ಶ್ರವಣ ಪರಂಪರೆ : ಜ್ಞಾನ ಸಂವಹನದ ಅತ್ಯುನ್ನತ ವಿಧಾನ

ಜಗತ್ತಿನಲ್ಲಿ ಜ್ಞಾನದ ಸಂವಹನ ಆರಂಭವಾಗಿದ್ದೇ ಕೇಳುವಿಕೆಯಿಂದ. ಶ್ರವಣ, ಮನನ, ನಿಧಿಧ್ಯಾಸನ ಮೊದಲಾದ ಕಲಿಕೆಯ ವಿವಿಧ ಬಗೆಗಳಲ್ಲಿ ಶ್ರವಣಕ್ಕೆ ಮೊದಲ ಸ್ಥಾನ | ಸಾ.ಹಿರಣ್ಮಯಿ ಅಸುರನ ಮಗನಾಗಿ ಹುಟ್ಟಿದರೂ ಪ್ರಹ್ಲಾದ ಹರಿಭಕ್ತನಾಗಿದ್ದು ಹೇಗೆ ಗೊತ್ತೇ? ಕುರುಕ್ಷೇತ್ರಯುದ್ಧದ ಸಮಯದಲ್ಲಿನ್ನೂ ಹದಿನಾರರ ಹುಡುಗನಾಗಿದ್ದ ಅಭಿಮನ್ಯು ಚಕ್ರವ್ಯೂಹ ಭೇದಿಸಿದ್ದು ಹೇಗೆ ಗೊತ್ತೆ? ಹೋಗಲಿ, ಕೃಷ್ಣನನ್ನು ನೋಡದೆಯೇ ಅವನ ಮೇಲೆ ರುಕ್ಮಿಣಿ ಪ್ರೇಮ ಬೆಳೆಸಿಕೊಂಡಿದ್ದಾದರೂ ಹೇಗೆಂದು ಗೊತ್ತೆ? ಇವೆಲ್ಲ ಸಾಧ್ಯವಾಗಿದ್ದು `ಶ್ರವಣ’ ಅಂದರೆ ಕೇಳುವಿಕೆಯಿಂದ. ಅಸುರ ರಾಜ ಹಿರಣ್ಯಕಷಿಪುವು ತಪಸ್ಸಿಗೆ ಕುಳಿತಿದ್ದಾಗ ದೇವತೆಗಳು ಅವನ […]