ಒಮ್ಮೆ ರಾಮಾನುಜರು ಸಂಚರಿಸುತ್ತಾ ಒಂದು ಹಳ್ಳಿಯಲ್ಲಿ ತಂಗಿದರು. ಆಗ ಅವರನ್ನು ಕಾಣಲು ಒಬ್ಬ ವ್ಯಕ್ತಿಯು ಬಂದನು. ರಾಮಾನುಜರಿಗೆ ನಮಸ್ಕರಿಸಿ, “ನನಗೆ ಪರಮಾತ್ಮನನ್ನು ಹೊಂದಬೇಕು ಅನ್ನುವ ಇಚ್ಛೆ ಇದೆ. ದಯವಿಟ್ಟು ದಾರಿ ತೋರಿಸಿ” ಅಂದನು. ರಾಮಾನುಜರು ಅವನ ಮುಖವನ್ನೇ ನೋಡುತ್ತಾ, “ಆಗಬಹುದು. ಆದರೆ ನನ್ನದೊಂದು ಪ್ರಶ್ನೆ ಇದೆ” ಅಂದರು. ಏನು ಎಂದು ಕೇಳಲಾಗಿ, ಆ ವ್ಯಕ್ತಿಯನ್ನು ಕುರಿತು “ನೀನು ಯಾರನ್ನಾದರೂ ಪ್ರೇಮಿಸಿದ್ದೀಯಾ?” ಎಂದು ಕೇಳಿದರು. ಆ ವ್ಯಕ್ತಿಯು ಹಾವು ಮೆಟ್ಟಿದವರಂತೆ ಗಾಬರಿಬಿದ್ದು, “ಅಯ್ಯೋ! ಖಂಡಿತವಾಗಿಯೂ ನಾನು ಯಾರನ್ನೂ ಪ್ರೇಮಿಸಿಲ್ಲ. […]