ಅಪಮೃತ್ಯು ನಿವಾರಣೆಗೆ ಶ್ರೀ ಮಹಾ ಮೃತ್ಯುಂಜಯ ಸ್ತೋತ್ರ

ಅಲ್ಪಾಯುಷಿಯಾಗಿ ಜನಿಸಿ, ಮಹಾದೇವ ಶಿವನ ಕೃಪೆಯಿಂದ ದೀರ್ಘಾಯುವಾದ ಮಾರ್ಕಂಡೇಯನು ರಚಿಸಿದ ಸ್ತೋತ್ರವಿದು. ಮಾರ್ಕಂಡೇಯನಿಗೆ ಅಪಮೃತ್ಯು ನಿವಾರಣೆಯಾದಂತೆ, ಇದನ್ನು ಶ್ರದ್ಧಾಭಕ್ತಿ ಮತ್ತು ತಪೋನಿಷ್ಠೆಯಿಂದ ಪಠಿಸುವವರಿಗೆ ಅಪಮೃತ್ಯು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಮಾರ್ಕಂಡೇಯ ವಿರಚಿತ ಮಹಾಮೃತ್ಯುಂಜಯ ಸ್ತೋತ್ರ ಇಲ್ಲಿದೆ ರುದ್ರಂ ಪಶುಪತಿಂ ಸ್ಥಾಣುಂ ನೀಲಕಂಠಂ ಉಮಾಪತಿಂ | ನಮಾಮಿ ಶಿರಸಾ ದೇವಂ ಕಿಂ ನೋ ಮೃತ್ಯು ಕರಿಷ್ಯತಿ  ||1|| ಭಾವಾರ್ಥ: ರುದ್ರನೂ ಪಶುಪತಿಯೂ ಸ್ಥಿರರೂಪಿಯೂ ಆದ ಶಿವನಿಗೆ; ನೀಲಕಂಠನೂ ಉಮಾಪತಿಯೂ ಆದ ಮಹಾದೇವನಿಗೆ ನಾನು ಶಿರಸಾ ನಮಸ್ಕರಿಸುತ್ತೇನೆ. ಹೀಗಿರುವಾಗ […]

ಬಾಲಕ ನಚಿಕೇತ ಯಮನಿಗೆ ಕೇಳಿದ ಪ್ರಶ್ನೆಗಳೇನು ಗೊತ್ತೆ?

ಅತಿಥಿಯಾದ ನಚಿಕೇತನನ್ನು ಮೂರು ದಿನ ಕಾಯಿಸಿದುದಕ್ಕಾಗಿ ಯಮ ಕ್ಷಮೆ ಬೇಡಿದ. ಪ್ರಾಯಶ್ಚಿತ್ತಕ್ಕಾಗಿ ಮೂರು ವರ ನೀಡುವೆ, ಬೇಕಾದ್ದನ್ನು ಕೇಳು ಎಂದ. ಅದಕ್ಕೆ ಪ್ರತಿಯಾಗಿ ನಚಿಕೇತ ಯಮಧರ್ಮನಲ್ಲಿ ಆತ್ಮವಿದ್ಯೆಯನ್ನು ಬೇಡಿದ. ಈ ಸಂದರ್ಭದಲ್ಲಿ ಯಮ – ನಚಿಕೇತರ ನಡುವೆ ನಡೆದ ಸಂವಾದ ಕಠೋಫನಿಷತ್ತಿನಲ್ಲಿ ಬರುತ್ತದೆ. ವಾಜಶ್ರವಸ ಒಬ್ಬ ಸಂಪ್ರದಾಯನಿಷ್ಠನೂ ಕರ್ಮಠನೂ ಆಗಿದ್ದ ಋಷಿ.  ಗುರುಕುಲ ನಡೆಸುತ್ತಿದ್ದ ವೇದ ಪಂಡಿತ. ಆತನ ಮಗ ನಚಿಕೇತ ಅಧ್ಯಯನಶೀಲನೂ ವಿನಯ ಸಂಪನ್ನನೂ ಆಗಿದ್ದ. ವಾಜಶ್ರವಸ ಒಮ್ಮೆ ವಿಶ್ವಜಿತ್ ಯಾಗ ನಡೆಸಿದ. ಯಾಗದ ನಂತರ ಶಾಸ್ತ್ರ […]