ಆನಂದವನ್ನು ಹೊರಗೆ ಹುಡುಕಬೇಡಿ, ನಿಮ್ಮೊಳಗೇ ಹುಡುಕಿಕೊಳ್ಳಿ : ರಮಣ ಮಹರ್ಷಿ

ಆನಂದದಿಂದ ಬದುಕುವುದು, ಆನಂದಕ್ಕಾಗಿ ಹಂಬಲಿಸುವುದು ಪ್ರತಿಯೊಂದು ಜೀವಿಯ ಹಕ್ಕು. ಆದರೆ ಆ ಆನಂದವನ್ನು ಹುಡುಕಿ ಎಲ್ಲೆಲ್ಲೋ ಅಲೆದಾಡಬೇಕಿಲ್ಲ, ನಮ್ಮೊಳಗೇ ಹುಡುಕಿಕೊಳ್ಳಬೇಕು ಅನ್ನುತ್ತಾರೆ ರಮಣ ಮಹರ್ಷಿಗಳು.  ಮನುಷ್ಯ ಜೀವನದ ಒಂದು ವಿಪರ್ಯಾಸವೆಂದರೆ ಆನಂದ ಬೇಕೆಂದು ಸಂಕಟಪಡುವುದು. ಆನಂದದ ಬದುಕು ನಮಗೆ ಬೇಕೆಂದು ಚಿಂತಿಸುತ್ತಾ, ಅದು ದೊರೆಯುತ್ತಿಲ್ಲವೆಂದು ದುಃಖಿಸುವುದು!  ಸಂಕಟಪಟ್ಟರೆ, ದುಃಖಿಸಿದರೆ, ಮರುಗಿದರೆ, ಅಥವಾ ಇನ್ಯಾರೋ ಆನಂದದಿಂದ ಇದ್ದಾರೆಂದು ಹೊಟ್ಟೆ ಉರಿಸಿಕೊಂಡರೆ ನಮಗೆ ಆನಂದ ಸಿಗುತ್ತದೆಯೇ? ಖಂಡಿತಾ ಇಲ್ಲ. ಈ ಎಲ್ಲ ನಕಾರಾತ್ಮಕ ಪ್ರಕ್ರಿಯೆಗಳಿಂದ ನಾವು ಮತ್ತಷ್ಟು ದುಃಖದ ಮಡುವಿನಲ್ಲಿ […]

ಧ್ಯಾನ ಮತ್ತು ಸಮಾಧಿ : ಪ್ರಶ್ನೆಗಳಿಗೆ ರಮಣ ಮಹರ್ಷಿಗಳ ಉತ್ತರ

ಪ್ರಶ್ನೆ : ಸುಷುಪ್ತಿಯಲ್ಲಿ ಇರುವ ಆನಂದವನ್ನೇ ಸಮಾಧಿಯಲ್ಲಿ ಹೊಂದಬೇಕು ಎಂದು ಹೇಳುತ್ತಾರೆ. ಸುಷುಪ್ತಿಯಲ್ಲಿ ಅವಿದ್ಯೆ ಇದ್ದೇ ಇದೆಯಲ್ಲವೆ? ಹಾಗಾದರೆ ಇದು ಹೇಗೆ ಸರಿಹೊಂದುತ್ತದೆ? ರಮಣ ಮಹರ್ಷಿಗಳು : ಅದಕ್ಕಾಗಿಯೇ ಸುಷುಪ್ತಿಯನ್ನೂ ಸಹ ನಿರಾಕರಿಸಬೇಕೆಂದು ಹೇಳಲಾಗಿದೆ. ಸುಷುಪ್ತಿಯಲ್ಲಿ ಆನಂದಮಯನಾಗಿ ಒಬ್ಬನು ಇರುವವನಾದರೂ ಅವನಿಗೆ ಅದರ ತಿಳಿವಳಿಕೆಯೇ ಇಲ್ಲದಿರುವ ಕಾರಣ ಆ ಸ್ಥಿತಿಯನ್ನೂ ಬಿಡಬೇಕಾದದ್ದೇ. ಆದರೆ ಅಲ್ಲಿ (ಸುಷುಪ್ತಿಯಲ್ಲಿ) ಆನಂದವೆಂಬುದು ಇತ್ತೆಂದು ಹೇಳುವುದು  – ನಾನು ಸುಖವಾಗಿ ನಿದ್ರೆ ಮಾಡಿದೆನೆಂದು ಎಚ್ಚರವಾದ ಮೇಲೆ ಹೇಳಿದಂತೆ! ಆನಂದವನ್ನು ನಾವು ಜಾಗ್ರತಾವಸ್ಥೆಯಲ್ಲೇ ಅನುಭವಿಸಬೇಕು. […]