ರಿಚರ್ಡ್ ಮೊರಿಸ್ ಹೇಳಿದ್ದು… : ಅರಳಿಮರ Poster

ಮೌಲ್ಯಗಳನ್ನು ಕೇವಲ ಬಾಯಿಪಾಠ ಮಾಡಿದರೆ ಸಾಲದು. ಅವುಗಳ ಪದಶಃ ಅರ್ಥ ತಿಳಿದುಕೊಂಡರೂ ಹೆಚ್ಚಿನ ಪ್ರಯೋಜನವೇನಿಲ್ಲ. ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರಷ್ಟೆ ಅವುಗಳಿಗೆ ನ್ಯಾಯ ಸಲ್ಲಿಸಿದಂತೆ.  ಮತ್ತು, ಈ ಮೌಲ್ಯಗಳು ವಿಚಾರಪೂರ್ಣವಾಗಿರುವುದು ಅತ್ಯಗತ್ಯ. ತಲೆಬುಡವಿಲ್ಲದ, ಕೇವಲ ಸಾಂಪ್ರದಾಯಿಕ ಅಥವಾ ರೂಢಿಗತವಾದ ಮಾತ್ರಕ್ಕೆ ಮೌಲ್ಯಗಳು ಅರ್ಥಪಡೆಯುವುದಿಲ್ಲ. ಇಂಥಾ ಅರ್ಥಹೀನ ಮೌಲ್ಯಗಳನ್ನು ಅನುಸರಿಸುವುದು ಅಂಧಶ್ರದ್ಧೆಯಾಗುತ್ತದೆ. ನಮ್ಮ ಬುದ್ಧಿಗುರುಡುತನವಾಗುತ್ತದೆ.  ಹಾಗೆಯೇ ಮೌಲ್ಯಗಳಲ್ಲಿ ಭಾವನೆ ಇರಬೇಕು. ಅವು ನಮ್ಮ ಅಂತಃಕರಣಕ್ಕೆ ತಾಕುವಂತಿರಬೇಕು. ಕೇವಲ ಕರ್ಮಠತನ ಮೌಲ್ಯಗಳಿಗೆ ಬಲ ತುಂಬಲಾರವು. ಅಲ್ಲಿ ಭಾವನೆಯೂ ಇದ್ದರಷ್ಟೆ ಅವು ಸಬಲ. […]

ತಾವೋ ತಿಳಿವು #26 ~ ಮೌಲ್ಯ ತನ್ನ ಪಟ್ಟ ಬಿಟ್ಟುಕೊಡುವುದು

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ ದೊಡ್ಡ ದೇಶವನ್ನು ಆಳುವುದು ಸಣ್ಣ ಮೀನನ್ನು ಹುರಿದಷ್ಟೆ ನಾಜೂಕಿನ ಕೆಲಸ. ದಾವ್ ನ ಹಾದಿಯಲ್ಲಿ ನಡೆಯುವ ಜೈಲರ್ ಇದ್ದರೆ ಅತೃಪ್ತ ಆತ್ಮಗಳು ಬಾಲ ಬಿಚ್ಚುವುದಿಲ್ಲ. ಅವುಗಳ ಅಶರೀರ ತಾಕತ್ತು ನಾಶವಾಗುವುದಿಲ್ಲವಾದರೂ, ಅವು ಸಾಮಾನ್ಯರಿಗೆ ಕಾಟ ಕೊಡುವುದಿಲ್ಲ. ಆಗ ಪವಿತ್ರ ಆತ್ಮಗಳಿಗೂ ಮೆರೆಯುವ ಅವಕಾಶ ಇರುವುದಿಲ್ಲ. ಯಾವಾಗ ಹೀಗಾಗುತ್ತದೋ ಆವಾಗ ಮೌಲ್ಯ ತನ್ನ ಪಟ್ಟ ಬಿಟ್ಟು ಕೊಡಲೇ ಬೇಕಾಗುತ್ತದೆ. ಅದೇ ದಾವ್ ನ ಆಶಯ.