ನಿಜವಾದ ಸಂತೋಷ ಯಾವುದು? : ಸ್ವಾಮಿ ರಾಮತೀರ್ಥ

ಮಗುವಾಗಿದ್ದಾಗ ಹಾಲು, ಬೆಳೆಯುತ್ತ ಆಟಿಕೆಗಳು, ಯೌವನದಲ್ಲಿ ಸಾಂಗತ್ಯ, ವಯಸ್ಕ ಜೀವನದಲ್ಲಿ ದಾಂಪತ್ಯ, ಸಂತಾನ – ಇವೆಲ್ಲವನ್ನೂ ಪಡೆದು ನಾವು ಅವನ್ನೇ ಶಾಶ್ವತ ಸಂತೋಷ ಎಂದು ಭಾವಿಸುತ್ತೇವೆ. ಆದರೆ, ನಿಜವಾದ ಸಂತೋಷ ಪಡೆಯುವುದರಲ್ಲಿ ಇಲ್ಲ, ತ್ಯಾಗ ಮಾಡುವುದರಲ್ಲಿ ಇದೆ. ಅನ್ನುತ್ತಾರೆ ಸ್ವಾಮಿ ರಾಮತೀರ್ಥ | ಸಂಗ್ರಹ ಮತ್ತು ಅನುವಾದ ಪ್ರಣವ ಚೈತನ್ಯ

ರಾಮತೀರ್ಥರು ಹೇಳುವ ಐದು ವಿಧದ ಮನುಷ್ಯರು… : ನಿಮ್ಮದು ಯಾವ ವಿಧ, ಕಂಡುಕೊಳ್ಳಿ!

ಜಗತ್ತಿನಲ್ಲಿ ನಮಗೆ ಐದು ವಿಧದ ಮನುಷ್ಯರು ಸಿಗುತ್ತಾರೆ. ಯಾರು ಈ ಐದು ವಿಧದ ಮನುಷ್ಯರು? ಅವರನ್ನು ಧರ್ಮದಿಂದಾಗಲಿ ದುಡ್ಡಿನಿಂದಾಗಲಿ ಬೇರೆ ಮಾಡಿ ಹೇಳಲಾಗುವುದಿಲ್ಲ, ಅವರ ಗುಣಗಳನ್ನು ಪರಿಶೀಲಿಸಿದ ನಂತರ ಈ ವರ್ಗಗಳನ್ನು ರಾಮತೀರ್ಥರು ಮಾಡಿದ್ದಾರೆ. ಅವರ ವಿವರಣೆಯನ್ನು ಓದಿ; ನೀವು ಯಾವ ವಿಧದವರು, ಯಾವ ವಿಧವನ್ನು ಆಯ್ದುಕೊಳ್ಳಬೇಕು, ನೀವೇ ನಿರ್ಧರಿಸಿ!! ~ ಪ್ರಣವ ಚೈತನ್ಯ | ಕಲಿಕೆಯ ಟಿಪ್ಪಣಿಗಳು

ಬಿಡುಗಡೆಯ ಮಾತಿಗೆ ಮೊದಲು ಬಂಧನದ ಮೂಲ ಅರಿಯಿರಿ : ಸ್ವಾಮಿ ರಾಮತೀರ್ಥ ವಿಚಾರ ಧಾರೆ

ಈ ಭವ್ಯವೂ ಸಮೃದ್ಧವೂ ಆದ ಇಡೀ ವಿಶ್ವವೆಂಬ ಮಹಾರಣ್ಯದಲ್ಲಿ ಇಕ್ಕಟ್ಟಾದ ಕಂಠವುಳ್ಳ ಒಂದು ಹೂಜಿ ಇದೆ. ನಿಮ್ಮ ಪುಟ್ಟ ಮೆದುಳೇ ಆ ಸಂಕುಚಿತ ಕಂಠದ ಹೂಜಿ. ಇವು ನಮಗೆ ಇಷ್ಟವಾದವು, ಇವು ನಮ್ಮಮೆಚ್ಚಿನವು ಎಂದು ನೀವು ಅಕಾರಣವಾಗಿ ಕಲ್ಪಿಸಿಕೊಂಡ ಕೆಲವು ವಿಷಯಗಳೇ ನಿಮ್ಮ ಮೆದುಳೆಂಬ ಹೂಜಿಯಲ್ಲಿ ನೀವು ಹಾಕಿಟ್ಟುಕೊಂಡಿರುವ ತಿನಿಸುಗಳು. ನಿಮ್ಮ ಮನಸ್ಸೆಂಬ ಮಂಗ ಇವು ನನಗೆ ಬೇಕು, ಇವು ನನ್ನವು ಎಂದು ನಿಮ್ಮ ಮೆದುಳಿನಲ್ಲಿ ನೀವೇ ಇಟ್ಟುಕೊಂಡಿರುವ ಮೆಚ್ಚಿನ ತಿಂಡಿಗಳನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತದೆ.

ಗಣಿತ ಮತ್ತು ಅಧ್ಯಾತ್ಮದ ಕಲಿಕೆ : ಸ್ವಾಮಿ ರಾಮತೀರ್ಥರ ವಿಚಾರ ಧಾರೆ

ಗಣಿತವನ್ನಾಗಲೀ ಅಧ್ಯಾತ್ಮವನ್ನಾಗಲೀ ಸರಳೀಕರಿಸಲು ಬರುವುದಿಲ್ಲ, ಈ ವಿಷಯವನ್ನು ಕಲಿಯಲು ಶ್ರದ್ಧೆ
ಜೊತೆಯಲ್ಲಿಮತ್ತೆ ಮತ್ತೆ ಮನನ ಮಾಡುವುದೇ ರಾಜಮಾರ್ಗ ಎನ್ನುತ್ತಾರೆ ಸ್ವಾಮಿ ರಾಮತೀರ್ಥ.

ಪರಮ ಚೈತನ್ಯದೆಡೆಗೆ ಪ್ರೇಮವಿರಲಿ ~ ರಾಮತೀರ್ಥರ ವಿಚಾರ ಧಾರೆ

ಪ್ರೇಮಿಯು ಪ್ರಿಯನನ್ನೇ ಎಲ್ಲದರಲ್ಲೂ ಕಾಣುವಂತೆ; ಬ್ರಹ್ಮಸತ್ತೆಯನ್ನು ಮಾತ್ರವೇ ಭಾವಿಸಿ, ಪ್ರತಿಮೆಯಲ್ಲಿ ಪ್ರತಿಮಾಪನೆಯು ಹಾರಿ ಹೋಗಲಿ, ಚೈತನ್ಯ ಸ್ವರೂಪ ಭಗವಂತನನ್ನು ಮಾತ್ರವೇ ದರ್ಶಿಸಿ

ಪಿತೂರಿಕೋರರ ಸಂಚಿನಿಂದ ಗೆಳೆಯನಿಗೆ ಗುರುವಾದ ಅಯಾಜ್!! : ರಾಮತೀರ್ಥರು ಹೇಳಿದ ಕಥೆ

ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ ಗೆಳೆಯ ಅಯಾಜನನ್ನು ದೊರೆ ಮಹಮೂದ್, ತನ್ನ ಮುಖ್ಯಮಂತ್ರಿಯನ್ನಾಗಿ ನೇಮಿಸಿಕೊಂಡ. ಸಂಚುಕೋರರ ಪಿತೂರಿಯಿಂದ ಮುಖ್ಯಮಂತ್ರಿ, ಆತನ ಗುರುವೂ ಆದ!!

ಪಂಚೇಂದ್ರಿಯಗಳನ್ನು ಸಮರ್ಥವಾಗಿ ಬಳಸಿ, ನಿಮ್ಮ ಸ್ವಾತಂತ್ರ್ಯ ಉಳಿಸಿಕೊಳ್ಳಿ!

“ಇನ್ನೊಬ್ಬರ ಅಭಿಪ್ರಾಯವನ್ನು ಅನುಮೋದಿಸುವಾಗ ಅದು ಮೊದಲು ನಮಗೆ ಸಂಪೂರ್ಣ ಸಮ್ಮತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು. ಗುಂಪಿನಲ್ಲಿ ಸುಮ್ಮನೆ ಕೈಯೆತ್ತುವುದರಿಂದ ನಮಗೆ ನಾವೇ ದ್ರೋಹ ಮಾಡಿಕೊಂಡಂತಾಗುತ್ತದೆ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ ಒಂದು ದೃಷ್ಟಾಂತ. ಒಂದೂರಿನಲ್ಲಿ ಎರಡು ವರ್ಷಗಳಿಂದ ಮಳೆಯೇ ಆಗಿರುವುದಿಲ್ಲ. ಮುಖಂಡರೆಲ್ಲ ಸೇರಿಕೊಂಡು ಮಹಾಯಾಗವನ್ನು ಆಯೋಜಿಸುತ್ತಾರೆ. ಪೂರ್ಣಾಹುತಿಯ ದಿನ ವರ್ಷಧಾರೆ ಖಚಿತ ಎಂದು ಪುರೋಹಿತರು ಘೋಷಿಸುತ್ತಾರೆ. ಅದರಂತೆ ಒಂದು ವಾರ ಅವಧಿಯ ಮಹಾಯಾಗ ನಡೆಯುತ್ತದೆ. ಪ್ರತಿಯೊಬ್ಬರಲ್ಲೂ ಮಳೆಯ ನಿರೀಕ್ಷೆ, ಪೂರ್ಣಾಹುತಿಯ ದಿನದ ಸಂಭವನೀಯತೆಯ ಬಗ್ಗೆ ಮಾತು. ಪುರೋಹಿತರ ಮಾತಿಗೆ ಯಾರೊಬ್ಬರದೂ […]

ನಾನೇ ಭಾರತ, ಭಾರತವೇ ನಾನು… : ಅರಳಿಮರ POSTER

“ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ” ಎಂದು ಘೋಷಿಸಿದ್ದರು ಸ್ವಾಮಿ ರಾಮತೀರ್ಥ ಅಪ್ರತಿಮ ಅದ್ವೈತಿಯಾಗಿದ್ದ ರಾಮತೀರ್ಥರು  “ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ” ಎಂದು ಘೋಷಿಸಿದ್ದರು.  ಒಬ್ಬ ವ್ಯಕ್ತಿಯಲ್ಲಿ ಒಂದು ದೇಶವನ್ನು ಕಾಣಲು ಸಾಧ್ಯವಾಗಬೇಕು. ಹೀಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರವನ್ನೆ ಕಂಡರೆ, ಪರಸ್ಪರ ಸೇವೆಗೈಯುತ್ತ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದು ಅವರ ಬೋಧನೆಯ ಸಾರವಾಗಿತ್ತು. 

ನರಕಕ್ಕೆ ಹೋದ ಹಕ್ಸ್ಲೆ ಮತ್ತು ಡಾರ್ವಿನ್ ಮಾಡಿದ್ದೇನು ಗೊತ್ತಾ!?

ಇಂಗ್ಲೆಂಡಿನಲ್ಲಿ ಒಬ್ಬ ಪಾದ್ರಿ ಇದ್ದನು. ಅವನು ಯಾವಾಗಲೂ ಪಾಪ, ಪುಣ್ಯ; ಸ್ವರ್ಗ, ನರಕಗಳ ಬಗ್ಗೆಯೇ ಚಿಂತಿಸುತ್ತಿದ್ದನು. ಹೀಗಿರುತ್ತ, ಒಮ್ಮೆ ಅವನಿಗೆ ಮಹಾನ್ ವಿಜ್ಞಾನಿಗಳಾದ ಹಕ್ಸ್ಲೆ ಮತ್ತು ಡಾರ್ವಿನ್ ಸತ್ತ ಮೇಲೆ ನರಕಕ್ಕೆ ಹೋಗಿರುತ್ತಾರೋ ಸ್ವರ್ಗಕ್ಕೆ ಹೋಗಿರುತ್ತಾರೋ ಅನ್ನುವ ಜಿಜ್ಞಾಸೆ ಉಂಟಾಯಿತು. “ಹಕ್ಸ್ಲೆಯಾಗಲೀ, ಡಾರ್ವಿನ್ ಆಗಲೀ ಆಸ್ತಿಕರಾಗಿರಲಿಲ್ಲ. ಬೈಬಲ್ ಅನ್ನೂ ಕ್ರಿಸ್ತನನ್ನೂ ನಂಬುತ್ತಿರಲಿಲ್ಲ. ಆದ್ದರಿಂದ ಅವರು ನರಕಕ್ಕೇ ಹೋಗಿರಬೇಕು” ಎಂದು ಒಂದು ಸಲ ಅನ್ನಿಸಿದರೆ, ಮರುಕ್ಷಣ “ಛೆಛೆ… ಅವರಿಬ್ಬರೂ ನಾಸ್ತಿಕರಾಗಿದ್ದರೂ ಯಾವ ಅಪರಾಧವನ್ನೂ ಮಾಡಿದವರಲ್ಲ. ಜನೋಪಯೋಗಿಯಾಗಿ ಬಾಳಿದವರು. ಹಾಗಾದರೆ […]