ಯಕ್ಷ ಪ್ರಶ್ನೆಗಳು ಮತ್ತು ಯುಧಿಷ್ಠಿರನ ಉತ್ತರಗಳು

ಮಹಾಭಾರತದ ಅರಣ್ಯಪರ್ವದಲ್ಲಿ ಯಕ್ಷಪ್ರಶ್ನೆಗಳ ಅಧ್ಯಾಯ ಬರುತ್ತದೆ.  ಬಕರೂಪದಲ್ಲಿದ್ದ ಯಕ್ಷನು ಕೇಳುವ ಪ್ರಶ್ನೆಗಳಿಗೆ ಯುಧಿಷ್ಠಿರನು ನೀಡಿದ ಉತ್ತರಗಳ ಸಂಗ್ರಹ ಇಲ್ಲಿದೆ… ವನವಾಸದಲ್ಲಿದ್ದ ಪಾಂಡವರು ಒಂದು ದಿನ ಕಾಡಿನಲ್ಲಿ ಅಲೆಯುತ್ತ ವಿಪರೀತ ದಣಿದರು. ಧರ್ಮರಾಯ ತನ್ನ ತಮ್ಮಂದಿರಿಗೆ ನೀರು ತರಲು ಹೇಳಿದಾಗ ಒಬ್ಬೊಬ್ಬರೇ ಹೋದರೂ, ಯಾರೂ ಮರಳಲಿಲ್ಲ. ಕಾರಣವೇನೆಂದು ತಿಳಿಯಲು ಸ್ವತಃ ಯುಧಿಷ್ಠಿರನೇ ತಮ್ಮಂದಿರನ್ನು ಹುಡುಕುತ್ತಾ ಹೊರಟನು.  ಯಕ್ಷನೊಬ್ಬನ ಒಡೆತನದಲ್ಲಿದ್ದ ಕೊಳದ ಬಳಿಯಲ್ಲಿ ನಾಲ್ವರೂ ಪಾಂಡವರು ಪ್ರಜ್ಞಾಶೂನ್ಯರಾಗಿ ಬಿದ್ದುದನ್ನು ನೋಡಿದನು. ಮತ್ತು ಯಕ್ಷನಲ್ಲಿ ವಿಚಾರಿಸಿದನು. ಆಗ ಯಕ್ಷನು, “ಧರ್ಮರಾಯ! ನನ್ನ ಪ್ರಶ್ನೆಗಳಿಗೆ […]