ವಿಚಾರಶೀಲತೆ: ಕುರುಡು ನಂಬಿಕೆಯ ಕಗ್ಗತ್ತಲಲ್ಲಿ ದಾರಿ ತೋರುವ ಕಂದೀಲು ~ ಯೋಗ ವಾಸಿಷ್ಠ #2

“ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. ಕತ್ತಲ ಬಾವಿಯಲ್ಲಿ ಬಿದ್ದವರಿಗೆ ವಿಚಾರಶೀಲತೆಯೇ ಆಸರೆ” ಅನ್ನುತ್ತದೆ ಯೋಗ ವಾಸಿಷ್ಠ ~ ಗಾಯತ್ರಿ ನಿತ್ಯಂ ವಿಚಾರಯುಕ್ತೇನ ಭವಿತವ್ಯಂ ಮಹಾತ್ಮನಾ | ತಥಾಂಧಕೂಪೇ ಪತತಾಂ ವಿಚಾರೋ ಹ್ಯವಲಂಬನಮ್ || ಯೋಗ ವಾಸಿಷ್ಠ || ಅರ್ಥ : ಪ್ರತಿಯೊಂದು ಕೆಲಸವನ್ನೂ ಚೆನ್ನಾಗಿ ವಿಚಾರಿಸಿ ಮಾಡಬೇಕು. ಪ್ರತಿಯೊಂದನ್ನೂ ವಿಚಾರಪೂರ್ಣವಾಗಿ ಅರಿತು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಹೀಗೆ ಮಾಡುವ ವ್ಯಕ್ತಿಗಳು ಮಹಾತ್ಮರೆನ್ನಿಸಿಕೊಳ್ಳುತ್ತಾರೆ. […]

ತನಗೆ ತಾನೆ ಕನ್ನಡಿಯಾಯಿತು ಪರಬ್ರಹ್ಮ! ~ ಯೋಗ ವಾಸಿಷ್ಠ #1

ಆತ್ಯಂತಿಕ ಸತ್ಯ ಅಥವಾ ಪರಮೋನ್ನತ ಅಸ್ತಿತ್ವವಾದ ಬ್ರಹ್ಮವು ತನ್ನನ್ನು ನೋಡಿಕೊಳ್ಳಬೇಕೆಂಬ ಬಯಕೆಯಾದಾಗ ಏನು ಮಾಡಿತು ಗೊತ್ತೆ? “ತಾನೇ ಒಂದು ಶುಭ್ರವಾದ ಕನ್ನಡಿಯಾಗಿ ವಿಸ್ತರಣೆಗೊಂಡಿತು. ಮತ್ತು ಅದರಲ್ಲಿ ತನ್ನ ಪ್ರತಿಬಿಂಬವನ್ನು ಕಂಡಿತು.” ಎನ್ನುತ್ತದೆ ಯೋಗ ವಾಸಿಷ್ಠ. ಈ ಪ್ರತಿಬಿಂಬವೇ ಸೃಷ್ಟಿ ~ ಗಾಯತ್ರಿ ಏಷ ಸ್ವಪ್ರತಿಬಿಂಬಸ್ಯ ಸ್ವಯಮಾಲೋಕನೇಚ್ಛಾಯ | ಅತ್ಯಂತನಿರ್ಮಲಾಕಾರಃ ಸ್ವಯಂ ಮುಕುರತಾಂ ಗತಃ ||ಯೋಗ ವಾಸಿಷ್ಠ || ಅರ್ಥ :  ಈ ಬ್ರಹ್ಮವು ತನ್ನ ಪ್ರತಿ ಬಿಂಬವನ್ನು ತಾನೇ ನೋಡಿಕೊಳ್ಳಬೇಕೆಂಬ ಇಚ್ಛೆಯಿಂದ ತಾನೇ ಅತ್ಯಂತ ನಿರ್ಮಲಾಕಾರವಾದ ಕನ್ನಡಿಯಾಯಿತು. { […]

ಯೋಗ ವಾಸಿಷ್ಠ ರಚಿಸಿದವರು ಯಾರು? ಈ ಕೃತಿ ಯಾವುದರ ಕುರಿತಾಗಿದೆ?

ಆಖ್ಯಾನ – ಉಪಾಖ್ಯಾನಗಳ ಮೂಲಕ ಬ್ರಹ್ಮತತ್ತ್ವವನ್ನು ಬೋಧಿಸುವುದು ಯೋಗ ವಾಸಿಷ್ಠ ಕೃತಿಯ ವೈಶಿಷ್ಟ್ಯ. ಇದಕ್ಕೆ ಮಹಾ ರಾಮಾಯಣ, ಆರ್ಷ ರಾಮಾಯಣ, ವಸಿಷ್ಠ ರಾಮಾಯಣ, ಜ್ಞಾನ ವಸಿಷ್ಠ ರಾಮಾಯಣ ಎಂಬ ಇತರ ಹೆಸರುಗಳೂ ಇವೆ. ಯೋಗ ವಾಸಿಷ್ಠದ ರಚನೆಕಾರ ವಾಲ್ಮೀಕಿ ಮಹರ್ಷಿಗಳು. ರಾಮ ಮತ್ತು ರಘುವಂಶದ ಕುಲಗುರು ವಸಿಷ್ಠರ ನಡುವೆ ನಡೆದ ಆಧ್ಯಾತ್ಮಿಕ ಸಂಭಾಷಣೆಯೇ ಯೋಗ ವಾಸಿಷ್ಠದ ತಿರುಳು. ಜ್ಞಾನ ಮತ್ತು ಸ್ವರೂಪದಲ್ಲಿ ಇದನ್ನು ಭಗವದ್ಗೀತೆಗೆ ಹೋಲಿಸಲಾಗುತ್ತದೆ. ವಿಶೇಷವಾಗಿ ಇದು ಅದ್ವೈತಸಿದ್ಧಾಂತವನ್ನು ಮನದಟ್ಟು ಮಾಡಿಸುವ ಕೃತಿಯಾಗಿದೆ. ‘ಈ ಜೀವನ. […]