರತಿಯೊಬ್ಬನ ಹೆಸರನ್ನು ಮತ್ತು ಅವನ ಬೇಕು ಬೇಡಗಳನ್ನು ಪಟ್ಟಿ ಮಾಡಿ ಬರೆದು ತಾ” […]

‘ಸತ್ಯ’ ಎಂದರೇನು? ಸತ್ಯವಂತರಾಗುವುದು ಹೇಗೆ ?

ಕೊಟ್ಟ ಮಾತಿಗೆ ಬದ್ಧನಾಗಿರುವುದು ಹರಿಶ್ಚಂದ್ರನಿಗೆ ಸತ್ಯ ಮಾರ್ಗವಾಯಿತು. ಪ್ರಜಾರಂಜಕನಾಗಿ ಉಳಿಯುವುದು ಶ್ರೀ ರಾಮನಿಗೆ ಸತ್ಯವಾಯಿತು. ದಾನಮಾಡುವುದೇ ಕರ್ಣನಿಗೆ ಸತ್ಯದೆಡೆಗೆ ಹಾದಿಯಾಯಿತು; ಸೀತೆಯಂಥ ಸತಿಯರಿಗೆ ಪಾತಿವ್ರತ್ಯವೇ ಸತ್ಯದ ಸಾಧನೆಯಾಯಿತು. ಹೀಗೆ ಮಹಾ ವ್ಯಕ್ತಿಗಳ ಒಬ್ಬೊಬ್ಬರ ಜೀವನವೂ ಪರಮಸತ್ಯದ ವ್ಯಾಖ್ಯಾನದಂತಿದೆ  ~ ಚೇತನಾ ತೀರ್ಥಹಳ್ಳಿ ಸತ್ಯವಂತರ ಹಾದಿ ಸ್ವಯಂ ಮೋಕ್ಷದ ಹಾದಿ. ಸವಾಲುಗಳ ಹಾದಿ. ಸತ್ಯ ಸಾಧಕರ ಯಾತ್ರೆ ಮೊದಲಾಗುವುದು ತ್ಯಾಗದಿಂದ. ಈ ಹೆಬ್ಬಾಗಿಲಿನ ಮೂಲಕವೇ ಅವರು ಸತ್ಯದ ಗುರಿ ತಲುಪುತ್ತಾರೆ.  ಪ್ರಪ್ರಾಚೀನ ಜ್ಞಾನ ಕಣಜ ಋಗ್ವೇದವು `ಏಕಮ್ ಸತ್ ವಿಪ್ರಾಃ […]

ಸಮಾಜ ಸುಧಾರಣೆಗೆ ಮುನ್ನ ಶಿಕ್ಷಣ ನೀಡುವುದು ಮುಖ್ಯ : ವಿವೇಕ ವಿಚಾರ

ಪ್ರತಿಯೊಬ್ಬರೂ ತಮ್ಮ ಮೋಕ್ಷಕ್ಕೆ ತಾವೇ ದುಡಿಯಬೇಕಾಗಿದೆ. ಬೇರೆ ಮಾರ್ಗವೇ ಇಲ್ಲ. ಇದರಂತೆಯೇ ದೇಶಗಳೂ ಕೂಡಾ. ಉತ್ತಮ ಸಂಸ್ಥೆಗಳು ಬರುವವರೆಗೆ ಹಳೆಯ ಸಂಸ್ಥೆಗಳನ್ನು ನಾಶ ಮಾಡುವುದು ವಿನಾಶಕಾರಿ. ಆದ್ದರಿಂದ, ಯಾರಿಗೆ ಸುಧಾರಣೆ ಬೇಕಾಗಿದೆಯೋ ಮೊದಲು ಅವರನ್ನು ಅಣಿ ಮಾಡಿ. ಹಿತವಾದ ಸಾಮಾಜಿಕ ಬದಲಾವಣೆಗಳೆಲ್ಲ ನಮ್ಮ ಆಂತರ್ಯದಲ್ಲಿ ಕೆಲಸ ಮಾಡುತ್ತಿರುವ ಆಧ್ಯಾತ್ಮಿಕ ಪ್ರವೃತ್ತಿಗಳ ಅಭಿವ್ಯಕ್ತಿಯೇ ಆಗಿವೆ. ಅವು ಬಲಶಾಲಿಯಾಗಿದ್ದರೆ, ಹೊಂದಿಕೊಂಡಿದ್ದರೆ, ಸಮಾಜ ಅದಕ್ಕೆ ಸರಿಯಾಗಿ ಅಣಿಯಾಗಿರುವುದು. ಸಮಾಜ ಸುಧಾರಣೆಯ ಗೋಜಿಗೆ ಹೋಗಬೇಡ. ಮೊದಲು ಆಧ್ಯಾತ್ಮಿಕ ಸುಧಾರಣೆಯಾಗಬೇಕು. ಅದಿಲ್ಲದೆ ಬೇರೆ ಯಾವ ಸುಧಾರಣೆಯೂ […]