ರಥ ಸಪ್ತಮಿ, ಸೂರ್ಯಾರಾಧನೆಯ ಉತ್ಸವ. ಹಾಗೆಂದೇ ಈ ದಿನ ಸೂರ್ಯ ನಮಸ್ಕಾರಕ್ಕೆ ವೀಶೇಷ ಮಹತ್ವ. ಇದು 12 ಆಸನಗಳ ಒಂದು ಗುಚ್ಛ. ಪ್ರತಿ ದಿನ 108 ಸೂರ್ಯನಮಸ್ಕಾರಗಳನ್ನು ಮಾಡಿದರೆ ಒಳ್ಳೆಯದು. ಗರಡಿಮನೆಗಳಲ್ಲಿ 1008 ಸೂರ್ಯ ನಮಸ್ಕಾರಗಳನ್ನು ಮಾಡಿಸುವುದೂ ಉಂಟು! ವಾಸ್ತವದಲ್ಲಿ ಸೂರ್ಯ ನಮಸ್ಕಾರ ಪ್ರತಿನಿತ್ಯದ ಅಭ್ಯಾಸವಾಗಬೇಕು. ಇದನ್ನು ಸೂರ್ಯ ದೇವನೆಂಬ ಭಾವನೆ ಇಲ್ಲದ ನಾಸ್ತಿಕರು ವ್ಯಾಯಾಮ ಎಂದಾದರೂ ಮಾಡಲಿ. ಪ್ರಕೃತಿ ಆರಾಧಕರು ದಿನವೂ ಬೆಳಕು, ಶಾಖ ಮತ್ತೆಲ್ಲ ಜೀವ ಚೈತನ್ಯಕ್ಕೆ ಕಾರಣವಾದ ಮಹತ್ ತತ್ತ್ವ ಎಂಬ ಗೌರವ […]