ನೀವು ಜನಿಸಿದ್ದು ಯಾವ ಸಂವತ್ಸರದಲ್ಲಿ? ಈ ಕೋಷ್ಟಕ ನೋಡಿ…

ನೀವು ಹುಟ್ಟಿದ್ದು ಯಾವ ಸಂವತ್ಸರದಲ್ಲಿ ಅನ್ನುವ ಕುತೂಹಲವಿದೆಯೇ? ಬೆರಳು ಮಡಚುತ್ತ ಕೂರಬೇಡಿ… ಈ ಕೆಳಗಿನ ಕೋಷ್ಟಕ ನೋಡಿ: ( 1867, 1927,1987,): ಪ್ರಭವ (1868,1928,1988): ವಿಭವ (1869,1929,1989): ಶುಕ್ಲ (1870,1930,1990): ಪ್ರಮೋದೂತ (1871,1931, 1991): ಪ್ರಜೋತ್ಪತ್ತಿ (1872,1932,1992): ಅಂಗೀರಸ (1873,1933,1993): ಶ್ರೀಮುಖ (1874,1934,1994): ಭಾವ (1875,1935,1995):ಯುವ (1876,1936,1996): ಧಾತ್ರಿ (ಧಾತು) (1877,1937,1997): ಈಶ್ವರ (1878,1938,1998): ಬಹುಧಾನ್ಯ (1879,1939,1999): ಪ್ರಮಾದಿ (1880,1940,2000): ವಿಕ್ರಮ (1881,1941,2001): ವೃಷ (1882,1942,2002): ಚಿತ್ರಭಾನು (1883,1943,2003): ಸ್ವಭಾನು (1884,1944,2004): ತಾರಣ (1885,1945,2005): ಪಾರ್ಥಿವ (1886,1946,2006): […]

ಯುಗಾದಿ; ಹಿನ್ನೆಲೆ ಏನು? ಹಬ್ಬದ ಆಚರಣೆ ಹೇಗೆ?

ಯುಗಾದಿಯ ಬಗ್ಗೆ ನಾವು ಹೊಸತಾಗಿ ತಿಳಿಯುವುದು ಏನೂ ಇಲ್ಲ. ಪರಂಪರಾನುಗತವಾಗಿ, ಸಾಧ್ಯವಿದ್ದವರೆಲ್ಲಾ ಹೊಸ ಬಟ್ಟೆ ತೊಟ್ಟು, ಮನೆಗೆ ಮಾವಿನ ತೋರಣ ಕಟ್ಟಿ, ಬೇವು – ಬೆಲ್ಲ ಬೆರೆಸಿ ತಿಂದು ಸಂಭ್ರಮಿಸುವ ಹಬ್ಬವಿದು. ಈ ಸಂಭ್ರಮಕ್ಕೆ ಕಾರಣವೇನು? ಎಂದು ಹುಡುಕುತ್ತಾ ಹೊರಟರೆ, ಹಲವಾರು ಕಥೆಗಳೂ ಪ್ರಕೃತಿಯ ವಿಸ್ಮಯವೂ ನಮ್ಮೆದುರು  ತೆರೆದುಕೊಳ್ಳುತ್ತವೆ ~ ಸಾ.ಹಿರಣ್ಮಯೀ ಯುಗಾದಿ ‘ಕಾಲ’ದ ಹಬ್ಬ. ಯಾವುದು ಹುಟ್ಟುತ್ತಲೇ ಅಳಿದೂ ಹೋಗುತ್ತದೆಯೋ, ಅಳಿವಿನೊಂದಿಗೇ ಮತ್ತೆ ಹುಟ್ಟುತ್ತದೆಯೋ, ಆ ನಿರಂತರ ನವ ತತ್ತ್ವಕ್ಕೊಂದು ಎಣಿಕೆಯ ಚೌಕಟ್ಟು ತೊಡಿಸಿ ಸಂಭ್ರಮಿಸುವ ಹಬ್ಬ. […]

ಅರವತ್ತು ಸಂವತ್ಸರಗಳು ಯಾವುವು? ಅವುಗಳ ಹೆಸರು ತಿಳಿದಿದೆಯೇ? ಇಲ್ಲಿದೆ ನೋಡಿ…

ನಾಳೆ ಯುಗಾದಿ. ಮತ್ತೊಂದು ಸಂವತ್ಸರದ ಆರಂಭ. ಈ ಹಿನ್ನೆಲೆಯಲ್ಲಿ ಪಂಚಾಂಗಗಳು ಹೇಳುವ 60 ಸಂವತ್ಸರಗಳ ಹೆಸರುಗಳನ್ನು ಇಲ್ಲಿ ನೀಡಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ 60 ಸಂವತ್ಸರಗಳಿವೆ. ಈ ಅರವತ್ತು ಸಂವತ್ಸರಗಳ ಒಂದು ಸುತ್ತು ಪೂರೈಸುವುದರಿಂದಲೇ ನಮ್ಮಲ್ಲಿ 60 ವರ್ಷಗಳನ್ನು ಪೂರೈಸುವ ಷಷ್ಠಿಪೂರ್ತಿಗೆ ಹೆಚ್ಚಿನ ಮಹತ್ವ.  ಒಂದು ಸಂವತ್ಸರ ಮುಗಿದು ಇನ್ನೊಂದು ಶುರುವಾಗುವ ದಿನವೇ ‘ಯುಗಾದಿ’. ಹೊಸ ಸಂವತ್ಸರಕ್ಕೆ ಚಾಲನೆ ದೊರೆಯುವ ಸಂಭ್ರಮಕ್ಕೆ ಈ ದಿನ ಉತ್ಸವಾಚರಣೆ ನಡೆಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಲ್ಲಿ ಹಬ್ಬ ನಡೆಯುತ್ತದೆ.  […]

ಜನಪದ ಯುಗಾದಿ : ಗ್ರಾಮೀಣ ಆಟಗಳ ಸಂಭ್ರಮ

ಗ್ರಾಮೀಣ ಭಾಗದ ಯುಗಾದಿಯನ್ನು ನೆನಪಿಸಿಕೊಂಡಾಗ ಅದರ ಮೈಗೆ ಕೆಲವಾದರೂ ಜನಪದ ಆಟಗಳು ಅಂಟಿಕೊಳ್ಳುತ್ತವೆ. ಹಾಗೆ ಅಂಟಿಕೊಂಡ ಆಟಗಳನ್ನು ಬಿಡಿಸಿ ನೋಡತೊಡಗಿದರೆ ಆ ಆಟಗಳ ಝಲಕ್ಕು ರೋಮಾಂಚನಗೊಳಿಸುತ್ತದೆ. ಈಗಲೂ ಗ್ರಾಮೀಣ ಭಾಗದ ಯುಗಾದಿಗೆ ಅಂತಹ ಆಟಗಳು ರಂಗೇರುತ್ತವೆ. ದಶಕದ ಹಿಂದೆ ಸರಿದರೆ ಈ ಅಬ್ಬರ ಕೆಲ ಪ್ರದೇಶಗಳಲ್ಲಿ ಮಂಕಾದರೂ, ಮತ್ತೆ ಕೆಲವು ಪ್ರದೇಶಗಳಲ್ಲಿ ಹೊಸ ಚಲನೆ ಪಡೆದಿವೆ. ಅಂತಹ ಆಟಗಳ ಮೈದಡವಿ ಮಾತನಾಡಿಸಿದರೆ, ಅವುಗಳು ತಮ್ಮ ಇರುವಿಕೆಯನ್ನು ಪಿಸುಮಾತಲ್ಲಿ ಹೇಳಬಲ್ಲವು. ನಾವು ಕಿವಿತೆರೆದು ಕೇಳಬೇಕಷ್ಟೆ. ~ ಡಾ. ಅರುಣ್ […]