ನಿಜವಾದ ಬೋಧನೆ ಯಾವುದು? : ಪರಮಹಂಸ ವಚನ ವೇದ

ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.

ಈ ಸಂಸಾರ ಮಿಥ್ಯೆಯೇ? : ರಾಮಕೃಷ್ಣ ವಚನವೇದ

ಬಂದು ಹೋಗಲು  ಮಾರ್ಗವಿದೆ.  ಆದರೂ  ಮೀನು ಬೋನಿನಿಂದ ತಪ್ಪಿಸಿಕೊಂಡು ಹೋಗದು. ರೇಷ್ಮೆಹುಳು ತನ್ನನ್ನು ತಾನೇ  ಬಂಧಿಸಿಕೊಂಡು,  ತಾನಾಗಿಯೇ  ಸಾಯುತ್ತದೆ.  ಈ ರೀತಿಯ ಈ ಜಗತ್ತು ಮಿಥ್ಯೆಯಾದದ್ದು, ಅನಿತ್ಯವಾದದ್ದು

ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ : ನಮ್ಮ ಬೆಳವಣಿಗೆಯೊಡನೆ ಲೋಕ ಹಿತ ದೃಷ್ಟಿ…..

ರಾಮಕೃಷ್ಣ ಮಿಷನ್ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಅದಕ್ಕೆ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಧ್ಯೇಯ ವಾಕ್ಯವನ್ನೂ ಕೊಟ್ಟರು. ಇದರ ಅರ್ಥ, “ಸ್ವಂತದ ಮುಕ್ತಿಗಾಗಿಯೂ ಜಗತ್ತಿನ ಹಿತಕ್ಕಾಗಿಯೂ (ಸಾಧನೆ ಮಾಡುವುದು)” ಎಂದು. ಈ ಬೋಧನೆಯನ್ನು ಅವರು ಪಡೆದದ್ದು ಗುರು ರಾಮಕೃಷ್ಣ ಪರಮಹಂಸರ ಬದುಕಿನಿಂದ ~ ಆನಂದಪೂರ್ಣ

ರಾಮಕೃಷ್ಣ ಪರಮಹಂಸ – ವಿವೇಕಾನಂದರ ಸಂಭಾಷಣೆ : ವ್ಯಕ್ತಿತ್ವ ವಿಕಸನ ಪಾಠಗಳು

ಅದ್ಭುತ ಗುರು, ಅದ್ವಿತೀಯ ಶಿಷ್ಯ ಜೋಡಿಯಾದ ರಾಮಕೃಷ್ಣ ಪ್ರಮಹಂಸ ಮತ್ತು ವಿವೇಕಾನಂದರ ಸಂಭಾಷಣೆಗಳು ವ್ಯಕ್ತಿತ್ವ ವಿಕಸನ, ತನ್ಮೂಲಕ ಆತ್ಮವಿಕಸನಕ್ಕೆ ಇಂಬು ಕೊಡುವಂತೆ ಇರುತ್ತಿದ್ದವು. ಅಂತಹ ಸಂಭಾಷಣೆಗಳಲ್ಲಿ ಒಂದು ತುಣುಕನ್ನು ಆಯ್ದು ಇಲ್ಲಿ ನೀಡಿದ್ದೇವೆ.  ಸ್ವಾಮಿ ವಿವೇಕಾನಂದ : ಗುರುದೇವ! ನನಗೆ ಬಿಡುವೇ ಸಿಗುತ್ತಿಲ್ಲ. ಬದುಕು ದುಸ್ತರವಾಗುತ್ತಿದೆ. ರಾಮಕೃಷ್ಣ ಪರಮಹಂಸ : ಕೇವಲ ಚಟುವಟಿಕೆಗಳು ನಿನ್ನನ್ನು ವ್ಯಸ್ತವಾಗಿಡುತ್ತವೆ. ಅಲ್ಲಿ ಉತ್ಪಾದನೆ ನಡೆಯುತ್ತಿದ್ದರೆ, ನಿನಗೆ ಬಿಡುವು ದೊರೆಯುತ್ತದೆ. (ಸುಮ್ಮನೆ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇದ್ದರೆ ಸಮಯ ತಿನ್ನುತ್ತದೆ ಹೊರತು ಪ್ರಯೋಜನವಿಲ್ಲ. […]

ಮರಳಿ ಯತ್ನವ ಮಾಡು : ಪರಮಹಂಸ ವಚನ ವೇದ

ರಾಮಕೃಷ್ಣ ಪರಮಹಂಸರು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದರಿಂದ ಎಂಥಾ ಕಷ್ಟದ ಕಾರ್ಯವನ್ನೂ ಸಾಧಿಸಬಹುದು ಎಂದು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಸಾಧನೆಯ ಹಾದಿಯಲ್ಲಿ ತೊಡಕುಗಳು ಎದುರಾಯಿತೆಂದು ಶಿಷ್ಯರು ಅವರ ಬಳಿ ಬಂದಾಗೆಲ್ಲ ಅವರು ಛಲ ಬಿಡದೆ ಪ್ರಯತ್ನ ಮುಂದುವರೆಸಿ ಎಂದೇ ಹೇಳುತ್ತಿದ್ದುದು. ಅಂತಹ ಒಂದು ಪ್ರಸಂಗದಲ್ಲಿ ನೀಡಿದ ಬೋಧನೆ ಇಲ್ಲಿದೆ: ಸಮುದ್ರದಲ್ಲಿ ಒಮ್ಮೆ ಮುಳುಗಿದಾಗ ಅಲ್ಲಿ ಮುತ್ತು ಸಿಗದೇ ಇದ್ದರೆ ಅಲ್ಲಿ ಮುತ್ತೇ ಇಲ್ಲವೆಂದು ತಿಳಿಯಬೇಡಿ. ಸಮುದ್ರದಲ್ಲಿ ಲೆಕ್ಕವಿಲ್ಲದಷ್ಟು ಮುತ್ತುಗಳು ಹುದುಗಿವೆ. ಸ್ವಲ್ಪ ಸಾಧನೆಯನ್ನು ಮಾಡಿದ ಮೇಲೆ ಫಲ ದೊರೆಯುವ […]

ಶ್ರದ್ಧೆ ಮತ್ತು ಮಂತ್ರ ರಹಸ್ಯ

ಒಮ್ಮೆ ಒಬ್ಬ ಸಮುದ್ರವನ್ನು ದಾಟಬೇಕಿತ್ತು. ಹಡಗು, ದೋಣಿಯಂಥಾ ಯಾವ ಸಾಧನವೂ ಲಭ್ಯವಿರಲಿಲ್ಲ. ಸಮುದ್ರ ದಡದಲ್ಲಿ ನಿಂತು ಅವನು ಯೋಚಿಸುತ್ತ ದುಃಖಿಸುತ್ತಿದ್ದ. ಅದೇ ವೇಳೆಗೆ ಜಾಂಬವಂತ ಅಲ್ಲಿಗೆ ಬಂದ. “ಯಾಕೆ ದುಃಖದಲ್ಲಿದ್ದೀಯ?” ಎಂದು ಪ್ರಶ್ನಿಸಿದ. “ನಾನು ಈ ಸಮುದ್ರವನ್ನು ದಾಟಬೇಕಿದೆ. ಯಾವ ನೌಕೆಯೂ ಇಲ್ಲವೆಂದು ಬೇಸರವಾಗಿದೆ” ಅಂದ ಆ ವ್ಯಕ್ತಿ. ಜಾಂಬವಂತ ಅವನ ಮೇಲೆ ಅನುಕಂಪವಿಟ್ಟು, ಎಲೆಯೊಂದರಲ್ಲಿ ಒಂದು ಮಂತ್ರ ಬರೆದು, ಅದನ್ನು ಮಡಚಿ ಅವನ ಕೈಗೆ ಕೊಟ್ಟ. “ನೋಡು! ಇದನ್ನು ಭದ್ರವಾಗಿಟ್ಟುಕೋ. ಇದರೊಳಗೆ ಮಂತ್ರವಿದೆ. ಈ ಮಂತ್ರದ […]

ಬಂಗಾರದ ಬಳೆಗಳನ್ನು ಧರಿಸಿದ ಗೃಹಿಣಿ

ಒಂದು ಊರಿನಲ್ಲಿ ಒಬ್ಬಳು ಸದ್ಗೃಹಿಣಿ ಇದ್ದಳು. ವೃದ್ಧ ಗಂಡನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ವಯೋಸಹಜವಾಗಿ ಆಕೆಯ ಗಂಡ ಒಂದು ದಿನ ತೀರಿಹೋದ. ಗೃಹಿಣಿ ತಾನೇ ಮುಂದೆ ನಿಂತು ಅಪರಕರ್ಮಗಳನ್ನೆಲ್ಲ ಮಾಡಿಸಿದಳು. ಎರಡೂ ಕೈತುಂಬ ತೊಟ್ಟಿದ್ದ ಗಾಜಿನ ಬಳೆಗಳನ್ನು ಬಿಚ್ಚಿಟ್ಟಳು. ಅದನ್ನು ನೋಡಿ ಊರ ಹೆಂಗಸರು “ಗಂಡನಿಲ್ಲದ ಮೇಲೆ ಅಲಂಕಾರವೇಕೆ? ಬಳೆ ತೆಗೆದಿದ್ದು ಒಳ್ಳೆಯದಾಯ್ತು” ಅಂತ ಮಾತಾಡಿಕೊಂಡರು. ಅದಾಗಿ ನಾಲ್ಕನೇ ದಿನಕ್ಕೆ ಆಕೆ ಎರಡೂ ಕೈಗಳಿಗೆ ಕಡಗಗಳಂಥಾ ಒಂದೊಂದು ಬಂಗಾರದ ಬಳೆಯನ್ನು ತೊಟ್ಟುಕೊಂಡಳು. ಬಾವಿಯಿಂದ ನೀರು ತರಲು ಹೋದಾಗ ಅಕ್ಕಪಕ್ಕದ […]

ಶ್ರದ್ಧೆ ಇದ್ದಲ್ಲಿ ಸಾಧನೆ ಸುಲಭ : ಪರಮಹಂಸ ವಚನ ವೇದ

ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ: ಅಧ್ಯಾತ್ಮ ಸಾಧನೆಗೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾದುದು ಶ್ರದ್ಧೆ. ಸ್ವತಃ ನಿಮ್ಮ ಮೇಲಿನ ಶ್ರದ್ಧೆ ಹಾಗೂ ಯಾರ / ಯಾವುದರ ಕುರಿತು ಧ್ಯಾನಿಸುತ್ತೀರೋ ಅದರ / ಅವರ ಮೇಲಿನ ಶ್ರದ್ಧೆ. ಶಿಶುಸಹಜವಾದ ಶ್ರದ್ಧೆ ಮತ್ತು ಸರಳತೆಯಿಂದ ಭಗವಂತನನ್ನು ಕೂಡಾ ಹೊಂದಬಹುದು. ಒಮ್ಮೆ ಒಬ್ಬನು, ಸಾಧುವೊಬ್ಬರನ್ನು ಕಂಡು ತನಗೆ […]

ಮೀನಿನಿಂದ ಫಜೀತಿಗೊಳಗಾದ ಹದ್ದು

ಒಮ್ಮೆ ಹದ್ದೊಂದು ಕೆರೆಯ ದಡದಲ್ಲಿ ಬೆಸ್ತನು ಹಿಡಿದಿಟ್ಟ ಮೀನನ್ನು ಎತ್ತಿಕೊಂಡು ಹಾರಿತು. ಹದ್ದಿನ ಕೊಕ್ಕಿನಲ್ಲಿ ಮೀನನ್ನು ಕಂಡೊಡನೆ ಹತ್ತಾರು ಕಾಗೆಗಳು ಕಾವ್ ಕಾವ್ ಅನ್ನುತ್ತಾ ಅದರ ಸುತ್ತ ಸುತ್ತುವರಿದವು. ಹದ್ದು ಎತ್ತ ಹೋದರೂ ಕಾಗೆಗಳ ಹಿಂಡು ಅದನ್ನು ಹಿಂಬಾಲಿಸಿದವು. ಹತ್ತರಷ್ಟಿದ್ದ ಹಿಂಡಿಗೆ ನೂರಾರು ಕಾಗೆಗಳು ಸೇರಿಕೊಂಡವು. ಅವುಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲು ಹದ್ದು ಪರದಾಡಿತು. ಈ ಪರದಾಟದಲ್ಲಿ ಅದರ ಕೊಕ್ಕಿನಲ್ಲಿದ್ದ ಮೀನು ಕೆಳಗೆ ಬಿತ್ತು. ಮೀನು ಕೆಳಗೆ ಬೀಳುತ್ತಿದ್ದಂತೆಯೇ ಹದ್ದನ್ನು ಬಿಟ್ಟು ಕಾಗೆಗಳು ಅದರತ್ತ ಮುಗಿಬಿದ್ದವು. ಈ ಎಲ್ಲ […]

ರಾಮಕೃಷ್ಣರು ಹೇಳಿದ ಒಂದು ದೃಷ್ಟಾಂತ ಕಥೆ

ಒಮ್ಮೆ ಒಬ್ಬ ಗುರು ತನ್ನ ಶಿಷ್ಯನಿಗೆ ಬೋಧನೆ ಮಾಡುತ್ತಾ, “ಪತ್ರಿಯೊಂದು ಜೀವಿಯಲ್ಲೂ ನಾರಾಯಣ ನೆಲೆಸಿದ್ದಾನೆ” ಎಂದು ಹೇಳಿದರು.  ಗುರುವಿನ ಈ ಮಾತು ಶಿಷ್ಯನ ತಲೆಯಲ್ಲಿ ಅಚ್ಚೊತ್ತಿ ನಿಂತಿತು. ಮರುದಿನ ಆ ಶಿಷ್ಯ ಚಿಕ್ಕದೊಂದು ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಆನೆ ಬರುತ್ತಿರುವುದು ಕಾಣಿಸಿತು. ಆನೆಯ ಮೇಲಿದ್ದ ಮಾವುತನು ದಾರಿಹೋಕರಿಗೆ  “ಆನೆಗೆ ಮದವೇರಿದೆ, ನನ್ನ ಅಂಕುಶಕ್ಕೂ ಮಣಿಯುತ್ತಿಲ್ಲ, ರಸ್ತೆಯಿಂದ ದೂರ ಸರಿಯಿರಿ” ಎಂದು ಕೂಗಿ ಹೇಳುತ್ತಿದ್ದ. ಶಿಷ್ಯನಿಗೂ ಈ ಕೂಗು ಕೇಳಿಸಿತು. ಆದರೆ ಸಕಲ ಪ್ರಾಣಿಗಳಲ್ಲೂ ನಾರಾಯಣ ನೆಲೆಸಿರುತ್ತಾನೆ, […]