ಶ್ರೀ ಲಕ್ಷ್ಮಿಯ ಕೃಪಾಕಟಾಕ್ಷ ದೊರಕಿಸುವ ಕನಕಧಾರಾ ಸ್ತೋತ್ರ

ಭಾಗ್ಯವಂತರ ಮನೆಗಳಲ್ಲಿ ಐಶ್ವರ್ಯ ಸ್ವರೂಪಳಾಗಿ, ಜ್ಞಾನಿಗಳ ಅಂತರಂಗದಲ್ಲಿ ಬುದ್ಧಿಸ್ವರೂಪಳಾಗಿ, ಭಕ್ತರ ಹೃದಯದಲ್ಲಿ ಶ್ರದ್ಧಾ ಸ್ವರೂಪಳಾಗಿ, ಮೋಕ್ಷೇಚ್ಛುಗಳ ಆಂತರ್ಯದಲ್ಲಿ ಮುಕ್ತಿಸ್ವರೂಪಳಾಗಿ ರಾರಾಜಿಸುತ್ತಿರುವ ಮಹಾಲಕ್ಷ್ಮಿಯ ಕರುಣಾ ಕಟಾಕ್ಷ ಶ್ರೀ ಶಂಕರಾಚಾರ್ಯರ ಕೃಪಾಶೀರ್ವಾದದಿಂದ ಚಿನ್ನದ ಮಳೆಯನ್ನೇ ಕರೆದ ಮಹಾಸ್ತೋತ್ರವೇ “ಕನಕಧಾರಾ ಸ್ತೋತ್ರ”.