ನಿಜವಾದ ಶಿವಾಜಿ ಮಹಾರಾಜರನ್ನು ನಾವು ಮರೆತುಬಿಟ್ಟಿದ್ದೇವೆಯೆ?

ಫೆಬ್ರವರಿ 19, ಈ ಅಪ್ರತಿಮ ವ್ಯಕ್ತಿತ್ವದ ಜನ್ಮದಿನ.  ಶಿವಾಜಿ ಬಹಿರಂತರಂಗ ಯುದ್ಧಗಳೆರಡರಲ್ಲೂ ಹೋರಾಟ ನಡೆಸಿದವರು.  ಕ್ಷಾತ್ರ ತೇಜ ಮಾತ್ರವಲ್ಲ, ಆಧ್ಯಾತ್ಮಿಕ ಸಾಧನೆ – ಶ್ರದ್ಧೆಯಲ್ಲೂ ಉನ್ನತಿ ಸಾಧಿಸಿದ್ದ ಶಿವಾಜಿ ಪರಿಪಕ್ವತೆಗೊಂದು ಸಾರ್ವಕಾಲಿಕ ನಿದರ್ಶನ. ಈ ನಿಟ್ಟಿನಲ್ಲಿ ನಾವು ಶಿವ್ ಬಾ ಅವರನ್ನು ನೆನೆಯಬೇಕಲ್ಲವೆ?