ಕುರಾನ್ ಹೇಳುತ್ತದೆ…. : ಅರಳಿಮರ Poster

ಮೂಲತಃ ಧರ್ಮಗಳು ಬೋಧಿಸುವುದು ಬದುಕನ್ನು. ಮತ್ತು ಬದುಕು ಸಾಮರಸ್ಯದ ಮೊತ್ತ. ಹಾಗೆಯೇ ಕುರಾನ್ ಕೂಡಾ  “ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ (109.6)” ಎನ್ನುವ ಮೂಲಕ  ಸಹಿಷ್ಣುತೆಯನ್ನು, ಸಾಮರಸ್ಯವನ್ನು ಬೋಧಿಸಿದೆ.  “ಪ್ರತಿಯೊಬ್ಬನಿಗೂ ಒಂದು ನಿಯ, ಮತ್ತು ಮಾರ್ಗ ನೀಡಲಾಗಿದೆ. ದೇವರು ಇಷ್ಟಪಟ್ಟಿದ್ದರೆ ನಿಮ್ಮೆಲ್ಲರನ್ನೂ ಒಂದೇ ರೀತಿಯವರನ್ನಾಗಿ (ಒಂದೇ ಮಾರ್ಗಾವಲಂಬಿಗಳನ್ನಾಗಿ) ಮಾಡಬಹುದಿತ್ತು. ಆದರೆ ಅವನು ಬೇರೆ ರೀತಿಯಾಗಿಯೇ ಮಾಡಿರುವನು. ನಿಮಗೆ ಪ್ರತ್ಯೇಕವಾಗಿ ಯಾವುದನ್ನು ನೀಡಲಾಗಿದೆಯೋ ಅದೇ ಮಾರ್ಗದಲ್ಲಿಯೇ ನೀವು ಸತ್ಕಾರ್ಯದಲ್ಲಿ ಮುಂದುವರಿಯಬೇಕೆಂಬುದು ಅವನ ಇಚ್ಛೆ. ನೀವು ಭಗವಂತನೆಡೆಗೆ […]

ಸಂಪತ್ತು ಪಡೆಯಲು ಹಾವಿಗೆ ಮುತ್ತಿಡಲೇಬೇಕು ~ ರೂಮಿ ಪದ್ಯ

ಮಿಂಚುವ, ಪರಿಪಕ್ವವಾಗುವ ಆಸೆ ಯಾವ ಗಂಡಿಗೆ ಅಥವಾ ಹೆಣ್ಣಿಗೆ ಇರುವುದಿಲ್ಲ ಹೇಳಿ? ಮತ್ತ್ಯಾಕೆ ಈ ತಗಾದೆ ಕಠಿಣವಾಗಿ ನಡೆಸಿಕೊಂಡಿದ್ದರ ಬಗ್ಗೆ? ಪ್ರೇಮ, ಕೋರ್ಟಿನಲ್ಲಿ ನಮೂದಾದ ದಾವೆ ಎಲ್ಲದಕ್ಕೂ ಸಾಕ್ಷಿ ಬೇಕು ವ್ಯಾಜ್ಯ ನಿರ್ಣಯ ಮಾಡಬೇಕಾದರೆ ಜಡ್ಜ್ ಗೆ ಎಲ್ಲ ವಿವರ ಗೊತ್ತಾಗಲೇಬೇಕು. ಗುಪ್ತ ನಿಧಿಯ ಸುತ್ತ ಹಾವು ಓಡಾಡಿಕೊಂಡಿರುವ ಬಗ್ಗೆ ನಿಮಗೂ ಗೊತ್ತಿರಬೇಕು. ಸಂಪತ್ತು ಪಡೆಯಲು ನೀವು ಹಾವಿಗೆ ಮುತ್ತಿಡಲೇಬೇಕು. ಮೂಲ : ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಮ್ಮ ಬೇಕುಗಳ ಬಗ್ಗೆ ಪುಟ್ಟ ಸಂಶಯ ಇರಲೇಬೇಕು ~ ರೂಮಿ ಪದ್ಯ

ಯಾರು ಅವರು ನನ್ನ ಆಟ ಕೆಡಿಸುತ್ತಿರುವವರು? ನಾನು ಬಲಕ್ಕೆ ಬಿಟ್ಟ ಬಾಣ ಎಡಕ್ಕೆ ಹೇಗೆ ಬಂತು? ಜಿಂಕೆಯ ಬೆನ್ನುಹತ್ತಿದವನ ಹಂದಿ ಯಾಕೆ ಅಟ್ಟಿಸಿಕೊಂಡು ಬಂತು? ಅಂಗಡಿಗೆ ಹೊರಟವನ ಕಾಲುಗಳನ್ನ ಜೈಲಿನತ್ತ ಹೊರಳಿಸಿದವರು ಯಾರು? ಕೆಡವಲಿಕ್ಕೆ ಎಂದು ತೆರೆದ ಗುಂಡಿಯಲ್ಲಿ ನಾನೇ ಜಾರಿ ಬಿದ್ದದ್ದು ಹೇಗೆ? ಯಾರಿಗೋ ನಮ್ಮ ಆಟ ಹಿಡಿಸುತ್ತಿಲ್ಲ. ಅದಕ್ಕೇ, ನಮ್ಮ ಬೇಕುಗಳ ಬಗ್ಗೆ ನಮಗೆ ಪುಟ್ಟ ಸಂಶಯ ಇರಲೇಬೇಕು. ಮೂಲ : ಜಲಾಲುದ್ದಿನ್ ರೂಮಿ | ಕನ್ನಡಕ್ಕೆ : ಚಿದಂಬರ ನರೇಂದ್ರ

ರೂಮಿ ಹೇಳಿದ ಕಥೆ : Tea time story

ಆ ಪುಡಿಗಳ್ಳ ಬೆಳಗಿನಿಂದ ಬಹಳ ಖುಷಿಯಾಗಿದ್ದ. ಅವನು ಹಾವಾಡಿಗನ ಬುಟ್ಟಿಯಿಂದ ಭಾರೀ ಹಾವೊಂದನ್ನು ಕದ್ದು ತಂದಿದ್ದು, ತನ್ನ ನಸೀಬು ಖುಲಾಯಿತೆಂದು ಸಂಭ್ರಮ ಪಡುತ್ತಿದ್ದ. ಅದು, ಹಾವಾಡಿಗ ಹಿಡಿದ ಮೊದಲ ಹಾವಾಗಿತ್ತು. ಅದರ ವಿಷವೆಷ್ಟಿದೆ? ಅದೆಷ್ಟು ತೀಕ್ಷ್ಣ? ಯಾವುದೂ ಅವನಿಗೆ ಗೊತ್ತಿಲ್ಲ. ಖುದ್ದು ಹಾವಾಡಿಗನಿಗೂ ಅದರ ಮಾಹಿತಿ ಇರಲಿಲ್ಲ. ಅತ್ತ ಕಳ್ಳ ಖುಷಿಯಾಗಿದ್ದರೆ, ಇತ್ತ ಹಾವಾಡಿಗ ದುಃಖಿಸುತ್ತಿದ್ದ. ಅದೊಂದು ಉದ್ದನೆಯ, ಭಾರೀ ಗಾತ್ರದ ಹಾವಾಗಿತ್ತು. ಅದನ್ನು ಮಾರಿದರೆ ಒಳ್ಳೆಯ ಮೊತ್ತವೇ ಸಿಗುತ್ತಿತ್ತು. ಎಂಥಾ ಮಾಲು ಕದ್ದುಹೋಯಿತೆಂದು ಅವನು ಸಂಕಟಪಡುತ್ತಿದ್ದ. […]

ಕೊಳಲೂದಲು ಬೇಕು ಕಿಚ್ಚು : ಅರಳಿಮರ POSTER

ಕೊಳಲೂದಲು ಉಸಿರು ಬೇಕಿಲ್ಲ, ಬೇಕಿರುವುದು ಕಿಚ್ಚು.  ಎದೆಯೊಳಗೆ ಕಿಡಿಯಿಲ್ಲದೆ, ನಾದ ಹೊಮ್ಮುವುದು ಹೇಗೆ?                         ~ ರೂಮಿ   ಕೊಳಲಿನ ರಂಧ್ರಗಳಲ್ಲಿ ಸುಳಿದಾಡುವ ಗಾಳಿ ನಾದ ಹೊಮ್ಮಿಸುತ್ತದೆ. ಇದು ವಿಜ್ಞಾನ. ಕೊಳಲೂದಲು ಬೇಕಿರುವುದು ಕಿಚ್ಚು ಅನ್ನುವುದು ಆತ್ಮಜ್ಞಾನ.  ಕಿಚ್ಚು ಕೂಡಾ ಗಾಳಿಯಿಂದಲೇ ಉರಿಯುವುದು. ಗಾಳಿ ಇಲ್ಲದೆ ಬೆಂಕಿ ಹೊತ್ತಿಕೊಳ್ಳುವುದೇ ಇಲ್ಲ. ಆಮ್ಲಜನಕವಿಲ್ಲದೆ ಬೆಂಕಿಯ ಕಿಡಿಯೂ ಹೊತ್ತಿಕೊಳ್ಳದು ಅಲ್ಲವೆ?  ರೂಮಿ, ‘ಕೊಳಲೂದಲು ಉಸಿರು […]

ಕಾಲ ಎಲ್ಲ ಗಾಯಗಳನ್ನು ಮಾಯಿಸುತ್ತದೆ….

ಗಾಯವೂ ಒಂದು ಬೆಳಕಿಂಡಿ ~ ರೂಮಿ : ಸಾಕಿ ನಮ್ಮ ಪ್ರೀತಿ ಪಾತ್ರರು ಅದ್ಯಾವುದೋ ಘಳಿಗೆಯಲ್ಲಿ ಜಗಳವಾಡಿ, ಅತ್ಯಂತ ಆಳದ ಗಾಯ ನಮ್ಮೆದೆಯಲ್ಲಿ ಮೂಡಿಸಿ ಹೋಗಿರುತ್ತಾರೆ ಎಂದಿಟ್ಟುಕೊಳ್ಳೋಣ. ಇಂತಹ ಸಂದರ್ಭಗಳಲ್ಲಿ ನಾವು ಅತ್ಯಂತ ದುಃಖಿತರಾಗಿ ಬಿಡುತ್ತೇವೆ. ಇನ್ನು ಕೆಲವರು ಮಾನಸಿಕ ಖಿನ್ನತೆಗೂ ಒಳಗಾಗುವುದುಂಟು. ಆದರೆ, ಒಮ್ಮೆ ಆ ಗಾಯವನ್ನು; ಜಗಳವಾಡಿದ ಸಂಗತಿ ಮತ್ತು ಸಂದರ್ಭವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಅದು ಯಾಕೆ ಮತ್ತು ಹೇಗೆ ಆಯಿತು ಎಂದು ಚಿಂತಿಸಿ. ಅಲ್ಲಿ ನಮಗೆ ಸಂಬಂಧಗಳ ಹೊಸ ತಿಳಿವು ಸಿಕ್ಕೇ […]

ಸೂಫಿ ಪರಂಪರೆ : ಪ್ರೇಮದ ಹಾದಿಯ ಆತ್ಮಾನುಭೂತಿ

ಸೂಫಿ ಪರಂಪರೆ ಪ್ರೇಮದ ಹಾದಿಯ ಆತ್ಮಾನುಭೂತಿಯನ್ನು ಮುಖ್ಯ ಕೇಂದ್ರವಾಗಿಟ್ಟುಕೊಂಡು ಬೆಳೆದದ್ದು. ಯಾರು ಪ್ರೇಮದಲ್ಲಿ ಮತ್ತನಾಗಿರುತ್ತಾನೋ ಅವನೇ ಸೂಫಿ. ಎದೆಯಲ್ಲಿ ಪ್ರೇಮ, ಅದನ್ನು ಅಭಿವ್ಯಕ್ತಿಸುವ ಕಾವ್ಯಗಳನ್ನು ಬರೆಯದ ಯಾರೊಬ್ಬರೂ ಈ ಪರಂಪರೆಯಲ್ಲಿ ಕಾಣಸಿಗುವುದಿಲ್ಲ! ಅಷ್ಟರಮಟ್ಟಿಗೆ ಸೂಫಿಗಳ ಅಧ್ಯಾತ್ಮ ಪ್ರೇಮ ಮತ್ತು ಕಾವ್ಯಗಳೊಂದಿಗೆ ಹೆಣೆದುಕೊಂಡಿದೆ ~ ಚೇತನಾ  “ಪ್ರಾಣ ನೀನು. ನಿನ್ನನ್ನು ಮನುಷ್ಯ ಎಂದೇಕೆ ಅಂದುಕೊಂಡಿದ್ದೀಯ? ನೀನು ನೀರು. ಆದರೆ ಗಡಿಗೆ ಎಂದುಕೊಂಡುಬಿಟ್ಟಿದ್ದೀಯ. ಬೇರೆ ವಸ್ತುಗಳು ಹುಡುಕುವುದರಿಂದ ಸಿಗುತ್ತವೆ. ಆ ಪ್ರಿಯತಮನ ವಿಷಯದಲ್ಲಿ ಒಂದು ಸೋಜಿಗ. ಅವನನ್ನು ಪಡೆಯುವ ಮುನ್ನ […]

ಸಂತರು ತಲೆ ಬಗ್ಗಿಸುವುದು ಇಲ್ಲಿ ಮಾತ್ರ… ~ ರೂಮಿ ಪದ್ಯ

ಧರ್ಮ ಮತ್ತು ದ್ರೋಹದ ಆಚೆಗೆ ಒಂದು ಬಯಲು ಇದೆ. ಪ್ರೇಮ, ಮನೆ ಕಟ್ಟಿಕೊಂಡಿರುವುದು ಈ ಬಯಲಿನ ನಟ್ಟ ನಡುವೆ. ಸಂತರು ತಲೆ ಬಗ್ಗಿಸುವುದು ಇಲ್ಲಿ ಮಾತ್ರ; ನಂಬಿಗಸ್ತರಿಗೆ ಮತ್ತು ದ್ರೋಹಿಗಳಿಗೆ ಇಲ್ಲಿ ಜಾಗ ಇಲ್ಲ ~ ಜಲಾಲುದ್ದೀನ್ ರೂಮಿ |ಅನುವಾದ : ಚಿದಂಬರ ನರೇಂದ್ರ