ಗುರು – ಶಿಷ್ಯರ ನಡುವಣ ವ್ಯತ್ಯಾಸವೇನು? : ಸಾಇಲ್ ಪ್ರಶ್ನೆಗೆ ರಾ-ಉಮ್ ಉತ್ತರ

~ ಯಾದಿರಾ ವಾ-ಐನ್-ಸಾಇಲ್‌ಗೆ ಒಂದು ವಿಚಿತ್ರ ಅಭ್ಯಾಸವಿತ್ತು. ಅತಾರ್ಕಿಕ ಪ್ರಶ್ನೆಗಳನ್ನು ಕೇಳಿ ಅದಕ್ಕೆ ರಾ-ಉಮ್‌ಳಿಂದ ಉತ್ತರ ಬಯಸುವುದು. ಇದಕ್ಕೆ ಅವನು ಆರಿಸಿಕೊಳ್ಳುತ್ತಿದ್ದ ಸಮಯ ಕೂಡಾ ವಿಶಿಷ್ಟವಾಗಿರುತ್ತಿತ್ತು. ಸಂಜೆಯ ಪಾನೀಯ ಧ್ಯಾನದ ಹೊತ್ತು ಇಲ್ಲವೇ ಬೆಳಗ್ಗಿನ ಕಲಿಕೆಯ ಸಮಯ ಅಥವಾ ಎಲ್ಲಾ ಶಿಷ್ಯರೂ ಒಟ್ಟಾಗಿರುವ ಹೊತ್ತಿನಲ್ಲಿ ಇಂಥ ಪ್ರಶ್ನೆಗಳು ಅವನ ಬಾಯಿಂದ ಹೊರಬರುತ್ತಿದ್ದವು. ಈ ಪ್ರಶ್ನೆಗಳಿಗೆ ರಾ-ಉತ್ತರಿಸುತ್ತಾಳೆ ಎಂಬ ಖಾತರಿಯೇನೂ ಇರಲಿಲ್ಲ. ಆದರೆ ಆಗಾಗ ಇಂಥ ಪ್ರಶ್ನೆಗಳನ್ನು ಅವನಂತೂ ಕೇಳುತ್ತಿರುತ್ತಿದ್ದ. ಇಂಥದ್ದೇ ಒಂದು ಸಂದರ್ಭದಲ್ಲಿ ಅವನು ಕೇಳಿದ ಪ್ರಶ್ನೆ […]

ಸಾಇಲ್ ಹೇಳಿದ ಸಾವಿನ ರಹಸ್ಯ! : ರಾ-ಉಮ್ ಕಥೆಗಳು

ವಾ-ಐನ್ ಸಾಇಲ್‌ಗೆ ಸಾವಿನ ರಹಸ್ಯವನ್ನು ಅರಿತೇ ಬಿಡಬೇಕು ಎಂಬ ಹುಕಿ ಹುಟ್ಟಿತು. ರಾ-ಉಮ್‌ಳನ್ನು ಕೇಳಿದರೆ ಅವಳು ನಿಗೂಢವಾಗಿ ನಕ್ಕು, “ಅದು ಅರಿಯಬೇಕಾದ ವಿದ್ಯೆ. ಹೇಳಿಕೊಡುವುದಲ್ಲ” ಎಂದಳು. ಅವನೂ ರಾ-ಉಮ್ ಶಿಷ್ಯನಲ್ಲವೇ? ಅರಿವಿನ ಅನ್ವೇಷಣೆಗೆ ಹೊರಟೇ ಬಿಟ್ಟ. ಸಾವಿನ ರಹಸ್ಯ ಹುಡುಕುವ ಯಾತ್ರೆಯಲ್ಲಿ ಅವನು ಅದೆಷ್ಟೋ ಮಂದಿಯನ್ನು ಕಂಡ. ಸಾವನ್ನು ಜಯಿಸಿ ಬಂದವರೆಂದು ಪ್ರಸಿದ್ಧರಾದ ಹಲವರನ್ನು ಭೇಟಿಯಾದ. ಅವನಿಗೆ ಯಾತ್ರೆಯಿನ್ನೂ ಅಪೂರ್ಣ ಎನಿಸುತ್ತಿತ್ತು. ಆದರೆ ಆಶ್ರಮ ಅವನನ್ನು ತೀವ್ರವಾಗಿ ಸೆಳೆಯಿತು. ನೇರವಾಗಿ ಆಶ್ರಮಕ್ಕೆ ಹಿಂದಿರುಗಿದ. ಆಶ್ರಮದಲ್ಲಿ ಎಲ್ಲವೂ ಎಂದಿನಂತೆ […]

ಪಶ್ಚಿಮದ ಜ್ಞಾನಿಗೆ ಮಹಾಯೋಗಿನಿ ರಾ-ಉಮ್ ಪ್ರಶ್ನೆ

: ಯಾದಿರಾ ರಾ-ಉಮ್ ತನ್ನದೇ ಆದ ಆಶ್ರಮವನ್ನು ಆರಂಭಿಸುವ ಮುನ್ನ ಏನು ಮಾಡುತ್ತಿದ್ದಳು ಎಂಬುದಕ್ಕೆ ಸಂಬಂಧಿಸಿದ ವಿವರಗಳು ಹೆಚ್ಚೇನೂ ಲಭ್ಯವಿಲ್ಲ. ಆದರೆ ಅವಳು ಮಹಾಯೋಗಿನಿಯೊಬ್ಬಳ ಆಶ್ರಮದಲ್ಲಿ ಇದ್ದದ್ದಂತೂ ನಿಜ. ತನ್ನ ಶಿಷ್ಯತ್ವದ ದಿನಗಳನ್ನು ಅವಳೇ ಹೇಳಿಕೊಂಡದ್ದಿದೆ. ರಾ-ಉಮ್‌ನ ಗುರುವಾಗಿದ್ದ ಆ ಯೋಗಿನಿ ಪಾಠವನ್ನೇ ಮಾಡುತ್ತಿರಲಿಲ್ಲವಂತೆ. ಅಂತೇವಾಸಿಯಾಗಿ ಅವಳ ಜೊತೆ ಬದುಕುವುದೇ ಕಲಿಕೆಯಾಗಿತ್ತಂತೆ. ಒಂದು ದಿನ ಆ ಮಹಾಯೋಗಿನಿಯ ಆಶ್ರಮಕ್ಕೆ ಪಶ್ಚಿಮದ ಪ್ರಖ್ಯಾತ ಸಾಧುವೊಬ್ಬರು ಬಂದರು. ಜಗತ್ತಿನ ಎಲ್ಲ ಆಗುಹೋಗುಗಳನ್ನೂ ಲೌಕಿಕ ದೃಷ್ಟಿಯಿಂದಲೇ ಗ್ರಹಿಸಿ ವಿವರಿಸಲು ಸಾಧ್ಯ ಎಂಬುದು […]

ಮಹಾಯೋಗಿನಿ ರಾ-ಉಮ್ ಳ ಕನ್ನಡಿ ಧ್ಯಾನದ ರಹಸ್ಯ

: ಯಾದಿರಾ ಮರುಭೂಮಿಯ ಮಹಾ ಯೋಗಿನಿ ರಾ-ಉಮ್‌ ಸೌಂದರ್ಯವತಿಯೂ ಹೌದು. ಅವಳ ಅರಿವಿನ ಸೌಂದರ್ಯದ ಬಗ್ಗೆ ಸಾಕಷ್ಟು ವಿವರಗಳು ಶಿಷ್ಯರ ಮಾತುಗಳಲ್ಲಿ ಸಿಗುತ್ತವೆ. ಆದರೆ ಅವಳ ದೇಹ ಸೌಂದರ್ಯದ ಬಗ್ಗೆ ಅಷ್ಟೊಂದು ಉಲ್ಲೇಖಗಳು ಸಿಗುವುದಿಲ್ಲ. ಈ ಬಗ್ಗೆ ವಾ-ಐನ್ ಸಾಇಲ್ ಹೇಳಿದ ಕುತೂಹಲಕಾರಿ ಕಥೆಯೊಂದಿದೆ. ರಾ-ಉಮ್ ಗಂಟೆಗಟ್ಟಲೆ ಕನ್ನಡಿಯ ಎದುರು ನಿಂತಿರುತ್ತಿದ್ದ ಕಾಲವೊಂದಿತ್ತಂತೆ. ಕನ್ನಡಿಯ ಎದುರು ನಿಂತು ತನ್ನನ್ನು ತಾನೇ ನೋಡಿಕೊಳ್ಳುತ್ತಿದ್ದ ಅವಳ ಬಳಿ ಪ್ರಸಾದನ ಸಾಧನಗಳೇನೂ ಇರುತ್ತಿರಲಿಲ್ಲ. ಆದರೂ ಅವಳು ಕನ್ನಡಿಯೆದುರು ನಿಂತು ಏನು ಮಾಡುತ್ತಿದ್ದಳು […]

ದೀಪದ ಕಂಬದೆತ್ತರಕ್ಕೆ ಹಾರಬಹುದೇ? : ರಾ-ಉಮ್ ಕಥೆಗಳು

~ ಯಾದಿರಾ ವಾ-ಐನ್-ಸಾಇಲ್ ಕೆಲ ಕಾಲ ರಾ-ಉಮ್ ಆಶ್ರಮದಿಂದ ದೂರವಾಗಿದ್ದ. ಇದಕ್ಕೆ ಕಾರಣ ಶಿಷ್ಯರೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದ್ದ ಪರಿವ್ರಾಜಕತ್ವ. ತಿರುಗಾಟದಲ್ಲಿದ್ದ ವಾ-ಐನ್ ಒಂದು ದಿನ ಹಲವು ಗರಡಿಯಾಳುಗಳು ಸಾಮು ಮಾಡುತ್ತಿದ್ದ ಸ್ಥಳವೊಂದಕ್ಕೆ ಬಂದ. ಎಲ್ಲರೂ ವ್ಯಾಯಾಮದಲ್ಲಿ ನಿರತರಾಗಿದ್ದರು. ವಾ-ಐನ್‌ನ ಉಡುಪು ಮತ್ತು ಗಡ್ಡವನ್ನು ಕಂಡು ಕಂಡ ಒಬ್ಬ ಗರಡಿಯಾಳಿಗೆ ಈತ ಯಾರೋ ದೊಡ್ಡ ಅನುಭಾವಿಯೇ ಇರಬೇಕು ಅನ್ನಿಸಿತು. ಅವನು ಹತ್ತಿರ ಬಂದು ಒಂದು ಪ್ರಶ್ನೆ ಕೇಳಿದ, ‘ಗುರುಗಳೇ ನಾನು ಹಲವು ದಿನಗಳಿಂದ ಜಿಗಿಯುವ ಅಭ್ಯಾಸ ಮಾಡುತ್ತಿದ್ದೇನೆ. ಹೀಗೇ […]

ಗುರುವಿನ ಗುಣ : ಯಾದಿರಾ ಹೇಳುವ ‘ರಾ-ಉಮ್’ ಕಥೆಗಳು

: ಯಾದಿರಾ ವಾ-ಐನ್-ಸಾಇಲ್ ಪೂರ್ವಾಶ್ರಮದಲ್ಲಿ ಮೂರ್ಖನಾಗಿದ್ದ ಎಂಬುದು ಆಶ್ರಮದಲ್ಲಿದ್ದ ಎಲ್ಲರಿಗೂ ತಿಳಿದಿದ್ದ ಸಂಗತಿ. ಇದನ್ನು ವಾ-ಐನ್ ಕೂಡಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ರಾ-ಉಮ್ ನ ಪ್ರೀತಿ ಪಾತ್ರ ಶಿಷ್ಯರಲ್ಲಿ ಒಬ್ಬನಾಗಿದ್ದ ಅವನ ಬಗ್ಗೆ ಇತರರಿಗೆ ಒಂದು ಬಗೆಯ ಅಸೂಯೆಯೂ ಇತ್ತು. ಕೆಲವರಂತೂ ವಾ-ಐನ್ ಈಗಲೂ ಮೂರ್ಖನೇ ಎಂದು ವಾದಿಸುತ್ತಿದ್ದರು. ಒಂದು ದಿನ ರಾ-ಉಮ್ ತನ್ನ ಶಿಷ್ಯರನ್ನೆಲ್ಲಾ ಕರೆದು ಗೂಢ ಮಂತ್ರವೊಂದನ್ನು ಬೋಧಿಸಿ “ಕಷ್ಟ ಕಾಲದಲ್ಲಿ ಇದನ್ನು ಪಠಿಸಿದರೆ ಅದು ತಕ್ಷಣವೇ ನಿವಾರಣೆಯಾಗುವುದು. ಇದು ಪರಿಣಾಮಕಾರಿಯಾಗಿ ಉಳಿಯಬೇಕೆಂದರೆ ಈ ಮಂತ್ರ […]

ದೇವರ ಮಹಿಮೆಯನ್ನು ನಿರಾಕರಿಸುವಷ್ಟು ದೊಡ್ಡ ತರ್ಕವಿದೆಯೇ?

~ ಯಾದಿರಾ ವಾ-ಐನ್-ಸಾಇಲ್‌ ಮತ್ತು ರಾ-ಉಮ್ ಯಾವತ್ತೂ ಏನನ್ನೂ ಚರ್ಚಿಸುತ್ತಿರಲಿಲ್ಲ. ಹಾಗೆ ನೋಡಿದರೆ ಮರುಭೂಮಿಯ ಮಹಾಯೋಗಿನಿಯ ಶಿಷ್ಯತ್ವ ಪಡೆದ ಆರಂಭದ ದಿನಗಳನ್ನು ಬಿಟ್ಟರೆ ವಾ-ಐನ್ ಸಾಇಲ್ ಪ್ರಶ್ನೆಗಳನ್ನೂ ಕೇಳುತ್ತಿರಲಿಲ್ಲ. ರಾ-ಉಮ್ ಮಾತುಗಳನ್ನು ಅದರ ನಿಜವಾದ ಅರ್ಥದಲ್ಲಿ ಶಿಷ್ಯರಿಗೆ ವಿವರಿಸುವ ಸಾಮರ್ಥ್ಯವಿದ್ದದ್ದು ವಾ-ಐನ್‌ಗೆ ಮಾತ್ರ ಎಂದು ಇತರ ಶಿಷ್ಯರು ಭಾವಿಸಿದ್ದರು. ತರ್ಕಶಾಸ್ತ್ರದಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದ ದಕ್ಷಿಣದ ಕಡೆಯವನೊಬ್ಬ ಆಗಷ್ಟೇ ರಾ-ಉಮ್ ಆಶ್ರಮಕ್ಕೆ ಸೇರಿದ್ದ. ಎಲ್ಲವನ್ನೂ ತಾರ್ಕಿಕವಾಗಿ ಸಾಬೀತು ಮಾಡುವುದು ಅವನಿಗೊಂದು ಗೀಳಾಗಿತ್ತು. ಸಂಜೆಯ ಧ್ಯಾನ ಪಾಠಕ್ಕಾಗಿ ರಾ-ಉಮ್ […]

ಪಾನೀಯದ ಬುರುಡೆಯನ್ನು ಖಾಲಿ ಮಾಡಿಯೇ ಯಾಕಿಡಬೇಕು?

ರಾ-ಉಮ್ ಆಶ್ರಮದಲ್ಲಿ ಒಂದು ಕಠಿಣ ನಿಯಮವಿತ್ತು. ಎಲ್ಲರೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಒಮ್ಮೆ ಬುರುಡೆಗೆ ಪಾನೀಯವನ್ನು ತುಂಬಿಸಿದರೆ, ಅದನ್ನು ಸಂಪೂರ್ಣವಾಗಿ ಮುಗಿಸಿದ ನಂತರವಷ್ಟೇ ಅದನ್ನು ಗೂಡಿನಲ್ಲಿ ಇಡಬಹುದಿತ್ತು. ಅಲ್ಲಿಯ ತನಕವೂ ಬುರುಡೆಯನ್ನು ಕಾಪಾಡುವುದು ಕಡ್ಡಾಯ. ಇದನ್ನು ಎಲ್ಲರೂ ಸಹಜವಾಗಿಯೇ ಮಾಡುತ್ತಿದ್ದುದರಿಂದ ಈ ನಿಯಮ ಯಾಕಿದೆ ಎಂಬ ಪ್ರಶ್ನೆಯನ್ನು ಯಾರೂ ಕೇಳಿರಲಿಲ್ಲ. ಉತ್ತರದ ಹಿಮ ಪ್ರದೇಶದ ಊರೊಂದರಿಂದ ಬಂದು ಆಶ್ರಮ ಸೇರಿದ್ದ ಶಿಷ್ಯನಿಗೆ ಈ ನಿಯಮವೇಕಿದೆ ಎಂದು ಅರ್ಥವಾಗಿರಲಿಲ್ಲ. ಉಳಿದವರು ಮಾಡುವುದನ್ನು ನೋಡಿ ತಾನೂ ಅದನ್ನು ಅನುಸರಿಸಿದ. ಆದರೆ […]

ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?

~ ಯಾದಿರಾ ರಾ-ಉಮ್ ಎದುರು ಪ್ರಶ್ನೆಗಳನ್ನಿಡುವುದೆಂದರೆ ಶಿಷ್ಯರಿಗೆ ಬಹಳ ಇಷ್ಟ. ಗಂಭೀರ ಜಿಜ್ಞಾಸೆಯ ಲೇಪ ಹಚ್ಚಿಕೊಂಡು ಬರುವ ಪ್ರಶ್ನೆಗಳ ಮೂರ್ಖ ಆಯಾಮವನ್ನು ಅನಾವರಣಗೊಳಿಸುವ ಶಕ್ತಿ ರಾ-ಉಮ್‌ಗೆ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಮೂರ್ಖ ಪ್ರಶ್ನೆ ಎಂದು ಎಲ್ಲರೂ ಭಾವಿಸಿದ್ದ ಪ್ರಶ್ನೆಯಲ್ಲಿರುವ ಗಂಭೀರ ಜಿಜ್ಞಾಸೆಯನ್ನು ಗುರುತಿಸಿ ಉತ್ತರಿಸುವ ಸೂಕ್ಷ್ಮ ಒಳನೋಟವೂ ಆಕೆಗಿತ್ತು. ಸಂಜೆಯ ಹೊತ್ತಿನ ಪ್ರಶ್ನೋತ್ತರದಲ್ಲಿ ಹೊಸತಾಗಿ ಆಶ್ರಮ ಸೇರಿದ್ದ ವಿದ್ಯಾರ್ಥಿ ಒಂದು ಪ್ರಶ್ನೆ ಎತ್ತಿದ. ‘ಮನುಷ್ಯನಿಗೆ ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?’ ರಾ-ಉಮ್ ಪಾನೀಯದ […]

ವಾ-ಐನ್-ಸಾಇಲ್’ನ ಕುತೂಹಲ ಮತ್ತು ಗುರುವಿನಂಥ ವಿದ್ಯಾರ್ಥಿಯ ವಿನಯ

ರಾ-ಉಮ್ ಆಶ್ರಮಕ್ಕೆ ಅನೇಕ ಹಳೆಯ ವಿದ್ಯಾರ್ಥಿಗಳು ಮತ್ತೆ ಮತ್ತೆ ಬರುತ್ತಿದ್ದರು. ಇವರಲ್ಲಿ ಕೆಲವರು ಆಗಲೇ ಗುರುಗಳಾಗಿ ಹೆಸರು ಮಾಡಿದ್ದರು. ಆದರೂ ಅವರು ಆಗೀಗ ಮತ್ತೆ ಆಶ್ರಮಕ್ಕೆ ಬಂದು ಶಿಷ್ಯರಾಗಿ ಕೆಲಕಾಲ ಕಳೆಯುತ್ತಿದ್ದರು. ಹೀಗೆ ಬರುತ್ತಿದ್ದವರಲ್ಲಿ ಬಹುತೇಕ ರಾ-ಉಮ್‌ಳಷ್ಟೇ ಪ್ರಾಯವಿದ್ದ ಒಬ್ಬರಿದ್ದರು. ರಾ-ಉಮ್ ಕೂಡಾ ಇವರನ್ನು ಬಹಳ ಗೌರವದಿಂದ ಕಾಣುತ್ತಿದ್ದಳು. ಅನೇಕ ಹಳೆಯ ವಿದ್ಯಾರ್ಥಿಗಳೂ ಈ ವ್ಯಕ್ತಿಯನ್ನು ಗುರುವೆಂದೇ ಪರಿಗಣಿಸುತ್ತಿದ್ದರು. ಅವರಿಗೆ ಪೂರ್ವದ ಯಾವುದೋ ದ್ವೀಪದಲ್ಲಿ ಆಶ್ರಮವಿತ್ತು. ವಾ-ಐನ್-ಸಾಇಲ್‌ಗೆ ಈ ವ್ಯಕ್ತಿಯ ಬಗ್ಗೆ ಬಹಳ ಕುತೂಹಲ. ಒಂದು ದಿನ ಸಂಜೆಯ […]