ಅಕ್ಕ, ಲಲ್ಲಾ, ರಾಬಿಯಾ… 3 ಪದ್ಯಗಳು

ಹೆಣ್ತನ ಸಹಜವಾಗಿ ಅಧ್ಯಾತ್ಮ ಪ್ರವೃತ್ತಿಯನ್ನು ಹೊಂದಿರುವಂಥದ್ದು. ಹೆಣ್ತನ ಅಂದರೆ ಹೆಣ್ಣಿನ ದೇಹವಲ್ಲ, ಹೆಣ್ಣಿನ ಭಾವ. ಆದ್ದರಿಂದಲೇ ಗಂಡು ಆಧ್ಯಾತ್ಮಿಕ ಸಾಧನೆ ಮಾಡಬೇಕೆಂದರೆ ಆತ ಹೆಣ್ತನವನ್ನು ರೂಢಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಹೆಣ್ಣು ಹೆಚ್ಚು ಕಷ್ಟವಿಲ್ಲದೆ ಸಹಜವಾಗಿ ತನ್ನ ಅಂತರಂಗವನ್ನು ಕಂಡುಕೊಂಡು ಸಾಧಕಿಯಾಗುತ್ತಾಳೆ. ಮಹಿಳಾ ದಿನದ ಪ್ರಯುಕ್ತ ಇಲ್ಲಿ ಮೂವರು ಅಧ್ಯಾತ್ಮ ಸಾಧಕಿಯರ ಚಿಕ್ಕ ರಚನೆಗಳನ್ನು ನೀಡಲಾಗಿದೆ…

ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು : Sufi Corner

“ಮನಸ್ಸಿನ ಕನ್ನಡಿ ಸ್ವಚ್ಛವಾಗಿರಬೇಕು. ಆಗ ನಾನಲ್ಲದೆ ಬೇರೆ ದೇವರಿಲ್ಲ ಎಂಬ ಸತ್ಯವು ಗೋಚರಿಸುತ್ತದೆ. ನಾನು ನೀನೆಂಬ ವ್ಯತ್ಯಾಸವೇ ಇಲ್ಲವಾಗುತ್ತದೆ. ಲೋಕವೇ ನಾನೆಂಬ ಅರಿವಾಗುತ್ತದೆ” ಅನ್ನುತ್ತಾಳೆ ಲಲ್ಲಾ.

ಲಲ್ಲೇಶ್ವರಿ ಎನ್ನಿ, ಲಲ್ಲಾ ಅರೀಫಾ ಎನ್ನಿ; ಅವಳು ಎಲ್ಲೆಗಳ ಮೀರಿದವಳು….

ಶಿವಭಕ್ತೆ ಲಲ್ಲಾಳನ್ನು ಕಶ್ಮೀರದ ಹಿಂದೂಗಳು ಲಲ್ಲೇಶ್ವರಿ ಎಂದು ಆರಾಧಿಸಿದರೆ, ದೇವಧ್ಯಾನದಲ್ಲಿ ಸದಾ ಮತ್ತಳಾಗಿರುತ್ತದ್ದ ಅವಳನ್ನು ಮುಸ್ಲಿಮರು ಲಲ್ಲಾ ಅರೀಫಾ ಎಂದು ಆದರಿಸಿದರು. ಸೂಫಿ ಸಂತ ಬಬಾ ದಾವೂದ್ ಮಿಶ್ಕಾತಿ ಅವಳನ್ನು ಮಜನೂ – ಇ ಅಕೀಲಾ ಎಂದು ಕರೆದ ~ ಅಲಾವಿಕಾ ಆಧ್ಯಾತ್ಮಿಕ ಜಗತ್ತಿನಲ್ಲಿ ಹೊಳೆದ ತಾರೆಗಳ ಲೆಕ್ಕ ಇಟ್ಟವರಿಲ್ಲ. ಹಾಗೆ ಲೆಕ್ಕವಿಟ್ಟು ಎಷ್ಟು ಹೆಸರಲ್ಲಿ ಕರೆದರೂ ಆ ಎಲ್ಲ ತಾರೆಗಳ ಬೆಳಕು ಒಂದೇ. ಅಪರಿಮಿತಿ ಜ್ಞಾನ, ಅಮೃತೋಪಮ ಪ್ರೇಮ. ಇಂಥಾ ತಾರೆಗಳಲ್ಲಿ ಒಬ್ಬಳು ಕಶ್ಮೀರದ ಲಲ್ಲಾ. […]

ಲಲ್ಲಾ ಪದ್ಯ : ದುಃಖವನೂ ಬಲ್ಲೆ ನಾನು, ದೇವರನೂ ಬಲ್ಲೆ!

ಹೆಸರು ಕೀರ್ತಿಗಳ ಹಂಗಿಲ್ಲ ನನಗೆ, ಸುಖ ಸಂಪದವೂ ಬೇಕಿಲ್ಲ; ಲಾಭವರಸಿ ಬಂದೆನೆಂದು ತಿಳಿಯದಿರಿ ಮತ್ತೆ! ತುತ್ತಿನ ತೂಕ ಬಲ್ಲೆ ನಾನು, ಹಸಿವೆಯನೂ ಬಲ್ಲೆ. ದುಃಖವನೂ ಬಲ್ಲೆ; ನಾನು ದೇವರನೂ ಬಲ್ಲೆ. ಮೂಲ ಪದ್ಯ : ಲಾಲ್ ಡೇಡ್ | ಕನ್ನಡಕ್ಕೆ : ಚೇತನಾ ತೀರ್ಥಹಳ್ಳಿ