ಶ್ರೀ ಶಂಕರಾಚಾರ್ಯರು ರಚಿಸಿದ ಶ್ರೀಲಲಿತಾ ಪಂಚರತ್ನ ಸ್ತೋತ್ರದ ಮೂಲಪಾಠ ಮತ್ತು ಸರಳ ಕನ್ನಡಾನುವಾದ ಇಲ್ಲಿದೆ…. ಪ್ರಾತಃ ಸ್ಮರಾಮಿ ಲಲಿತಾ ವದನಾರವಿಂದಂ ಬಿಂಬಾಧರಂ ಪೃಥುಲ ಮೌಕ್ತಿಕ ಶೋಭಿನಾಸಮ್ | ಆಕರ್ಣ ಧೀರ್ಘ ನಯನಂ ಮಣಿಕುಂಡಲಾಢ್ಯಂ ಮಂದಸ್ಮಿತಮ್ ಮೃಗಮದೋಜ್ವಲ ಭಾಲದೇಶಮ್ ||1|| ಭಾವಾರ್ಥ : ತೊಂಡೆಯ ಹಣ್ಣನ್ನು ಹೋಲುವ ತುಟಿ; ದೊಡ್ಡ ಮುತ್ತಿನ ಮೂಗುತಿಯಿಂದ ಕಂಗೊಳಿಸುತ್ತಿರುವ ನಾಸಿಕ; ಕಿವಿಯತನಕ ವಿಸ್ತರಿಸಿರುವ ವಿಶಾಲವಾಗಿರುವ ನಯನಗಳು; ಮಣಿಯ ಕರ್ಣಕುಂಡಲಗಳು; ಮಂದಹಾಸವನ್ನು ಬೀರುತ್ತಿರುವ ತುಟಿಗಳು; ಹಾಗೂ ಹಣೆಯಲ್ಲಿ ಉಜ್ವಲವಾಗಿ ಬೆಳಗುತ್ತಿರುವ ಕಸ್ತೂರಿಯ ತಿಲಕ; ಇವುಗಳಿಂದ […]