ಶ್ರದ್ಧೆ ಮತ್ತು ಮಂತ್ರ ರಹಸ್ಯ

ಒಮ್ಮೆ ಒಬ್ಬ ಸಮುದ್ರವನ್ನು ದಾಟಬೇಕಿತ್ತು. ಹಡಗು, ದೋಣಿಯಂಥಾ ಯಾವ ಸಾಧನವೂ ಲಭ್ಯವಿರಲಿಲ್ಲ. ಸಮುದ್ರ ದಡದಲ್ಲಿ ನಿಂತು ಅವನು ಯೋಚಿಸುತ್ತ ದುಃಖಿಸುತ್ತಿದ್ದ. ಅದೇ ವೇಳೆಗೆ ಜಾಂಬವಂತ ಅಲ್ಲಿಗೆ ಬಂದ. “ಯಾಕೆ ದುಃಖದಲ್ಲಿದ್ದೀಯ?” ಎಂದು ಪ್ರಶ್ನಿಸಿದ. “ನಾನು ಈ ಸಮುದ್ರವನ್ನು ದಾಟಬೇಕಿದೆ. ಯಾವ ನೌಕೆಯೂ ಇಲ್ಲವೆಂದು ಬೇಸರವಾಗಿದೆ” ಅಂದ ಆ ವ್ಯಕ್ತಿ. ಜಾಂಬವಂತ ಅವನ ಮೇಲೆ ಅನುಕಂಪವಿಟ್ಟು, ಎಲೆಯೊಂದರಲ್ಲಿ ಒಂದು ಮಂತ್ರ ಬರೆದು, ಅದನ್ನು ಮಡಚಿ ಅವನ ಕೈಗೆ ಕೊಟ್ಟ. “ನೋಡು! ಇದನ್ನು ಭದ್ರವಾಗಿಟ್ಟುಕೋ. ಇದರೊಳಗೆ ಮಂತ್ರವಿದೆ. ಈ ಮಂತ್ರದ […]