ಬದುಕನ್ನು ಉನ್ನತಸ್ತರಕ್ಕೆ ಕೊಂಡೊಯ್ಯುವ ಲಲಿತಾ ಸಹಸ್ರ ನಾಮವೆಂಬ ಶಕ್ತಿ ಸಂಪುಟ

ಶ್ರೀ ಲಲಿತಾ ಸಹಸ್ರನಾಮವು ‘ಸ್ತುತಿ’ ವರ್ಗಕ್ಕೆ ಸೇರಿದ ಸಾಹಿತ್ಯ. ಜಗನ್ಮಾತೆ ಶ್ರಿ ಲಲಿತೆಯನ್ನು ಅದು ಸೊಗಸಾಗಿ ಪ್ರೀತಿ ತುಂಬಿ ಕೊಂಡಾಡುತ್ತದೆ. ಅತಿ ಪ್ರಭಾವಶಾಲಿಯಾದ ಈ ನಾಮ ಪಾರಾಯಣವೇ ಲೌಕಿಕವಾದ ಎಲ್ಲವನ್ನು ಕೊಡುವುದರ ಜೊತೆ ಪರಬ್ರಹ್ಮ ಸಖ್ಯವನ್ನು ನೀಡುತ್ತದೆ. ಬಾಹ್ಯ ಪೂಜೆ ಮತ್ತು ಅಂತರ್ಪೂಜೆಗಳಿಗೆ ಹೊಂದಿ ಕೊಳ್ಳುವಂತೆ ಈ ಸಹಸ್ರನಾಮವನ್ನು ರಚಿಸಲಾಗಿದೆ. ಶ್ರೀ ಚಕ್ರ ಮತ್ತು ದೀಪ ಪೂಜೆಗೆ ಈ ಸಹಸ್ರನಾಮವನ್ನು ಬಳಸಿ ಕೊಳ್ಳಬಹುದು. ಅಂತರಂಗದ ಧ್ಯಾನಕ್ಕೂ ಈ ಸಹಸ್ರನಾಮವನ್ನು ಬಳಸ ಬಹುದಾಗಿದೆ ~ ಡಾ.ಗೋಪಾಲ ಕೃಷ್ಣ ಕೊಳ್ತಾಯ.ಎ.ಜಿ. […]

ನಿಮ್ಮ ಮಗಳಿಗೆ ಲಲಿತಾ ಸಹಸ್ರನಾಮದಿಂದ ಹೆಸರು ಬೇಕೆ? ಇಲ್ಲಿದೆ ನೋಡಿ…

ನಾಮಕರಣದ ವೇಳೆ ತಮ್ಮ ಹೆಣ್ಣುಮಕ್ಕಳಿಗೆ ಲಲಿತಾ ಸಹಸ್ರನಾಮದಿಂದ ಹೆಸರು ಸೂಚಿಸಿ ಎಂದು ಅನೇಕರು ಕೇಳುತ್ತಾ ಇರುತ್ತಾರೆ. ಇಲ್ಲಿ ಲಲಿತಾಸಹಸ್ರಾನಮದಿಂದ ಆಯ್ದ ಕೆಲವು ಹೆಸರುಗಳನ್ನೂ, ಅವು ಲಲಿತಾ ಸಹಸ್ರನಾಮದಲ್ಲಿ ಎಷ್ಟನೇ ಹೆಸರು ಎಂಬುದನ್ನೂ ಇಲ್ಲಿ ನೀಡಲಾಗಿದೆ. ಇನ್ನೂ ಅನೇಕವಿದ್ದರೂ ಅಪರೂಪ ಅನ್ನಿಸಬಹುದಾದ ಮತ್ತು ಕಡಿಮೆ ಬಳಕೆಯ ಹೆಸರುಗಳನ್ನು ಇಲ್ಲಿ ನೀಡಿದ್ದೇವೆ.  ೧. ಶ್ರೀ ಮಾತಾ ೨೮. ಮಂದಸ್ಮಿತ ೦೦೬೨. ಕಾಮಾಕ್ಷಿ ೦೦೯೬. ಅಕುಲಾ ೦೧೧೨. ಭವಾನೀ ೦೧೨೨. ಶಾಂಭವೀ ೦೧೨೪. ಶರ್ವಾಣೀ ೦೧೨೭. ಶ್ರೀಕರೀ ೦೧೨೮. ಸಾಧ್ವೀ ೦೧೩೫. ನಿರ್ಮಲಾ […]