ರಾಮಕೃಷ್ಣರ ಸತ್ಯ ದರ್ಶನ : ದಾರ್ಶನಿಕ ಕವಿ ಕುವೆಂಪು ಕಂಡಂತೆ

“ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ, ಯೋಗಪ್ರವೀಣರು. ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲಹೃದಯದಿಂದಲೂ ಪರೀಕ್ಷಿಸಿ ಸಮನ್ವಯತತ್ತ್ವಸಿದ್ಧರಾದವರು. ಸರ್ವಧರ್ಮಸಮನ್ವಯಾಚಾರ್ಯರಾದವರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ದಾರಿಗಳು ಎಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ. ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸ್ಯಸತ್ಯವಾಗಿತ್ತು.” ಎಂದು ಬರೆಯುತ್ತಾರೆ ದಾರ್ಶನಿಕ ಕವಿ ಕುವೆಂಪು.  “ಎಷ್ಟು ಮತಗಳಿವೆಯೋ ಅಷ್ಟು ಪಥಗಳಿವೆ. ನೀರನ್ನು ಯಾವ ಭಾಷೆಯಲ್ಲಿ ಕರೆದರೂ ಅದು ನೀರೇ ಆಗಿರುತ್ತದೆಯಲ್ಲವೆ? ಹಾಗೆಯೇ ಭಗವಂತನನ್ನು ಯಾವ ಹೆಸರಿನಿಂದ ಕರೆದರೂ ಆತ […]