ಅಫ್ಘಾನಿಸ್ತಾನದ ಬೆಟ್ಟಗಳಲ್ಲಿ ಒಬ್ಬ ಸೂಫಿ ಮಹಿಳೆ ವಾಸಿಸುತ್ತಿದ್ದಳು. ಬೆಟ್ಟ ಗುಡ್ಡಗಳ ನಡುವೆ ಕುರಿ ಮೇಯಿಸುತ್ತಾ ತನ್ನ ಪಾಡಿಗೆ ತಾನು ಖುಷಿಯಾಗಿದ್ದ ಅವಳಿಗೆ, ಒಮ್ಮೆ ಒಂದು ಕೊಳದ ಬಳಿ ಅಮೂಲ್ಯ ಹರಳು ಸಿಕ್ಕಿತು. ಅವಳು ಅದನ್ನು ತನ್ನ ಬುತ್ತಿ ಚೀಲದಲ್ಲಿಟ್ಟುಕೊಂಡು ಕುರಿಗಳಿಗೆ ನೀರು ಕುಡಿಸಿ, ತನ್ನ ಪಾಡಿಗೆ ತಾನುಳಿದಳು. ದಿನಗಳು ಕಳೆದವು. ಸೂಫಿ ಮಹಿಳೆ ದಿನವೂ ಕುರಿ ಮೇಯಿಸಲು ಹೋಗುತ್ತಿದ್ದಳು. ಅವಳು ಬೆಟ್ಟದ ತಪ್ಪಲಿನಲ್ಲಿ ಕುಳಿತಿದ್ದಾಗ ಯಾತ್ರಿಕನೊಬ್ಬ ಬಂದ. ಬಹಳ ಆಯಾಸಗೊಂಡಿದ್ದ ಆತ, “ಹಸಿವಾಗಿದೆ… ತಿನ್ನಲು ಏನಾದರೂ ಸಿಗಬಹುದೇ?” […]