ಪ್ರೇಮವೊಂದೆ ಚಿರವಿರಲಿ ನಿನ್ನೆಡೆಗೆ ~ ಸೂಫಿಗಳ ‘ತೋಬಾ’ ಪ್ರಾರ್ಥನೆ

ಮುಸ್ಲಿಮ್ ಸಮುದಾಯ ತಿಂಗಳ ಕಾಲದ ವಿಶಿಷ್ಟ ಬಗೆಯ ಉಪವಾಸ ಮುಗಿಸಿ ಹಬ್ಬದ ಸಂಭ್ರಮದಲ್ಲಿದೆ. ರಂಜಾನ್, ಉಪವಾಸ, ದಾನ ಮತ್ತು ಪ್ರಾರ್ಥನೆಗಳ ಪವಿತ್ರ ತಿಂಗಳು. ಹಬ್ಬದ ಹಿನ್ನೆಲೆಯಲ್ಲಿ, ಸೂಫೀಗಳ ‘ತೋಬಾ’ ಪ್ರಾರ್ಥನೆಯಿಂದ ಹೆಣೆದ ಪದ್ಯ ಇಲ್ಲಿದೆ…. ಪಶ್ಚಾತ್ತಾಪದ ಕಂಬನಿ ಕುದಿಗೆ ಕರುಳು ಬೆಂದ ವಾಸನೆ ತೋಬಾ ಎ ಹಾಲ್ ಆಣೆ ಇಡುವೆ ಪ್ರೇಮವೇ, ತೋಬಾ ಎ ಪಾ ಹರಾಮಿ ಹೆಜ್ಜೆಯಿಡೆನು ಮತ್ತೆಂದೂ ಮನ್ನಿಸು, ಕಡುಪಾಪಿ ನಾನು. ತೋಬಾ ಎ ಚಶ್ಮ್ ನೀನಲ್ಲದ ಮತ್ತೇನೂ ನೋಡದಿರಲಿ ಕಣ್ಣು ತೋಬಾ ಎ […]