ನಾಳೆ ಬರುವುದು ನಾಳೆಯೇ, ಈ ದಿನವನ್ನು ಸಂತಸದಿಂದ ಕಳೆಯಿರಿ : ಬೆಳಗಿನ ಹನಿ

ದೂರದೃಷ್ಟಿ ಇರಬೇಕು ನಿಜ. ನಾಳೆಯ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು ಅನ್ನುವುದೂ ನಿಜ. ಹಾಗೆಂದು ನಾಳೆಯ ಆಲೋಚನೆಗಳಲ್ಲೇ ಇಂದು ಮಾಡಬೇಕಾದ ಕೆಲಸಗಳಿಂದ ವಿಮುಖರಾಗುವುದು ಸರಿಯಲ್ಲ. ಇಂದು ಅನುಭವಿಸಬೇಕಾದ ಆನಂದದಿಂದ ನಮ್ಮನ್ನು ವಂಚಿಸಿಕೊಳ್ಳುವುದೂ ಸರಿಯಲ್ಲ. ಇಂದಿನ ದುಡಿಮೆಯನ್ನು ನಾಳೆಗಾಗಿಯೂ ಕೊಂಚ ಎತ್ತಿಡುವುದು ಜಾಣ ನಡೆ. ಇತರ ಪ್ರಾಣಿಗಳಂತಲ್ಲದೆ ಮನುಷ್ಯನ ಬದುಕಿನಲ್ಲಿ ಮನೆ, ಮಕ್ಕಳು (ಕುಟುಂಬ) ಮತ್ತು ಸ್ವಾಭಿಮಾನಗಳು ಹೆಚ್ಚುವರಿಯಾಗಿರುತ್ತವೆ. ಅವುಗಳನ್ನು ಕಾಯ್ದುಕೊಳ್ಳುವುದು ಕೂಡ ಮನುಷ್ಯನ ಕರ್ತವ್ಯಗಳ ಸಾಲಿಗೆ ಸೇರುತ್ತದೆ. ಆದ್ದರಿಂದ ಉಳಿತಾಯ ಯಾವುದೇ ಮನುಷ್ಯನ ಮೂಲಭೂತ ಕರ್ತವ್ಯವಾಗಿದೆ.  ಆದರೆ ಉಳಿತಾಯವನ್ನು ಒಂದು […]

Kiran’s Never Mind series #3

ಮನಸಿನಲ್ಲಿ ಯೋಚನೆಗಳನ್ನು ತುಂಬಿಕೊಂಡಿರುವುದು ಮತ್ತು ಅಮನವಾಗಿರುವುದು (ಯೋಚನೆಗಳನ್ನು ಮಾಡದೆ ಇರುವುದು) ಎರಡೂ ವಾಸ್ತವದಲ್ಲಿ ಒಂದೇ. ಆದ್ದರಿಂದ ನಾವು ಯೋಚನೆ ಮಾಡಿದರೂ ಒಂದೇ, ಬಿಟ್ಟರೂ ಒಂದೇ.  ಆಲೋಚನೆಗಳು ನೀಲಾಕಾಶದಲ್ಲಿ ತೇಲುವ ಮೋಡಗಳಂತೆ. ಮೋಡಗಳು ಘಳಿಗೆಗೊಂದು ಆಕಾರ ತಾಳುತ್ತಾ ಕರಗುವ ಹಾಗೆ ಆಲೋಚನೆಗಳು ಕೂಡ ಒಂದಾದ ಮೇಲೆ ಒಂದರಂತೆ ವಿವಿಧ ಭಾವಗಳನ್ನು ಹೊತ್ತು, ಮೂಡಿ, ಮರೆಯಾಗುತ್ತವೆ. ಆದ್ದರಿಂದ ಅವನ್ನು ಸತ್ಯವೆಂದು ನಂಬಿ, ಅವುಗಳಿಗೆ ಅಂಟಿಕೊಂಡು ಕೂರಬಾರದು. ನಾವು ಕುದುರೆಯಾಕಾರದ ಮೋಡವನ್ನು ನೋಡಿ, ಅದನ್ನೇ ನೆಚ್ಚಿಕೊಂಡು ಕೂತರೆ, ಮತ್ತೊಂದು ಕ್ಷಣಕ್ಕೆ ಅದು […]