ಶ್ರೀ ರಾಮಾನುಜಾಚಾರ್ಯ: ಜ್ಞಾನ ಭಕ್ತಿ ಸಮನ್ವಯದ ವಿಶಿಷ್ಟ ವೇದಾಂತಿ

ರಾಮಾನುಜರು ಸಂಪ್ರದಾಯದ ಸಂಕುಚಿತ ಆವರಣವನ್ನು ತೊಡೆದು ವಿಶಾಲಗೊಳಿಸುತ್ತಾ ಸಾಗಿದರು. ಮತ್ತು ಅಲ್ಲಿ ಜಾತಿಮತ ಲಿಂಗ ಭೇದಗಳಿಲ್ಲದೆ ಎಲ್ಲರನ್ನೂ ಒಳಗೊಳಿಸಿಕೊಂಡರು. ವಿಶಿಷ್ಟಾದ್ವೈತ ಮತ ಪ್ರಚಾರಕ್ಕಾಗಿ ಭಾರತದ ಉದ್ದಗಲಕ್ಕೂ ಸಂಚರಿಸಿದರು… | ಇಂದು (ಮೇ 9) ರಾಮಾನುಜ ಜಯಂತಿ ಹನ್ನೊಂದನೇ ಶತಮಾನದಲ್ಲಿ ಜನಿಸಿದ ವಿಶಿಷ್ಟ ವೇದಾಂತಿ ರಾಮಾನುಜಾಚಾರ್ಯರು ಭಾರತೀಯ (ಹಿಂದೂ) ತತ್ತ್ವಜ್ಞಾನಕ್ಕೆ ನೀಡಿದ ಕೊಡುಗೆ ಗಣನೀಯವಾದದ್ದು. ಶ್ರೀವೈಷ್ಣವ ಸಂಪ್ರದಾಯದ ಮುಖ್ಯ ಪ್ರವರ್ತಕರಾಗಿ ಗುರುತಿಸಲ್ಪಡುವ ರಾಮಾನುಜಾಚಾರ್ಯರು, ಭಕ್ತಿ ಚಳವಳಿಗೆ ಪ್ರೇರೇಪಣೆ ನೀಡಿದ ‘ವಿಶಿಷ್ಟಾದ್ವೈತ’ವನ್ನು ಪ್ರಚುರಪಡಿಸಿದರು. ರಾಮಾನುಜಾಚಾರ್ಯರ ಜೀವನವೂ ಬಹಳ ವಿಶಿಷ್ಟ. ಗುರು ಗೋಷ್ಠಿ […]

“ನೀನು ಯಾರನ್ನಾದರೂ ಪ್ರೇಮಿಸಿದ್ದೀಯಾ?” : ರಾಮಾನುಜರು ಕೇಳಿದ ಪ್ರಶ್ನೆ

ಒಮ್ಮೆ ರಾಮಾನುಜರು ಸಂಚರಿಸುತ್ತಾ ಒಂದು ಹಳ್ಳಿಯಲ್ಲಿ ತಂಗಿದರು. ಆಗ ಅವರನ್ನು ಕಾಣಲು ಒಬ್ಬ ವ್ಯಕ್ತಿಯು ಬಂದನು. ರಾಮಾನುಜರಿಗೆ ನಮಸ್ಕರಿಸಿ, “ನನಗೆ ಪರಮಾತ್ಮನನ್ನು ಹೊಂದಬೇಕು ಅನ್ನುವ ಇಚ್ಛೆ ಇದೆ. ದಯವಿಟ್ಟು ದಾರಿ ತೋರಿಸಿ” ಅಂದನು. ರಾಮಾನುಜರು ಅವನ ಮುಖವನ್ನೇ ನೋಡುತ್ತಾ, “ಆಗಬಹುದು. ಆದರೆ ನನ್ನದೊಂದು ಪ್ರಶ್ನೆ ಇದೆ” ಅಂದರು. ಏನು ಎಂದು ಕೇಳಲಾಗಿ, ಆ ವ್ಯಕ್ತಿಯನ್ನು ಕುರಿತು “ನೀನು ಯಾರನ್ನಾದರೂ ಪ್ರೇಮಿಸಿದ್ದೀಯಾ?” ಎಂದು ಕೇಳಿದರು. ಆ ವ್ಯಕ್ತಿಯು ಹಾವು ಮೆಟ್ಟಿದವರಂತೆ ಗಾಬರಿಬಿದ್ದು, “ಅಯ್ಯೋ! ಖಂಡಿತವಾಗಿಯೂ ನಾನು ಯಾರನ್ನೂ ಪ್ರೇಮಿಸಿಲ್ಲ. […]